ಬೆಂಗಳೂರು: ಚಂದ್ರಯಾನ-3 (Chandrayaan-3) ಸಕ್ಸಸ್ ಆಗ್ತಿದೆ, ನನ್ನ ಹುಟ್ಟುಹಬ್ಬದ ದಿನವೇ ಆಗ್ತಿರೋದು ತುಂಬಾ ಖುಷಿ ತಂದಿದೆ ಎಂದು ನಟ ಡಾಲಿ ಧನಂಜಯ್ (Dhananjay) ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ನಮ್ಮ ವಿಜ್ಞಾನಿಗಳ ಎಲ್ಲ ಪರಿಶ್ರಮ ಸಾರ್ಥಕವಾಗುವ ಗಳಿಗೆ ಅದು. ನಮ್ಮ ಇಸ್ರೋ (ISRO), ಇಸ್ರೋ ವಿಜ್ಞಾನಿಗಳು ತುಂಬಾ ಒಳ್ಳೆಯ ಕೆಲಸ ಮಾಡ್ತಿದ್ದಾರೆ. ಅವರಿಗೆ ಧನ್ಯವಾದ ಇನ್ನೂ ಇಂತಹ ಅನೇಕ ಕೆಲಸಗಳು ಅವರಿಂದ ಆಗಲಿ. ಜಗತ್ತಿನಲ್ಲಿ ಎಲ್ಲವೂ ಒಂದೇ ಬಾರಿಗೆ ಸಕ್ಸಸ್ ಆಗಲ್ಲ. ಕೆಲವೊಮ್ಮೆ ವಿಫಲವಾಗುತ್ತೆ. ಹಾಗೆಯೇ ನಮ್ಮ ಇಸ್ರೋ ಚಂದ್ರಯಾನ 3 ಸಕ್ಸಸ್ ಆಗುತ್ತೆ ಎಂದು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಯೋಗಿಗಳ ಕಾಲು ಹಿಡಿಯುವುದು ನನ್ನ ಅಭ್ಯಾಸ : ರಜನಿ ಖಡಕ್ ಉತ್ತರ
ನಿನ್ನೆ ಚಂದ್ರಯಾನ-3 ಕುರಿತಂತೆ ಟ್ವೀಟ್ ಮಾಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದ ದಕ್ಷಿಣ ಭಾರತದ ಹೆಸರಾಂತ ನಟ ಪ್ರಕಾಶ್ ರಾಜ್ ಮತ್ತೊಂದು ಟ್ವೀಟ್ ಮೂಲಕ ಸ್ಪಷ್ಟನೆ ಕೊಟ್ಟಿದ್ದರು. ದ್ವೇಷಕ್ಕೆ ದ್ವೇಷ ಮಾತ್ರ ಕಾಣಿಸುತ್ತದೆ. ನಾನು ಉಲ್ಲೇಖಿಸಿದ್ದು ನಮ್ಮ ಕೇರಳದ ಚಾಯ್‌ವಾಲಾರನ್ನ ವಿಜೃಂಭಿಸುವ ಆರ್ಮ್ಸ್ಟ್ರಾಂಗ್ ಕಾಲದ ಜೋಕ್. ಟ್ರೋಲಿಗರ ಕಣ್ಣಿಗೆ ಕಾಣಿಸಿದ ಚಾಯ್‌ವಾಲಾ ಯಾರು? ನಿಮಗೆ ಜೋಕ್ ಅರ್ಥವಾಗದಿದ್ದರೆ, ಅದು ನಿಮ್ಮ ಮೇಲೆಯೇ ಮಾಡಿದ ಜೋಕ್ ಆಗುತ್ತದೆ. ಬಾಲಿಶವಾಗಿ ವರ್ತಿಸುವುದನ್ನು ನಿಲ್ಲಿಸಿ ಎಂದು ಟ್ವೀಟ್ ಮಾಡಿದ್ದರು. ಇದನ್ನೂ ಓದಿ: ಮೈಸೂರು ಹುಡುಗನ ಬೆತ್ತಲೆ ವಿಡಿಯೋ ಇಟ್ಕೊಂಡಿದ್ದಾರಂತೆ ನಟಿ ರಾಖಿ
ಪ್ರಕಾಶ್ ರಾಜ್ ಅವರ ಪ್ರತಿಕ್ರಿಯೆಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇಡೀ ದೇಶವೇ ಹೆಮ್ಮೆ ಪಡುವಂತೆ ನಿಮ್ಮ ವಿಜ್ಞಾನಿಗಳು ಕೆಲಸ ಮಾಡಿದ್ದಾರೆ. ಜಗತ್ತೇ ಈ ಕೆಲಸಕ್ಕಾಗಿ ಕೊಂಡಾಡುತ್ತಿದೆ. ಆದರೆ ಪ್ರಕಾಶ್ ರೈ ಈ ರೀತಿ ಗೇಲಿ ಮಾಡುವುದು ಸರಿಯಲ್ಲ. ಭಾರತದ ಅಸ್ಮಿತೆಯನ್ನೇ ಪ್ರಶ್ನೆ ಮಾಡುವ ನಟನಿಗೆ ಸರಿಯಾದ ಶಿಕ್ಷೆಯಾಗಬೇಕು ಎಂದು ಹಲವರು ಪ್ರತಿಕ್ರಿಯಿಸಿದ್ದರು. ಇಂದು ಸಚಿವರೂ ಕೂಡ ಗರಂ ಆಗಿದ್ದಾರೆ.
Web Stories