ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲೂ ಸಕ್ರಿಯರಾಗಿದ್ದ ಚಂದು ಗೌಡ ಮನೆಯಲ್ಲಿ ಸಂತಸ ಮನೆ ಮಾಡಿದೆ. ಹೊಸ ಅತಿಥಿಯ ಆಗಮನದ ಖುಷಿಯಲ್ಲಿದ್ದಾರೆ. ಇದೇ ಖುಷಿಯಲ್ಲಿ ಪತ್ನಿಯ ಸೀಮಂತ ಶಾಸ್ತ್ರ ಸಂಭ್ರಮದ ಫೋಟೋ ಹಂಚಿಕೊಂಡಿದ್ದಾರೆ.
ಟಿವಿ ಲೋಕದ ಖ್ಯಾತ ನಟ ಚಂದು ಗೌಡ ಶಾಲಿನಿ ನಾರಾಯಣ್ ಅವರನ್ನು ಅಕ್ಟೋಬರ್ 29ರಂದು, 2020ರಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದರು. ಇದೀಗ ಮನೆಗೆ ಹೊಸ ಅತಿಥಿಯನ್ನ ಬರಮಾಡಿಕೊಳ್ಳುವ ಖುಷಿಯಲ್ಲಿದ್ದಾರೆ. ಹೌದು, ಚಂದು ಪತ್ನಿ ಶಾಲಿನಿ ಈಗ ತುಂಬ ಗರ್ಭಿಣಿಯಾಗಿದ್ದು, ಸೀಮಂತ ಶಾಸ್ತ್ರ ಬಹಳ ಅದ್ದೂರಿಯಾಗಿ ನೆರವೇರಿದೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ನೆಚ್ಚಿನ ಜೋಡಿಗೆ ಅಭಿಮಾನಿಗಳು ಶುಭಹಾರೈಸುತ್ತಿದ್ದಾರೆ. ಇದನ್ನೂ ಓದಿ:‘ಪುಷ್ಪಾ 2’ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಪಾತ್ರ ಸಾಯುತ್ತಾ? ನಿರ್ಮಾಪಕ ಕೊಟ್ಟ ಸ್ಪಷ್ಟನೆ
ಇನ್ನು `ಲಕ್ಷ್ಮಿ ಬಾರಮ್ಮ’ ಖ್ಯಾತಿಯ ಚಂದು ಗೌಡ ಬೆಳ್ಳಿಪರದೆಯಲ್ಲೂ ಗುರುತಿಸಿಕೊಂಡಿರುವ ನಟ, `ಎಟಿಎಂ’, `ಕುಷ್ಕ’, `ಕೃಷ್ಣ ಗಾರ್ಮೆಟ್ಸ್’, ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರಸ್ತುತ ತೆಲುಗಿನ `ತ್ರಿನಯನಿ’ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ.
Live Tv