ಬೆಂಗಳೂರು: ಭಾರತದ ಕನಸಿನ ಚಂದ್ರಯಾನ-3 (Chandrayaan-3) ಬಾಹ್ಯಾಕಾಶ ನೌಕೆ ಬುಧವಾರ ಚಂದ್ರನ ಐದನೇ ಹಾಗೂ ಕೊನೆಯ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿದೆ. ಈ ಮೂಲಕ ಚಂದ್ರನ (Moon) ಮೇಲ್ಮೈಗೆ ಇನ್ನಷ್ಟು ಹತ್ತಿರವಾಗಿದೆ.
ಬಾಹ್ಯಾಕಾಶ ನೌಕೆ 150 ಕಿ.ಮೀ × 177 ಕಿ.ಮೀ ವೃತ್ತಾಕಾರದ ಕಕ್ಷೆಯನ್ನು ತಲುಪಿದೆ. ಪರಿಣತಿಯೊಂದಿಗೆ ನಡೆಸಿದ ನಿಖರವಾದ ಕುಶಲತೆ ಮಿಷನ್ ಟೈಮ್ಲೈನ್ನಲ್ಲಿ ಮುಂದಿನ ಕಾರ್ಯಾಚರಣೆಗೆ ಅಡಿಪಾಯ ಹಾಕಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ತಿಳಿಸಿದೆ.
Advertisement
Chandrayaan-3 Mission:
Orbit circularisation phase commences
Precise maneuvre performed today has achieved a near-circular orbit of 150 km x 177 km
The next operation is planned for August 16, 2023, around 0830 Hrs. IST pic.twitter.com/LlU6oCcOOb
— ISRO (@isro) August 14, 2023
Advertisement
ಇದೀಗ ಲ್ಯಾಂಡರ್ ಮಾಡ್ಯೂಲ್ನಿಂದ ಪ್ರೊಪಲ್ಷನ್ ಮಾಡ್ಯೂಲ್ (ಉಡ್ಡಯನ ವಾಹನ) ಪ್ರತ್ಯೇಕಗೊಳ್ಳುವ ಹಂತಕ್ಕೆ ಬಂದಿದೆ. ಇದು ಆಗಸ್ಟ್ 17ರಂದು ನೆರವೇರುವ ಸಾಧ್ಯತೆಯಿದ್ದು, ಇನ್ನೊಂದು ಮೈಲಿಗಲ್ಲನ್ನು ಸಾಧಿಸಲಿದೆ. ಇದನ್ನೂ ಓದಿ: ಬಳ್ಳಾರಿಯಲ್ಲಿ ರಿಷಭ್ ಪಂತ್ ಬ್ಯಾಟಿಂಗ್ – ಅಭಿಮಾನಿಗಳಲ್ಲಿ ಸಂಭ್ರಮ
Advertisement
Advertisement
ಚಂದ್ರಯಾನ-3 ಮಿಷನ್ನ ರಾಕೆಟ್ ಜುಲೈ 14ರಂದು ಮಧ್ಯಾಹ್ನ 2:35ಕ್ಕೆ ಶ್ರೀಹರಿಕೋಟದ ಉಡ್ಡಯನ ಕೇಂದ್ರದಿಂದ ಲಾಂಚ್ ಆಗಿತ್ತು. ಭೂಮಿಯ ಕಕ್ಷೆಯಿಂದ ಒಂದೊಂದೇ ಹಂತದಲ್ಲಿ ಚಂದ್ರಯಾನ-3 ನೌಕೆ ಚಂದ್ರನೆಡೆಗೆ ಪ್ರಯಾಣ ಬೆಳೆಸಿದೆ. ಆಗಸ್ಟ್ 23ರಂದು ನೌಕೆ ಚಂದ್ರನ ಮೇಲೆ ಇಳಿಯುವ ಸಾಧ್ಯತೆಯಿದೆ. ಇದನ್ನೂ ಓದಿ: ಗಡಿ ಪ್ರದೇಶಗಳಲ್ಲಿ ಶಾಂತಿ ಕಾಪಾಡಲು ಚೀನಾ ಒಪ್ಪಿದೆ: MEA
Web Stories