ಬೆಂಗಳೂರು: ಚಂದ್ರಯಾನ-3 (Chandrayaan-3) ಮಿಷನ್ ಭಾಗವಾಗಿ ಬುಧವಾರ ಸಂಜೆ 06:04ರ ವೇಳೆಗೆ ವಿಕ್ರಂ ಲ್ಯಾಂಡರ್ (Vikram Lander) ಚಂದ್ರನ (Moon) ಮೇಲೆ ಇಳಿಯಲಿದ್ದು, ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ನಗರದ ನೆಹರೂ ತಾರಾಲಯದಲ್ಲಿ (Jawaharlal Nehru Planetarium) ಬೃಹತ್ ಪರದೆ ಮೇಲೆ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿದೆ.
ಬುಧವಾರ ಸಂಜೆ 5 ಗಂಟೆಯಿಂದ 6:30ರ ವರೆಗೆ ಬೃಹತ್ ಪರದೆ ಮೇಲೆ ನೇರ ಪ್ರಸಾರ ಹಾಗೂ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವ ದೃಶ್ಯವನ್ನು ದೊಡ್ಡ ಪರದೆ ಮೇಲೆ ಕಣ್ತುಂಬಿಕೊಳ್ಳಬಹುದು. ನೇರ ಪ್ರಸಾರದೊಂದಿಗೆ ವಿಜ್ಞಾನಿಗಳಿಂದ ವಿವರಣಾ ಕಾರ್ಯಕ್ರಮ ಕೂಡಾ ನೆಹರೂ ತಾರಾಲಯದಲ್ಲಿ ನಡೆಯಲಿದೆ. ಇದನ್ನೂ ಓದಿ: Chandrayaan-3 ಲ್ಯಾಂಡಿಂಗ್ ದಿನಾಂಕ, ಸಮಯ ಘೋಷಿಸಿದ ಇಸ್ರೋ – ಇಲ್ಲಿದೆ ನೋಡಿ ವಿವರ..
Advertisement
Advertisement
ಚಂದ್ರನ ಹೊಸ ಫೋಟೋ ಕಳುಹಿಸಿದ ವಿಕ್ರಂ ಲ್ಯಾಂಡರ್:
ಚಂದ್ರನೆಡೆಗೆ ಹಾರಿಸಿರುವ ನೌಕೆಯ ವಿಕ್ರಂ ಲ್ಯಾಂಡರ್ ಲ್ಯಾಂಡಿಂಗ್‌ಗಾಗಿ ಸುರಕ್ಷಿತ ಪ್ರದೇಶವನ್ನು ಪತ್ತೆಹಚ್ಚಲು ಸಹಾಯ ಮಾಡುವ ಕ್ಯಾಮೆರಾದಿಂದ ಹೊಸ ಫೋಟೋಗಳನ್ನು ಸೆರೆಹಿಡಿದಿದೆ. ವಿಕ್ರಂ ಲ್ಯಾಂಡರ್ ಚಂದ್ರನ ಮೇಲ್ಮೈಯಲ್ಲಿ ಬಂಡೆಗಳು ಅಥವಾ ಆಳವಾದ ಕಂದಕಗಳಿಲ್ಲದ ಪ್ರದೇಶವನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ. ಇದನ್ನೂ ಓದಿ: ಅಂತಿಮ ಹಂತದ ಡಿಬೂಸ್ಟಿಂಗ್ ಕಾರ್ಯಾಚರಣೆಯೂ ಯಶಸ್ವಿ – ಚಂದ್ರನ ಅಂಗಳಕ್ಕೆ ಇನ್ನೊಂದೇ ಹೆಜ್ಜೆ
Advertisement
Web Stories