ಬೀದರ್: ಐತಿಹಾಸಿಕ ಚಂದ್ರಯಾನ-3ರ (Chandrayaan-3) ಯಶಸ್ಸು ವಿಶ್ವವನ್ನು ಭಾರತದ ಕಡೆ ತಿರುಗಿ ನೋಡುವಂತೆ ಮಾಡಿದೆ. ಇದರ ಹಿಂದೆ ನೂರಾರು ವಿಜ್ಞಾನಿಗಳ ಹಾಗೂ ಸಿಬ್ಬಂದಿ ಕಠಿಣ ಪರಿಶ್ರಮವಿದೆ. ಈ ಯಶಸ್ಸಿನ ಹಿಂದೆ ಔರಾದ್‍ನ ವಡಗಾಂವ್ ಗ್ರಾಮದ ಕುರಿಗಾಯಿ ಸಹೋದರರ ಕಠಿಣ ಪರಿಶ್ರಮ ಕೂಡ ಸೇರಿದೆ.
ಶ್ರೀಹರಿಕೋಟಾದಲ್ಲಿ ತಾಂತ್ರಿಕ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿರುವ ಪ್ರಭು ಗೊಂಡ ಅವರು ಚಂದ್ರಯಾನ ನೌಕೆಗೆ ಬೇಕಾದ ದ್ರವ ಹೈಡ್ರೋಜನ್‍ನ್ನು ತುಂಬಿದ್ದಾರೆ. ಇದರ ಜೊತೆ ಸುಧಾಕರ ಗೊಂಡ ಎಂಬುವವರು ಬೆಂಗಳೂರಿನ ಇಸ್ರೋ ಕೇಂದ್ರ ಕಚೇರಿಯಲ್ಲಿ ತಾಂತ್ರಿಕ ವಿಭಾಗದಲ್ಲಿ 10 ವರ್ಷಗಳಿಂದ ಕೆಲಸ ಮಾಡಿದ್ದಾರೆ. ಈ ಮೂಲಕ ಗ್ರಾಮೀಣ ಭಾಗದ ಇಬ್ಬರು ಕುರಿಗಾಯಿ ಸಹೋದರರು ಚಂದ್ರಯಾನ-3ರ ಯಶಸ್ವಿಯಲ್ಲಿ ಭಾಗಿಯಾಗಿದ್ದಾರೆ. ಇದನ್ನೂ ಓದಿ: ಚಂದ್ರನ ಮೇಲಿರುವ ಚಂದ್ರಯಾನ-3 ಲ್ಯಾಂಡರ್ ಫೋಟೋ ಸೆರೆ ಹಿಡಿದ ಚಂದ್ರಯಾನ-2ರ ಆರ್ಬಿಟರ್
ಚಂದ್ರಯಾನಕ್ಕಾಗಿ ಸತತವಾಗಿ ಈ ಇಬ್ಬರು ಸಹೋದರರು ಕೆಲಸ ಮಾಡಿದ್ದಾರೆ. ಈ ಬಗ್ಗೆ ಅವರ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಸಂಭ್ರಮಿಸಿದ್ದಾರೆ. ಇದನ್ನೂ ಓದಿ: Chandrayaan-3 ಲ್ಯಾಂಡರ್‌ನಿಂದ ಚಂದ್ರನ ಮೇಲೆ ಇಳಿಯುತ್ತಿರುವ ರೋವರ್ – ವೀಡಿಯೋ ರಿಲೀಸ್ ಮಾಡಿದ ಇಸ್ರೋ
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]