– ಭಾರತ ಈಗ ಚಂದ್ರನ ಮೇಲಿದೆ
ಬೆಂಗಳೂರು: ಅನೇಕ ವರ್ಷಗಳಿಂದ ಈ ದಿನಕ್ಕಾಗಿ ಕಾದಿದ್ದೇವು. ಎರಡನೇ ಬಾರಿ ಸಾಫ್ಟ್ ಲ್ಯಾಂಡಿಂಗ್ (Soft Landing) ಆಗಿರಲಿಲ್ಲ. ಆದರೆ ಈ ಬಾರಿ ಕಾರ್ಯ ಯಶಸ್ವಿಯಾಗಿದೆ. ಸದ್ಯ ಪ್ರಗ್ಯಾನ್ ರೋವರ್ (Pragyan Rover) ಕಾರ್ಯ ಮುಂದುವರಿಯಲಿದೆ ಎಂದು ಇಸ್ರೋ ಅಧ್ಯಕ್ಷ ಎಸ್. ಸೋಮನಾಥ (S Somanath) ಹೇಳಿದರು.
ಚಂದ್ರಯಾನ-3 (Chandrayaan-3) ಯಶಸ್ವಿಯಾದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭಾರತ ಈಗ ಚಂದ್ರನ ಮೇಲಿದೆ. ಚಂದ್ರಯಾನ ಭವಿಷ್ಯದ ವಿಜ್ಞಾನದ ಅವಿಷ್ಕಾರಗಳಿಗೆ ದಾರಿದೀಪ ಆಗಲಿದೆ. ಚಂದ್ರಯಾನ 3 ಯಶಸ್ಸಿಗೆ ಕಾರಣವಾದವರಿಗೆ ಧನ್ಯವಾದಗಳನ್ನು ಅರ್ಪಿಸಿದರು.
Advertisement
Advertisement
ಎಲ್ಲರಿಗೂ ಗೊತ್ತಿರುವಂತೆ ಇದು ಅಷ್ಟು ಸುಲಭವಾಗಿರಲಿಲ್ಲ. ಎರಡು ಮೀಟರ್ ಪರ್ ಸೆಕೆಂಡ್‍ಗೂ ಕಡಿಮೆ ವೆಲಾಸಿಟಿಯಲ್ಲಿ ಲ್ಯಾಂಡ್ ಆಗಿದೆ. ಆದಿತ್ಯ ಎಲ್ 1 ಮುಂದಿನ ತಿಂಗಳು ಆರಂಭಿಸುತ್ತೇವೆ. ಪ್ರತಿಯೊಬ್ಬ ಭಾರತೀಯನೂ ಈ ಯಶಸ್ಸಿಗಾಗಿ ಹರಸಿದ್ರು. ಹೋಮ, ಪೂಜೆ ಮಾಡಿ ಯಶಸ್ಸಿಗಾಗಿ ಹರಸಿದ್ರು. ಹೀಗಾಗಿ ಈ ಜಯವನ್ನ ಎಲ್ಲಾ ದೇಶವಾಸಿಗಳಿಗೆ ಡೆಡಿಕೇಟ್ ಮಾಡಲು ಬಯಸುತ್ತೇನೆ ಎಂದರು. ಇದನ್ನೂ ಓದಿ: ಇದು ನವಭಾರತದ ಉದಯ: ಇಸ್ರೋದ ಚಂದ್ರಯಾನ-3 ಯಶಸ್ಸಿಗೆ ಪ್ರಧಾನಿ ಮೋದಿ ಶುಭಾಶಯ
Advertisement
Advertisement
ಪ್ರಗ್ಯಾನ್ ರೋವರ್ ಲ್ಯಾಂಡರ್ ನಿಂದ ಹೊರಬರಲು ಸಮಯ ಬೇಕು. ಮುಂದಿನ ನಾಲ್ಕುರಿಂದ ಐದು ಗಂಟೆ ಬೇಕು. ಅಥವಾ ಒಂದು ದಿನ ಸಮಯ ಬೇಕಾಗುತ್ತದೆ. ವಾತವರಣದ ಮೇಲೆ ಇದು ನಿರ್ಧಾರವಾಗುತ್ತೆ. ಇದಾದ ಬಳಿಕ ನಾವು ಅಧ್ಯಯನ ಶುರು ಮಾಡ್ತೀವಿ ಪ್ರಯೋಗ ಆರಂಭವಾಗುತ್ತೆ. ಮುಂಬರೋ ದಿನಗಳಲ್ಲಿ ಆದಿತ್ಯ ಎಲ್ 1 (Aditya L-1) ಯೋಜನೆ ಇದೆ. ಮಾನವ ಸಹಿತ ಗಗನಯಾನ ಯೋಜನೆ ಕೂಡಾ ಮುಂದಿನ ದಿನಗಳಲ್ಲಿ ಕೈಗೊಳ್ಳುವುದಾಗಿ ಅವರು ತಿಳಿಸಿದರು. ಇದನ್ನೂ ಓದಿ: Aditya-L1: ಚಂದ್ರಯಾನ ಆಯ್ತು – ಈಗ ಸೂರ್ಯ ಸವಾರಿಯತ್ತ ಇಸ್ರೋ ಚಿತ್ತ
ಇದೇ ವೇಳೆ ಪ್ರಧಾನಿಗಳು (Narendra Modi) ಕರೆ ಮಾಡಿ ಯಶಸ್ಸಿನ ಬಗ್ಗೆ ಸಂತಸ ವ್ಯಕ್ತಪಡಿಸಿದ್ರು. ಪ್ರಕ್ರಿಯೆ ಮುಗಿದ ತಕ್ಷಣ ಕರೆ ಮೂಲಕ ಶುಭ ಕೋರಿದ್ರು ಎಂದು ಸೋಮನಾಥ ಹೇಳಿದರು.
Web Stories