ಮಾಸ್ಕೋ: ಪ್ರತಿಯೊಬ್ಬ ಭಾರತೀಯ ಕಾತುರದಿಂದ ಕಾಯುತ್ತಿದ್ದ ಚಂದ್ರಯಾನ-3 (Chandrayaan-3) ವಿಕ್ರಂ ಲ್ಯಾಂಡರ್ (Vikram Lander) ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡ್ ಆಗಿದ್ದು, ಈ ಐತಿಹಾಸಿಕ ಕ್ಷಣಕ್ಕೆ ರಷ್ಯಾದ ರೋಸ್ಕೋಸ್ಮಾಸ್ ಬಾಹ್ಯಾಕಾಶ ಸಂಸ್ಥೆ (Roscosmos Space Agency) ಭಾರತವನ್ನು ಅಭಿನಂದಿಸಿದೆ.
ಮಾಸ್ಕೋದ (Moscow) ಸ್ವಂತ ಮಿಷನ್ ಅಪಘಾತಕ್ಕೆ ಈಡಾದ ಬಳಿಕ ಚಂದ್ರನ ದಕ್ಷಿಣ ಧ್ರುವದಲ್ಲಿ ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಇಳಿಸಿದ್ದಕ್ಕಾಗಿ ರಷ್ಯಾ ಬಾಹ್ಯಾಕಾಶ ಸಂಸ್ಥೆ ಭಾರತಕ್ಕೆ ಶುಭಾಶಯಗಳನ್ನು ಕೋರಿದೆ. ಇದನ್ನೂ ಓದಿ: ಚಂದ್ರಯಾನ- 3 ಸಕ್ಸಸ್: ಇಸ್ರೋಗೆ ಸಿದ್ದರಾಮಯ್ಯ, ಡಿಕೆಶಿ ಅಭಿನಂದನೆ
Advertisement
Advertisement
ಚಂದ್ರಯಾನ-3 ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದ ಭಾರತೀಯ ಸಹೋದ್ಯೋಗಿಗಳನ್ನು ರೋಸ್ಕೋಸ್ಮಾಸ್ ಅಭಿನಂದಿಸುತ್ತದೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಅಲ್ಲದೇ ಚಂದ್ರನ ಪರಿಶೋಧನೆಯು ಇಡೀ ಮಾನವಕುಲಕ್ಕೆ ಮುಖ್ಯವಾಗಿದ್ದು, ಭವಿಷ್ಯದಲ್ಲಿ ಇದು ಬಾಹ್ಯಾಕಾಶದ ಆಳವಾದ ಮಾಸ್ಟರಿಂಗ್‌ಗೆ ವೇದಿಕೆಯಾಗಬಹುದು ಎಂದು ರೋಸ್ಕೋಸ್ಮಾಸ್ ಬಾಹ್ಯಾಕಾಶ ಸಂಸ್ಥೆ ಭಾರತವನ್ನು ಶ್ಲಾಘಿಸಿದೆ. ಇದನ್ನೂ ಓದಿ: ಚಂದ್ರಯಾನ-3 ಯಶಸ್ವಿ: ಇಸ್ರೋಗೆ ನಾಸಾ ಆಡಳಿತಾಧಿಕಾರಿ ಅಭಿನಂದನೆ
Advertisement
Advertisement
Web Stories