ಚಂದ್ರನ ಮೇಲಿರುವ ಚಂದ್ರಯಾನ-3 ಲ್ಯಾಂಡರ್‌ ಫೋಟೋ ಸೆರೆ ಹಿಡಿದ ಚಂದ್ರಯಾನ-2ರ ಆರ್ಬಿಟರ್‌

Public TV
2 Min Read
rover chandrayaan 3

ನವದೆಹಲಿ: ಚಂದ್ರನ (Moon) ಮೇಲ್ಮೈನಲ್ಲಿರುವ ಲ್ಯಾಂಡರ್‌ ಮಾಡ್ಯೂಲ್‌ (Lander Module) ಮತ್ತು ರೋವರ್‌ (Rover) ತಮ್ಮ ಕಾರ್ಯಾಚರಣೆಯನ್ನು ನಡೆಸುತ್ತಿವೆ. ಇದೇ ಹೊತ್ತಿನಲ್ಲಿ ಚಂದ್ರನ ಮೇಲಿರುವ ಚಂದ್ರಯಾನ-3ರ (Chandrayaan-3) ವಿಕ್ರಮ್‌ ಲ್ಯಾಂಡರ್‌ನ ಫೋಟೋವನ್ನು ಚಂದ್ರಯಾನ-2ರ ಆರ್ಬಿಟರ್‌ (Chandrayaan-2 Orbiter) ಸೆರೆ ಹಿಡಿದಿದೆ.

ಚಂದ್ರಯಾನ-3 ಲ್ಯಾಂಡರ್‌ನ ಫೋಟೋವನ್ನು ಟ್ವಿಟ್ಟರ್‌ ಖಾತೆಯಲ್ಲಿ (ಎಕ್ಸ್‌) ಹಂಚಿಕೊಂಡಿರುವ ಇಸ್ರೋ, “ನಾನು ನಿನ್ನ ಮೇಲೆ ಕಣ್ಣಿಟ್ಟಿದ್ದೇನೆ. ಚಂದ್ರಯಾನ-3ರ ಲ್ಯಾಂಡರ್‌ನ ಫೋಟೋವನ್ನು ಚಂದ್ರಯಾನ-2 ಆರ್ಬಿಟರ್‌ ಸೆರೆ ಹಿಡಿದಿದೆ. ಚಂದ್ರಯಾನ-2 ನ ಆರ್ಬಿಟರ್ ಹೈ-ರೆಸಲ್ಯೂಶನ್ ಕ್ಯಾಮೆರಾ (OHRC) ಮೂಲಕ ಈ ಫೋಟೋ ತೆಗೆದಿದೆ” ಎಂದು ತಿಳಿಸಿದೆ. ಇದನ್ನೂ ಓದಿ: Chandrayaan-3 ಲ್ಯಾಂಡರ್‌ನಿಂದ ಚಂದ್ರನ ಮೇಲೆ ಇಳಿಯುತ್ತಿರುವ ರೋವರ್ – ವೀಡಿಯೋ ರಿಲೀಸ್ ಮಾಡಿದ ಇಸ್ರೋ

ಲ್ಯಾಂಡರ್‌ ಮತ್ತು ರೋವರ್‌ನ ಮುಂದಿನ ಕಾರ್ಯಾಚರಣೆಯನ್ನು ನಿಗದಿಪಡಿಸಲಾಗಿದೆ. ಎಲ್ಲಾ ಸಿಸ್ಟಮ್‌ಗಳು ನಾರ್ಮಲ್‌ ಆಗಿದೆ. ಲ್ಯಾಂಡರ್ ಮಾಡ್ಯೂಲ್ ಪೇಲೋಡ್‌ಗಳಾದ ILSA, RAMBHA ಮತ್ತು ChaSTE ಅನ್ನು ಆನ್ ಮಾಡಲಾಗಿದೆ. ರೋವರ್ ಮೊಬಿಲಿಟಿ ಕಾರ್ಯಾಚರಣೆಗಳು ಪ್ರಾರಂಭವಾಗಿವೆ. ಪ್ರೊಪಲ್ಷನ್ ಮಾಡ್ಯೂಲ್‌ನಲ್ಲಿನ SHAPE ಪೇಲೋಡ್ ಅನ್ನು ಭಾನುವಾರ ಆನ್‌ ಮಾಡಲಾಗಿದೆ ಎಂದು ಗುರುವಾರ ಇಸ್ರೋ ಟ್ವೀಟ್‌ ಮಾಡಿ ಮಾಹಿತಿ ಹಂಚಿಕೊಂಡಿತು.

ಚಂದ್ರಯಾನ-3 ವಿಕ್ರಮ್‌ ಲ್ಯಾಂಡರ್‌ ಆ.23 ರಂದು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಯಿತು. ಅದಾದ ಕೆಲವೇ ಗಂಟೆಗಳಲ್ಲಿ ಪ್ರಗ್ಯಾನ್‌ ರೋವರ್‌, ಲ್ಯಾಂಡರ್‌ನಿಂದ ಹೊರಬಂದು ಚಂದ್ರನ ಮೇಲೆ ತನ್ನ ವೈಜ್ಞಾನಿಕ ಅಧ್ಯಯನ ಆರಂಭಿಸಿದೆ. ಇವು ಒಂದು ಚಂದ್ರನ ದಿನ (ಭೂಮಿಯ 14 ದಿನ) ತಮ್ಮ ಕಾರ್ಯಾಚರಣೆಯನ್ನು ನಡೆಸಲಿವೆ. ಇದನ್ನೂ ಓದಿ: ಭಾರತದ ಚಂದ್ರಯಾನ-3 ಯಶಸ್ಸಿಗೆ ವಿಶ್ವಸಂಸ್ಥೆಯಲ್ಲಿ ಸಂಭ್ರಮಾಚರಣೆ

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article