ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯ ಚಂದ್ರಯಾನ-3 (Chandrayaan 3) ಗಗನನೌಕೆಯು ಭೂಮಿಯಿಂದ ದೂರವಾಗಿ ಚಂದ್ರನಿಗೆ ಹತ್ತಿರ ಹತ್ತಿರ ಆಗುತ್ತಿದೆ. ಭೂಮಿಯನ್ನು ಯಶಸ್ವಿಯಾಗಿ ಐದು ಸುತ್ತು ಹೊಡೆದು ಕಕ್ಷೆಯನ್ನು ಪೂರ್ಣಗೊಳಿಸಿ, ಈಗ ಚಂದ್ರನ ಕಕ್ಷೆಯತ್ತ ಹೊರಟಿದೆ. ಲೂನರ್ ಟ್ರಾನ್ಸ್ಫರ್ ಟ್ರಾಜೆಕ್ಟರಿ ಪಥದಲ್ಲಿ ಗಗನನೌಕೆ ಸಾಗುತ್ತಿದೆ.
ಗಗನನೌಕೆ ಆಗಸ್ಟ್ 1 ರಂದು ಭೂಮಿಯ ಸುತ್ತಲಿನ ಕಕ್ಷೆಯನ್ನು ಪೂರ್ಣಗೊಳಿಸಿ ಚಂದ್ರನ ಕಕ್ಷೆಯತ್ತ ಪ್ರಯಾಣ ಬೆಳೆಸಿದೆ. ಇಸ್ರೋ ನೌಕೆಯನ್ನು ಟ್ರಾನ್ಸ್ಲೂನರ್ ಕಕ್ಷೆಗೆ ಸೇರಿಸುವಲ್ಲಿ ಯಶಸ್ವಿಯಾಗಿದೆ. ಚಂದ್ರಯಾನ-3 ಈವರೆಗಿನ ಪ್ರಯಾಣವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದೆ. ಈಗಾಗಲೇ ಬಾಹ್ಯಾಕಾಶ ನೌಕೆಯು ಚಂದ್ರನ ಸುಮಾರು ಮೂರನೇ ಎರಡರಷ್ಟು ದೂರವನ್ನು ಕ್ರಮಿಸಿದೆ. ಆಗಸ್ಟ್ 5 ರಂದು ಸಂಜೆ 7 ಗಂಟೆ ಹೊತ್ತಿಗೆ ಚಂದ್ರಯಾನ-3 ನೌಕೆಯು ಚಂದ್ರನ ಕಕ್ಷೆಗೆ ಸೇರಲಿದೆ. ಯಾನವು ಈಗ ಯಾವ ಹಂತದಲ್ಲಿದೆ? ಮುಂದೇನಾಗುತ್ತೆ? ಚಂದ್ರಯಾನ-3 ಬಗ್ಗೆ ಇಸ್ರೋ ಇಲ್ಲಿಯವರೆಗೆ ನೀಡಿರುವ ಡೇಟಾದಲ್ಲಿ ಏನಿದೆ ಎಂಬುದನ್ನು ತಿಳಿಯೋಣ. ಇದನ್ನೂ ಓದಿ: ಚಂದ್ರಯಾನ-3 ಮತ್ತೊಂದು ಮೈಲಿಗಲ್ಲು: ಭೂಕಕ್ಷೆ ತೊರೆದು ಚಂದ್ರನ ಕಡೆಗೆ ಯಶಸ್ವಿ ಪ್ರಯಾಣ
Advertisement
Advertisement
ಚಂದ್ರಯಾನ-3 ಈಗ ಯಾವ ಹಂತದಲ್ಲಿದೆ?
ಚಂದ್ರಯಾನ-3 ಮೂರು ಘಟಕಗಳನ್ನು ಒಳಗೊಂಡಿದೆ. ಸ್ಥಳೀಯ ಲ್ಯಾಂಡರ್ ಮಾಡ್ಯೂಲ್ (ಎಲ್‌ಎಂ), ಪ್ರೊಪಲ್ಷನ್ ಮಾಡ್ಯೂಲ್ (ಪಿಎಂ) ಮತ್ತು ರೋವರ್. ಇವುಗಳನ್ನು ಅಂತರ ಗ್ರಹಗಳ ಕಾರ್ಯಾಚರಣೆಗಳ ವಿವಿಧ ಹಂತಗಳಲ್ಲಿ ಬಳಸಲಾಗುತ್ತದೆ.
Advertisement
ಪ್ರೊಪಲ್ಷನ್ ಮಾಡ್ಯೂಲ್, ಲ್ಯಾಂಡರ್ ಅನ್ನು ಲಾಂಚ್ ವೆಹಿಕಲ್ ಇಂಜೆಕ್ಷನ್‌ನಿಂದ ಅಂತಿಮವಾಗಿ ಚಂದ್ರನ 100 ಕಿಮೀ ವೃತ್ತಾಕಾರದ ಧ್ರುವೀಯ ಕಕ್ಷೆಯವರೆಗೆ ಒಯ್ಯುತ್ತದೆ. ಲ್ಯಾಂಡರ್ ಚಂದ್ರನ ಮೇಲ್ಮೈನ ನಿರ್ದಿಷ್ಟ ಸ್ಥಳದಲ್ಲಿ ಸೂಕ್ಷ್ಮವಾಗಿ ಇಳಿಯುವ ಮತ್ತು ಸಂಶೋಧನೆ ನಡೆಸಲು ರೋವರ್ ಅನ್ನು ನಿಯೋಜಿಸುವ ಸಾಮರ್ಥ್ಯವನ್ನು ಹೊಂದಿದೆ. ಆಗಸ್ಟ್ 1 ರಂದು ಭೂಮಿಯ ಕಕ್ಷೆಯನ್ನು ನೌಕೆ ಬಿಟ್ಟಿದೆ. ಆ ದಿನದಿಂದ ಸರಿಯಾಗಿ 5 ದಿನಕ್ಕೆ ಗಗನನೌಕೆಯು ಚಂದ್ರನ ಕಕ್ಷೆಯನ್ನು ತಲುಪಲಿದೆ. ಅಂದರೆ ಆ.5 (ಇಂದು) ಸಂಜೆ ಚಂದ್ರನ ಕಕ್ಷೆ ಸೇರಲಿದೆ. ಇದನ್ನೂ ಓದಿ: Chandrayaan-3: ಚಂದ್ರನ ಅಂಗಳದಲ್ಲಿ 3ನೇ ಹೆಜ್ಜೆ ಇಡಲು ಕ್ಷಣಗಣನೆ; ಚಂದ್ರಯಾನ-1, 2 ಕ್ಕೆ ಹೋಲಿಸಿದ್ರೆ ಚಂದ್ರಯಾನ-3 ಹೇಗೆ ಭಿನ್ನ?
Advertisement
ಮುಂದೆ ಏನಾಗುತ್ತೆ?
ಚಂದ್ರಯಾನ-3 ಗಗನನೌಕೆಯು ಆಗಸ್ಟ್ 5 ರಂದು ಚಂದ್ರನ ಕಕ್ಷೆಯನ್ನು ತಲುಪುವ ನಿರೀಕ್ಷೆಯಿದೆ. ಈ ನೌಕೆಯನ್ನು ಚಂದ್ರನ ಕಕ್ಷೆಗೆ ಸೇರಿಸಲು ದ್ರವ ಎಂಜಿನ್ ಅನ್ನು ಮತ್ತೆ ಉರಿಸಲಾಗುವುದು. ಚಂದ್ರಯಾನವು ಚಂದ್ರನನ್ನು ನಾಲ್ಕು ಬಾರಿ ಸುತ್ತುತ್ತದೆ. ಪ್ರತಿ ಸುತ್ತಿನಲ್ಲೂ ಚಂದ್ರನ ಮೇಲ್ಮೈಗೆ ಹತ್ತಿರವಾಗುತ್ತದೆ.
ಆಗಸ್ಟ್ 17 ರಂದು ಪ್ರೊಪಲ್ಷನ್ ಮಾಡ್ಯೂಲ್ ಮತ್ತು ಲ್ಯಾಂಡರ್ ಮಾಡ್ಯೂಲ್ ಅನ್ನು ಬೇರ್ಪಡಿಸುವ ಪ್ರಕ್ರಿಯೆ ನಡೆಯಲಿದೆ. ಪ್ರೊಪಲ್ಷನ್ ಮಾಡ್ಯೂಲ್‌ನಿಂದ ಲ್ಯಾಂಡರ್ ಬೇರ್ಪಟ್ಟ ನಂತರ, ಆಗಸ್ಟ್ 23 ರಂದು ಸಂಜೆ 5:47 ಕ್ಕೆ ಲ್ಯಾಂಡರ್ ಅನ್ನು ಚಂದ್ರನ ಮೇಲ್ಮೈನ ದಕ್ಷಿಣ ಧ್ರುವದ ಬಳಿ ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಗುತ್ತದೆ. ಯಶಸ್ವಿ ಲ್ಯಾಂಡಿಂಗ್ ನಂತರ, ಮಿಷನ್ ಲ್ಯಾಂಡರ್ ಮತ್ತು ರೋವರ್ ಚಂದ್ರನ ಮೇಲ್ಮೈನಲ್ಲಿ ಒಂದು ಚಂದ್ರನ ದಿನ ಅಂದ್ರೆ 14 ಭೂಮಿಯ ದಿನಗಳವರೆಗೆ ಡೇಟಾವನ್ನು ಸಂಗ್ರಹಿಸುತ್ತದೆ. ಇದನ್ನೂ ಓದಿ: ಆಸ್ಟ್ರೇಲಿಯಾದ ಬೀಚ್‌ನಲ್ಲಿ ನಿಗೂಢ ವಸ್ತು ಪತ್ತೆ – ಚಂದ್ರಯಾನ-3ರ ಬಿಡಿಭಾಗ?
ಚಂದ್ರನಲ್ಲಿ ಚಂದ್ರಯಾನ-3 ಸಂಗ್ರಹಿಸೋ ಡೇಟಾ ಏನು?
ಮೊದಲೇ ವಿವರಿಸಿದಂತೆ ಪ್ರೊಪಲ್ಷನ್ ಮಾಡ್ಯೂಲ್ ಸ್ಪೆಕ್ಟ್ರೋ-ಪೋಲಾರಿಮೆಟ್ರಿ ಆಫ್ ಹ್ಯಾಬಿಟಬಲ್ ಪ್ಲಾನೆಟ್ ಅರ್ಥ್ (SHAPE) ಪೇಲೋಡ್ ಅನ್ನು ಹೊಂದಿದೆ. ಇದು ಚಂದ್ರನ ಕಕ್ಷೆಯಿಂದ ಭೂಮಿಯ ರೋಹಿತ ಮತ್ತು ಧ್ರುವೀಯ ಅಳತೆಗಳನ್ನು ನಡೆಸಲು ವಿನ್ಯಾಸಗೊಳಿಸಲಾಗಿದೆ. ಈ ಪೇಲೋಡ್ ಭೂಮಿಯ ಗುಣಲಕ್ಷಣಗಳು ಮತ್ತು ಚಂದ್ರನ ಮೇಲ್ಮೈ ವಾತಾವರಣ ಮತ್ತು ವಾಸಯೋಗ್ಯತೆಯ ಬಗ್ಗೆ ಮೌಲ್ಯಯುತವಾದ ಡೇಟಾವನ್ನು ಒದಗಿಸುತ್ತದೆ.
ಚಂದ್ರನ ಕಾರ್ಯಾಚರಣೆಯು ಚಂದ್ರನ ಮೇಲ್ಮೈಯನ್ನು ಅನ್ವೇಷಿಸುವ ಗುರಿಯನ್ನು ಹೊಂದಿದೆ. ಅದರಲ್ಲೂ ಮುಖ್ಯವಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಅನ್ವೇಷಣೆ ನಡೆಯಲಿದೆ. ಚಂದ್ರನ ದಕ್ಷಿಣ ಧ್ರುವ ವಿಶಿಷ್ಟವಾದದ್ದು. ಅಷ್ಟೇ ಅಲ್ಲದೇ ಕುತೂಹಲಕಾರಿಯೂ ಹೌದು. ಉತ್ತರ ಭಾಗಕ್ಕೆ ಹೋಲಿಸಿದರೆ ಈ ಭಾಗ ಶಾಶ್ವತವಾಗಿ ಕತ್ತಲಿನಿಂದ ಕೂಡಿದೆ. ಈ ಪ್ರದೇಶದಲ್ಲಿ ನೀರಿನ ಅಸ್ತಿತ್ವ ಇರುವ ಸಾಧ್ಯತೆ ಇದೆ. ದಕ್ಷಿಣ ಧ್ರುವದಲ್ಲಿರುವ ಕುಳಿಗಳು ಬಹಳ ತಂಪಾಗಿದೆ. ಈ ಎಲ್ಲದರ ಬಗ್ಗೆಯೂ ಅಧ್ಯಯನ ನಡೆಸಿ ಚಂದ್ರಯಾನ-3 ಒಳನೋಟ ನೀಡುವ ನಿರೀಕ್ಷೆ ಇದೆ.
ಚಂದ್ರಯಾನ-3 ಇಸ್ರೋ ಅಪ್ಡೇಟ್ ಹೇಗಿದೆ?
ಜು.14 ರಂದು ಮಧ್ಯಾಹ್ನ 2:35 ಕ್ಕೆ ನಭಕ್ಕೆ ಹಾರಿದ ಮಾರ್ಕ್ 3 ರಾಕೆಟ್, ಲ್ಯಾಂಡರ್ ಹಾಗೂ ರೋವರ್ ಹೊಂದಿದ ನೌಕೆಯನ್ನು ಸರಿಯಾದ ಕಕ್ಷೆಗೆ ಸೇರಿಸಿತ್ತು. ಜು.15 ರಂದು ಮೊದಲ ಕಕ್ಷೆಯನ್ನು ಯಶಸ್ವಿಯಾಗಿ ಏರಿತ್ತು. ಜು.17 ರಂದು ನೌಕೆಯು ಭೂಮಿಯನ್ನು ಸುತ್ತು ಹೊಡೆದು ಎರಡನೇ ಕಕ್ಷೆಗೆ ಏರಿತು. ನಂತರ ಜು.18 ರಂದು ಮೂರನೇ ಕಕ್ಷೆಗೆ ಏರಿತು. ಯಶಸ್ವಿಯಾಗಿ ತನ್ನ ಕಾರ್ಯಾಚರಣೆಯನ್ನು ಮುಂದುವರಿಸಿ ಜು.20 ರಂದು ನಾಲ್ಕನೇ ಕಕ್ಷೆಗೆ ಏರಿತು. ಜು.25 ರಂದು ಐದನೇ ಕಕ್ಷೆಗೆ ಏರಿ ನಂತರ ಚಂದ್ರನ ಕಕ್ಷೆಗೆ ಸೇರುವ ಹಂತವನ್ನು ತಲುಪಿತ್ತು. ಈಗ ಇಸ್ರೋದ ಬಾಹ್ಯಾಕಾಶ ನೌಕೆಯು ಚಂದ್ರನ ಕಕ್ಷೆಗೆ ಸೇರಲು ಕೌಂಟ್‌ಡೌನ್ ಶುರುವಾಗಿದೆ.
Web Stories