ನವದೆಹಲಿ: ಚಂದ್ರನ ಚುಂಬಿಸಲು ಹೊರಟಿರುವ ಭಾರತದ ಚಂದ್ರಯಾನ-3 (Chandrayaan-3) ಯೋಜನೆ ಯಶಸ್ವಿಯಾಗಲು ಇನ್ನೊಂದು ಘಟ್ಟ ಬಾಕಿ ಉಳಿದಿದೆ. ಇಂದು ನಡೆದ ಎರಡನೇ ಮತ್ತು ಕಡೆಯ ಡಿ-ಬೂಸ್ಟಿಂಗ್ ಯಶಸ್ವಿಯಾಗಿದ್ದು, ಇದರ ಬೆನ್ನಲ್ಲೇ ವಿಕ್ರಮ್ ಲ್ಯಾಂಡರ್ (Vikram Lander) ಚಂದ್ರನಲ್ಲಿ ಉಳಿಯುವ ಸಮಯವನ್ನು ಘೋಷಣೆ ಮಾಡಿದೆ.
ಭಾರತದ ಬಹು ನಿರೀಕ್ಷಿತ ಅಂತರಿಕ್ಷ ಯೋಜನೆ ಚಂದ್ರಯಾನ-3 ಚಂದ್ರನ ಅಪ್ಪಲು ಹೊರಟಿದೆ. ಚಂದ್ರನಿಗೆ ಹತ್ತಿರವಾಗುವ ಒಂದೊಂದೇ ಹಂತಗಳನ್ನು ದಾಟಿರುವ ವಿಕ್ರಮ್ ಲ್ಯಾಂಡರ್ ಆಗಸ್ಟ್ 23 ರಂದು ಸಂಜೆ ಆರು ಗಂಟೆ ನಾಲ್ಕು ನಿಮಿಷಕ್ಕೆ (06:04) ಚಂದ್ರನ ದಕ್ಷಿಣ ಭಾಗದಲ್ಲಿ ಲ್ಯಾಂಡ್ ಆಗಲಿದೆ ಎಂದು ಇಸ್ರೋ ಹೇಳಿದೆ. ಇದನ್ನೂ ಓದಿ: ಚಂದ್ರನಿಗೆ ಮುತ್ತಿಕ್ಕುವ ರಷ್ಯಾದ ಕನಸು ಭಗ್ನ!
Advertisement
Advertisement
ಈ ಬಗ್ಗೆ ಟ್ವೀಟ್ ಮಾಡಿರುವ ಇಸ್ರೋ, ಭಾನುವಾರ ಬೆಳಗ್ಗೆ ನಡೆದ ಎರಡನೇ ಮತ್ತು ಕಡೆಯ ಹಂತದ ಡಿ-ಬೂಸ್ಟಿಂಗ್ (ಲ್ಯಾಂಡರ್ ವೇಗ ತಗ್ಗಿಸುವ ಪ್ರಕ್ರಿಯೆ) ಕಾರ್ಯ ಕೂಡ ಯಶಸ್ವಿಯಾಗಿದ್ದು, 134 ಕಕ್ಷೆಯಲ್ಲಿ ಸುತ್ತುತ್ತಿದ್ದ ವಿಕ್ರಮ್ ಲ್ಯಾಂಡರ್ ಈಗ 25 ಕಿಮೀ ಕಕ್ಷೆಯಲ್ಲಿ ಸುತ್ತಲು ಆರಂಭಿಸಿದೆ. ಎರಡು ದಿನಗಳಲ್ಲಿ ಇದು ಚಂದ್ರನ ದಕ್ಷಿಣ ಭಾಗದಲ್ಲಿ ಲ್ಯಾಂಡಿಂಗ್ ಸೂಕ್ತ ಸ್ಥಳವನ್ನು ಆಯ್ಕೆ ಮಾಡಿಕೊಂಡು ಆಗಸ್ಟ್ 23 ರಂದು ಸಂಜೆ ಆರು ಗಂಟೆ ನಾಲ್ಕು ನಿಮಿಷಕ್ಕೆ ಲ್ಯಾಂಡ್ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.
Advertisement
ಎಲ್ಲವೂ ಅಂದುಕೊಂಡಂತೆ ಆದರೆ ಆಗಸ್ಟ್ 23 ರಂದು ಭಾರತ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದು ಈವರೆಗೂ ಅಮೆರಿಕ, ಚೀನಾ, ರಷ್ಯಾ ಮಾಡದ ಸಾಧನೆಯನ್ನು ಅತಿ ಕಡಿಮೆ ಬಜೆಟ್‌ನಲ್ಲಿ ಮಾಡಿ ತೋರಿಸಲಿದೆ. ಇದನ್ನೂ ಓದಿ: ಅಂತಿಮ ಹಂತದ ಡಿಬೂಸ್ಟಿಂಗ್ ಕಾರ್ಯಾಚರಣೆಯೂ ಯಶಸ್ವಿ – ಚಂದ್ರನ ಅಂಗಳಕ್ಕೆ ಇನ್ನೊಂದೇ ಹೆಜ್ಜೆ
Advertisement
ಭಾರತಕ್ಕೆ ಸವಾಲೊಡ್ಡಿದ್ದ ರಷ್ಯಾದ ಲೂನಾ-25 ಮಿಷನ್ ವಿಫಲ
ಚಂದ್ರಯಾನದ ವಿಚಾರದಲ್ಲಿ ಭಾರತಕ್ಕೆ ರಷ್ಯಾ ಸವಾಲೊಡ್ಡಿತ್ತು. ಭಾರತದ ವಿಕ್ರಮ್ ಲ್ಯಾಂಡಿರ್ ಚಂದ್ರನ ತಲುಪುವ ಮುನ್ನ ರಷ್ಯಾ ತನ್ನ ಲೂನ್-25 ಅನ್ನು ಚಂದ್ರನ ದಕ್ಷಿಣ ಭಾಗದಲ್ಲಿ ಇಳಿಸುವ ಲೆಕ್ಕಚಾರ ಹಾಕಿಕೊಂಡಿತ್ತು. ಆ ಮೂಲಕ ವಿಶೇಷ ಸಾಧನೆಗೆ ರಷ್ಯಾ ಭಾಗಿಯಾಗಲು ಭಾರತದ ವಿರುದ್ಧ ಸ್ಪರ್ಧೆಗೆ ನಿಂತಿತ್ತು. ಆದರೆ ಲೂನಾ-25 ಬಾಹ್ಯಾಕಾಶ ನೌಕೆಯು ಶನಿವಾರದಂದು ತನ್ನ ಪೂರ್ವ ಲ್ಯಾಂಡಿಂಗ್ ಕಕ್ಷೆಯಲ್ಲಿ ಸ್ಥಾನ ಪಡೆಯುತ್ತಿದ್ದಂತೆ ತಾಂತ್ರಿಕ ಕಾರಣಗಳಿಂದ ದುರಂತದ ವೈಫಲ್ಯವನ್ನು ಎದುರಿಸಿದೆ. ರೋಸ್ಕೋಸ್ಮೋಸ್ ಬಿಡುಗಡೆ ಮಾಡಿದ ಹೇಳಿಕೆ ಪ್ರಕಾರ, ಕಾರ್ಯಾಚರಣೆಯ ನಿರ್ಣಾಯಕ ಹಂತದಲ್ಲಿ ಅನಿರೀಕ್ಷಿತ ಸಮಸ್ಯೆಯಿಂದಾಗಿ ಬಾಹ್ಯಾಕಾಶ ನೌಕೆಯೊಂದಿಗಿನ ಸಂಪರ್ಕವು ಕಳೆದುಹೋಗಿದ್ದು ಮಿಷನ್ ವಿಫಲವಾಗಿದೆ ಎಂದು ಘೋಷಿಸಿದೆ.
Web Stories