ಕಿರುತೆರೆ ನಟಿ ಶೋಭಿತಾ ಶಿವಣ್ಣ (Shobhitha Shivanna) ಅವರ ಇಂದು (ಡಿ.1) ಸೂಸೈಡ್ ಮಾಡಿಕೊಂಡಿದ್ದಾರೆ. ಗೀತಾ ಭಾರತಿ ಭಟ್ ಅವರು ಶೋಭಿತಾ ಕುರಿತು ಪ್ರತಿಕ್ರಿಯಿಸಿದ ಬೆನ್ನಲ್ಲೇ ನಟ ಚಂದು ಗೌಡ (Chandu Gowda) ಕೂಡ ‘ಪಬ್ಲಿಕ್ ಟಿವಿ’ಗೆ ರಿಯಾಕ್ಟ್ ಮಾಡಿದ್ದಾರೆ. ಅವರು ಆತ್ಮಹತ್ಯೆ ಸುದ್ದಿ ಅರಗಿಸಿಕೊಳ್ಳೋಕೆ ಆಗುತ್ತಿಲ್ಲ. ಯಾರೊಂದಿಗೂ ಅವರು ಕಷ್ಟಗಳ ಬಗ್ಗೆ ಹಂಚಿಕೊಳ್ಳುತ್ತಿರಲಿಲ್ಲ ಎಂದು ಚಂದು ಮಾತನಾಡಿದ್ದಾರೆ.
ನಾನು ಶೋಭಿತಾ ಜೊತೆ 2 ಸಿನಿಮಾ ಮಾಡಿದ್ದೇನೆ. ಬೆಳಗ್ಗೆ ಅವರ ಸಾವಿನ ಸುದ್ದಿ ಗೊತ್ತಾಯ್ತು. ಇನ್ನೂ ಈ ವಿಚಾರವನ್ನು ನನಗೆ ಅರಗಿಸಿಕೊಳ್ಳೋಕೆ ಆಗುತ್ತಿಲ್ಲ. ಅವರು ಸೂಸೈಡ್ ಮಾಡಿಕೊಳ್ಳುವಂತಹ ವ್ಯಕ್ತಿಯೇ ಅಲ್ಲ. ಜೀವನದಲ್ಲಿ ಅವರು ತುಂಬಾ ಕಷ್ಟ ನೋಡಿ ಬಂದಿದ್ದಾರೆ. ಕಷ್ಟಪಟ್ಟು ಒಂದು ಮನೆಯನ್ನು ಕಟ್ಟಿಸಿದರು ಶೋಭಿತಾ. ಆ ಮನೆಯಲ್ಲಿ ಅವರ ತಂದೆ ವಾಸ ಮಾಡಲಿಲ್ಲ ಎಂಬ ಬೇಜಾರು ಅವರಿಗಿತ್ತು. ಆ ವೇಳೆ ಅವರ ತಂದೆ ತೀರಿಕೊಂಡರು. ಇದನ್ನೂ ಓದಿ:ಆತ್ಮಹತ್ಯೆಗೆ ಶರಣಾದ ‘ಬ್ರಹ್ಮಗಂಟು’ ಸೀರಿಯಲ್ ನಟಿ ಶೋಭಿತಾ
ಅವರೊಂದಿಗೆ 2 ಸಿನಿಮಾ ಮಾಡಿದ್ದೀನಿ. ಜಾಕ್‌ಪಾಟ್ ಅನ್ನೋ ಸಿನಿಮಾ ಇನ್ನೂ ನಾಲ್ಕೈದು ತಿಂಗಳಿನಲ್ಲಿ ರಿಲೀಸ್ ಆಗಲಿದೆ. ಅವರ ಜೀವನ ಚೆನ್ನಾಗಿಯೇ ಹೋಗುತ್ತಿತ್ತು. ಆದರೆ ಅವರು ಸೂಸೈಡ್ ಮಾಡಿಕೊಂಡಿರುವುದಕ್ಕೆ ಕಾರಣನೇ ಸಿಗುತ್ತಿಲ್ಲ. ಅವರ ಸಾವಿನ ವಿಚಾರ ಅನುಮಾನ ಬರೋ ಹಾಗಿದೆ. ಸುಮಾರು ಪ್ರಶ್ನೆಗಳಿಗೆ ಉತ್ತರ ಬೇಕು ಎಂದು ಮಾತನಾಡಿದ್ದಾರೆ.
ಮದುವೆಯ ಬಳಿಕ ಅಷ್ಟೂ ಸಂಪರ್ಕ ಇರಲಿಲ್ಲ. ಅವರು ನನಗೆ 8 ವರ್ಷಗಳಿಂದ ಪರಿಚಯ, ಆದರೆ ಅವರ ಕಷ್ಟಗಳ ಬಗ್ಗೆ ಯಾರೊಂದಿಗೂ ಹಂಚಿಕೊಳ್ಳುತ್ತಿರಲಿಲ್ಲ. ದಿಢೀರ್ ಅಂತ ಯಾಕೆ ಈ ನಿರ್ಧಾರ ತೆಗೆದುಕೊಂಡರು ಗೊತ್ತಾಗುತ್ತಿಲ್ಲ ಎಂದು ಚಂದು ಗೌಡ ಭಾವುಕರಾಗಿದ್ದಾರೆ.
ಅಂದಹಾಗೆ, ‘ಬ್ರಹ್ಮಗಂಟು’ ಸೀರಿಯಲ್ ಸೇರಿದಂತೆ 12 ಸೀರಿಯಲ್‌ಗಳಲ್ಲಿ ಶೋಭಿತಾ ನಟಿಸಿದರು. ಜಾಕ್‌ಪಾಟ್, ವಂದನಾ, ಅಟೆಂಪ್ಟ್ ಟು ಮರ್ಡರ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.