ಬೆಂಗಳೂರು: ಪ್ರಪಂಚದಾದ್ಯಂತ ಕಾತುರದಿಂದ ಕಾಯುತ್ತಿದ್ದ ಕ್ಷಣ ಬಂದೇ ಬಿಟ್ಟಿದ್ದು, ಚಂದ್ರಯಾನ-3 (Chandrayaan-3) ಸಕ್ಸಸ್ ಆಗಿದೆ. ಈ ಹಿನ್ನೆಲೆಯಲ್ಲಿ ಎಲ್ಲೆಡೆಯೂ ಸಂಭ್ರಮಾಚರಣೆ ಮಾಡಲಾಗುತ್ತಿದೆ.
ಈ ಸಂಬಂಧ ಬಿಜೆಪಿ ನಾಯಕ ಸಿ.ಟಿ ರವಿ (CT Ravi) ಮಾತನಾಡಿ, ಭಾರತದ ಮುಕುಟಮಣಿಗೆ ಮತ್ತೊಂದು ವಜ್ರ ಸೇರ್ಪಡೆಯಾಗಿದೆ. ಇದಕ್ಕೆ ಕಾರಣವಾದ ವಿಜ್ಞಾನಿಗಳಿಗೆ, ಒತ್ತಾಸೆಯಾಗಿ ನಿಂತ ಪ್ರಧಾನಿ ನರೇಂದ್ರ ಮೋದಿಯವರಿಗೆ (Narendra Modi) ಅಭಿನಂದನೆಗಳು. ಭಾರತ ಆಧುನಿಕ ವಿಜ್ಞಾನದಲ್ಲಿ ಸಾಧನೆ ಮಾಡಬಹುದು, ವಿಶ್ವಗುರುವಾಗುವತ್ತಾ ಸಾಗಿದೆ ಎಂದರು.
Advertisement
Advertisement
ರಾಜ್ಯಸಭೆ ಸದಸ್ಯ ಜಗ್ಗೇಶ್ (jaggesh) ಮಾತನಾಡಿ, ಈ ಸಫಲತೆ ನಮಗೆ ಸಂತಸದ ದಿನ. ನಾವು ಎಲ್ಲ ಕ್ಷೇತ್ರಗಳಲ್ಲೂ ರಣಬೇಟೆಗಾರರಾಗಿ ಸಾಗಬೇಕು. ಕಳೆದ ಬಾರಿ ಸೋತಾಗ ತಂದೆಯ ಸ್ಥಾನದಲ್ಲಿ ನಿಂತು ಸಾಂತ್ವನ ಹೇಳಿದ್ದವರು ಪ್ರಧಾನಿ ಮೋದಿ. ದೈವಬಲ ಇದ್ದಾಗ ಯಾವ ವಾಮ ಮಾರ್ಗಗಳೂ ಫಲಿಸುವುದಿಲ್ಲ. ಇದರ ಹಿಂದೆ ಕೆಲವರು ಕುಚೇಷ್ಟೆ ಮಾಡಿದ್ದಾರೆ ಅವರು ಓದಿದ್ದಾರೆ, ಅನಾಗರಿಕರು. ಆದರೆ ದೇಶದ ಜನತೆ ದೇವರಿಗೆ ನಮಸ್ಕರಿಸಿ ಸಫಲತೆಗೆ ಪ್ರಾರ್ಥನೆ ಮಾಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: Chandrayaan-3 ಮಿಷನ್ ಸಕ್ಸಸ್: ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಕಾಲಿಟ್ಟ ವಿಕ್ರಮ್ ಲ್ಯಾಂಡರ್
Advertisement
Advertisement
ಡಾ. ಸಿ. ಎನ್. ಅಶ್ವತ್ಥನಾರಾಯಣ (Ashwath Narayan) ಪ್ರತಿಕ್ರಿಯಿಸಿ, ಚಂದ್ರಯಾನ ಸಫಲವಾಗಿರುವುದು ಸಂತಸದ ವಿಚಾರವಾಗಿದೆ. ಇದಕ್ಕೆ ಕಾರಣರಾದ ವಿಜ್ಞಾನಿಗಳಿಗೆ ಅಭಿನಂದನೆಗಳು. ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ನಾಯಕತ್ವ, ಉತ್ತೇಜನ ಬಹಳಮುಖ್ಯ ಪಾತ್ರ ವಹಿಸಿದೆ. ನಾಡಿನ ಸಮಸ್ತ ಜನತೆ ಹೆಮ್ಮೆಯಿಂದ ಇಡೀ ವಿಶ್ವದ ಗಮನ ಸೆಳೆದಿದೆ ಎಂದು ತಿಳಿಸಿದರು.
ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಭಾರತ ದೇಶದ ಪ್ರಜೆ, ಭಾರತಾಂಬೆಯ ಮಕ್ಕಳು ಭಾರತ ಮಾತೆಗೆ ಜೈಕಾರ ಹಾಕುವ ಸಂದರ್ಭ ಇದಾಗಿದೆ. ಪ್ರತಿ ಹೆಜ್ಜೆಯಲ್ಲೂ ಭಾರತ ಹೆಮ್ಮೆಯಿಂದ ಸಾಗುತ್ತದೆ ಎಂದು ತಿಳಿಸಿದರು.
ಇಸ್ರೋ ವಿಜ್ಞಾನಿಗಳ ಪರಿಶ್ರಮ, ಭಾರತೀಯರ ಪ್ರಾರ್ಥನೆ ಫಲವಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ನಿಗದಿ ಪಡಿಸಿದ ಸಮಯಕ್ಕೆ ಸರಿಯಾಗಿ ಚಂದ್ರಯಾನ-3 ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲೆ ಕಾಲಿಟ್ಟಿತು. ಈ ಐತಿಹಾಸಿಕ ಕ್ಷಣಕ್ಕೆ ಇಡೀ ವಿಶ್ವವೇ ಸಾಕ್ಷಿಯಾಯಿತು. ಇಸ್ರೋ ಸಂಜೆ 6:04ರ ಹೊತ್ತಿಗೆ ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ಮೇಲೆ ಇಳಿಸುವ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರೈಸಿತು. ದಕ್ಷಿಣ ಆಫ್ರಿಕಾದಿಂದಲೇ ಪ್ರಧಾನಿ ನರೇಂದ್ರ ಮೋದಿ ಅವರು ಶುಭಾಶಯ ತಿಳಿಸಿದರು.
Web Stories