ನವದೆಹಲಿ: ಬಾಹ್ಯಾಕಾಶ (Space) ವಲಯದಲ್ಲಿ ಭಾರತ (India) ಹೊಸ ಮೈಲುಗಲ್ಲು ಸಾಧಿಸಲು ಹೊರಟಿದೆ. ಅತ್ಯಂತ ಕಡಿಮೆ ಬಜೆಟ್‌ನಲ್ಲಿ ಚಂದ್ರಯಾನ-3 (Chandrayaan-3) ಮಾಡುವ ಮೂಲಕ ಇಡೀ ಜಗತ್ತು ಹುಬ್ಬೇರಿಸಿ ಭಾರತದತ್ತ ನೋಡುವಂತೆ ಇಸ್ರೋ (ISRO) ಮಾಡಿದೆ. ಮಂಗಳಯಾನದ ಬಳಿಕ ಚಂದ್ರನ (Moon) ಬೆನ್ನು ಬಿದ್ದಿರುವ ಭಾರತ ನಿರಂತರ ಪ್ರಯತ್ನಗಳ ಮೂಲಕ ಯಶಸ್ವಿಯಾಗುವ ಕಸರತ್ತು ನಡೆಸಿದೆ.
ಭಾರತವೂ ಸೇರಿದಂತೆ ಬಹಳಷ್ಟು ಮುಂದುವರಿದ ದೇಶಗಳು ಬಾಹ್ಯಾಕಾಶ ವಲಯದಲ್ಲಿ ಹೊಸ ಸಾಧನೆ ಮಾಡಲು ನಿರಂತರ ಪ್ರಯತ್ನ ಮಾಡುತ್ತಿವೆ. ಸಾವಿರಾರು ಕೋಟಿ ಖರ್ಚು ಮಾಡುವ ವಿದೇಶಗಳಿಗೆ, ನೂರಾರು ಕೋಟಿ ಖರ್ಚು ಮಾಡುವ ಭಾರತಕ್ಕೆ ಬಾಹ್ಯಾಕಾಶಯಾನದಿಂದ ಲಾಭ ಏನು ಎನ್ನುವ ಪ್ರಶ್ನೆಯೂ ಸಹಜವಾಗಿ ಕೇಳಿ ಬರುತ್ತಿದೆ.
Advertisement
Advertisement
ಬಾಹ್ಯಾಕಾಶ ಸಂಶೋಧನೆಯಿಂದ 2 ರೀತಿಯ ಲಾಭಗಳನ್ನು ನಿರೀಕ್ಷೆ ಮಾಡಬಹುದು. ಯಶಸ್ವಿ ಬಾಹ್ಯಾಕಾಶಯಾನಗಳಿಂದ ಜಾಗತಿಕ ಮಟ್ಟದಲ್ಲಿ ದೇಶದ ತಾಂತ್ರಿಕ ಶಕ್ತಿ ಪ್ರದರ್ಶನವಾಗಲಿದೆ. ಮುಂಬರುವ ದಿನಗಳಲ್ಲಿ ನಡೆಯುವ ಸಂಶೋಧನೆಗೆ ಪೂರಕ ದತ್ತಾಂಶ ಸಂಗ್ರಹವಾಗಲಿದೆ. ಖಗೋಳ ವಿಸ್ಮಯಗಳನ್ನು ಅರಿಯುವುದರ ಮೂಲಕ ಭೂಮಿಯ ಮೇಲೆ ಸಂಭವಿಸುವ ಭವಿಷ್ಯದ ಅಪಾಯಗಳನ್ನು ತಿಳಿಯಲು ಇದು ಸಹಕಾರಿಯಾಗಲಿದೆ.
Advertisement
ಬಾಹ್ಯಾಕಾಶ ಸಂಶೋಧನೆಯ ಹಿಂದೆ ಆರ್ಥಿಕತೆಯ ನಿರೀಕ್ಷೆಯೂ ಹೊಂದಿದೆ. 2013 ರಿಂದ ಜಗತ್ತಿನಾದ್ಯಂತ 1791 ಬಾಹ್ಯಕಾಶ ತಂತ್ರಜ್ಞಾನ ಕಂಪನಿಗಳು 22 ಲಕ್ಷ ಕೋಟಿ ರೂ. (272 ಬಿಲಿಯನ್ ಡಾಲರ್) ಹೂಡಿಕೆ ಮಾಡಿವೆ. ಸ್ಪೇಸ್ ಫೌಂಡೇಶನ್ ಲೆಕ್ಕಚಾರದ ಪ್ರಕಾರ 2023ರ ದ್ವಿತೀಯಾರ್ಧದಲ್ಲಿ ಬಾಹ್ಯಾಕಾಶ ಆರ್ಥಿಕತೆ 45 ಲಕ್ಷ ಕೋಟಿ ರೂ.ಗೆ (546 ಬಿಲಿಯನ್ ಡಾಲರ್) ಹೆಚ್ಚಿರಲಿದೆ. ಇದನ್ನೂ ಓದಿ: ಪಾಕಿಸ್ತಾನ ಮಾಧ್ಯಮಗಳು ಚಂದ್ರಯಾನ-3 ಲ್ಯಾಂಡಿಂಗ್ ಕಾರ್ಯಕ್ರಮ ಪ್ರಸಾರ ಮಾಡಲಿ: ಪಾಕ್ ಮಾಜಿ ಸಚಿವ
Advertisement
ಕಳೆದ 10 ವರ್ಷಗಳಲ್ಲಿ 91% ಈ ಕ್ಷೇತ್ರ ಅಭಿವೃದ್ಧಿ ಕಂಡಿದೆ. 1999 ರಿಂದ ಭಾರತವೂ ಸೇರಿ 34 ದೇಶಗಳು 381 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿವೆ. ಈ ಮೂಲಕ 279 ಮಿಲಿಯನ್ ಡಾಲರ್ ಆದಾಯಗಳಿಸಿವೆ. ಭಾರತೀಯ ಬಾಹ್ಯಾಕಾಶ ವಲಯವು ಸದ್ಯ 8 ಬಿಲಿಯನ್ ಡಾಲರ್ ಇದೆ. 2025ರ ವೇಳೆಗೆ 13 ಬಿಲಿಯನ್ ಡಾಲರ್ ತಲುಪುವ ನಿರೀಕ್ಷೆ ಇದೆ.
ಭಾರತ ತನ್ನ ಸಾಮರ್ಥ್ಯ ಪ್ರದರ್ಶಿಸುವ ಮೂಲಕ ಈ ಪೈಕಿ ಒಂದಷ್ಟು ಹೆಚ್ಚಿನ ಪಾಲು ಪಡೆಯುವ ಅವಕಾಶಗಳಿದೆ. ಇದರಿಂದ ದೇಶದ ಆರ್ಥಿಕತೆ ಅಭಿವೃದ್ಧಿಯಾಗಲಿದೆ. ಇತರೆ ದೇಶಗಳ ಗಗನನೌಕೆಗಳನ್ನು ಬಾಹ್ಯಾಕಾಶಕ್ಕೆ ಹಾರಿಸುವ ಮೂಲಕ ಉದ್ಯಮವಾಗಿ ಪರಿವರ್ತಿಸಬಹುದು. ಭಾರತೀಯ ತಂತ್ರಜ್ಞಾನದ ಮೇಲೆ ನಂಬಿಕೆ ಹುಟ್ಟಲಿದ್ದು, ಆದ್ಯತೆಯೂ ಸಿಗಲಿದೆ. ಇದನ್ನೂ ಓದಿ: Chandrayaan-3ಕ್ಕೆ ಇಂದು ಕ್ಲೈಮ್ಯಾಕ್ಸ್; ಸಂಜೆ 6:04ಕ್ಕೆ ಸಾಫ್ಟ್ ಲ್ಯಾಂಡಿಂಗ್
Web Stories