ನವದೆಹಲಿ: ಚಂದ್ರಯಾನ-3 (Chandrayaan-3) ಬಾಹ್ಯಾಕಾಶ ನೌಕೆಯು ಈಗ ಚಂದ್ರನ ಮೇಲ್ಮೈಗೆ ಇನ್ನೂ ಹತ್ತಿರವಾಗಿದೆ. ನೌಕೆಯು ಈಗ ಚಂದ್ರನ ಮೇಲ್ಮೈನಿಂದ 1437 ಕಿಮೀ ದೂರದಲ್ಲಿದೆ.
ಚಂದ್ರಯಾನ-3 ಮಿಸನ್ ಬಗ್ಗೆ ಬುಧವಾರ ಮಾಹಿತಿ ಹಂಚಿಕೊಂಡಿರುವ ಇಸ್ರೋ, ಚಂದ್ರನ ಮೇಲ್ಮೈಗೆ ಇನ್ನೂ ಹತ್ತಿರದಲ್ಲಿದೆ. ನೌಕೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಚಂದ್ರನ ಮೇಲ್ಮೈನ 1437 ಕಿಮೀ ವೃತ್ತದ ಕಕ್ಷೆಯಿಂದ 174 ಕಿಮೀಗೆ ಇಳಿಸಲಾಗಿದೆ. ಚಂದ್ರನ ಮೇಲೆ ಲ್ಯಾಂಡ್ ಆಗುವುದಕ್ಕೆ ಇನ್ನು 1437 ಕಿ.ಮೀ. ಅಷ್ಟೇ ಕ್ರಮಿಸಬೇಕಿದೆ. ಮುಂದಿನ ಕಾರ್ಯಾಚರಣೆಯನ್ನು ಆಗಸ್ಟ್ 14 ರಂದು 11:30 ಮತ್ತು 12:30 ಗಂಟೆಗಳ ನಡುವೆ ನಿಗದಿಪಡಿಸಲಾಗಿದೆ. ಇದನ್ನೂ ಓದಿ: ಚಂದ್ರಯಾನ-3 ಗಗನ ನೌಕೆ ಸೆರೆಹಿಡಿದ ಚಂದ್ರನ ಮೊದಲ ಚಿತ್ರ ವೈರಲ್
Advertisement
Advertisement
ಚಂದ್ರಯಾನ-3 ಬಾಹ್ಯಾಕಾಶ ನೌಕೆಯು ಆಗಸ್ಟ್ 5 ರಂದು ಚಂದ್ರನ ಕಕ್ಷೆ ಪ್ರವೇಶಿಸಿತು. ಪ್ರಸ್ತುತ ನೌಕೆಯು ಚಂದ್ರನಿಗೆ ಹತ್ತಿರದಲ್ಲಿದೆ. ಸೋಮವಾರ ಚಂದ್ರನ ಮೇಲ್ಮೈನ 4,313 ಕಿಮೀ ದೀರ್ಘ ವೃತ್ತದ ಕಕ್ಷೆಯಿಂದ 170 ಕಿಮೀಗೆ ಇಳಿಸಲಾಗಿತ್ತು. ನಂತರ ಆ.9 ರಿಂದ 17 ರವರೆಗೆ ವಿವಿಧ ಹಂತಗಳಲ್ಲಿ 100 ಕಿಮೀ ಅಂತರದ ಕೆಳ ಕಕ್ಷೆಗೆ ತರಲಾಗುವುದು ಎಂದು ಹೇಳಲಾಗಿತ್ತು.
Advertisement
ಆಗಸ್ಟ್ 14 ರಂದು ಮತ್ತೊಂದು ಕಾರ್ಯಾಚರಣೆ ನಡೆಸಿ ಇಸ್ರೋ ಬಾಹ್ಯಾಕಾಶ ನೌಕೆ ಮತ್ತು ಚಂದ್ರನ ನಡುವಿನ ಅಂತರವನ್ನು ಮತ್ತಷ್ಟು ಕಡಿಮೆ ಮಾಡಲಾಗುವುದು. ನಂತರ ಆಗಸ್ಟ್ 16 ರಂದು ನೌಕೆಯು ಚಂದ್ರನ ಮೇಲ್ಮೈಗೆ 100 ಕಿಮೀ ದೂರದ ವೃತ್ತಾಕಾರದ ಕಕ್ಷೆಯನ್ನು ಪ್ರವೇಶಿಸುವ ಸಾಧ್ಯತೆ ಇದೆ. ಆಗಸ್ಟ್ 17 ರಂದು ಲ್ಯಾಂಡರ್ (ವಿಕ್ರಮ್) ಮತ್ತು ರೋವರ್ (ಪ್ರಜ್ಞಾನ್) ಒಳಗೊಂಡಿರುವ ಲ್ಯಾಂಡಿಂಗ್ ಮಾಡ್ಯೂಲ್, ಪ್ರೊಪಲ್ಷನ್ ಮಾಡ್ಯೂಲ್‌ನಿಂದ ಬೇರ್ಪಡುತ್ತದೆ ಎಂದು ಇಸ್ರೋ ತಿಳಿಸಿದೆ. ಇದನ್ನೂ ಓದಿ: Chandrayaan-3: ಭೂಮಿಯಿಂದ ಹಾರಿದ 22 ದಿನಗಳ ಬಳಿಕ ಚಂದ್ರನ ಕಕ್ಷೆ ಸೇರಿದ ಚಂದ್ರಯಾನ-3 ನೌಕೆ
Advertisement
ಪ್ರೊಪಲ್ಷನ್ ಮಾಡ್ಯೂಲ್ ಬೇರ್ಪಡುವುದಕ್ಕೂ ಮುನ್ನ ಆ.17ರ ವರೆಗೂ ನೌಕೆಯ ವೇಗವನ್ನು ನಿಧಾನಗೊಳಿಸುವ ಮೂರು ಹಂತದ ಪ್ರಕ್ರಿಯೆಗಳು ನಡೆಯಲಿವೆ. ಆ.23 ರ ಸಂಜೆ 5:47ಕ್ಕೆ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಪ್ರಕ್ರಿಯೆ ನಡೆಯಲಿದೆ ಎಂದು ಇಸ್ರೋ ಮಾಹಿತಿ ನೀಡಿದೆ.
Web Stories