ಬೆಂಗಳೂರು: ಸರಳವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಬೇನಾಮಿ ಆಸ್ತಿ ವಿಚಾರಕ್ಕೆ ಈ ಹತ್ಯೆ ನಡೆದಿದ್ಯಾ ಎಂಬ ಪ್ರಶ್ನೆ ಎದ್ದಿದೆ.
ಆಪ್ತ ಮಹಾಂತೇಶ್‌ನಿಂದಲೇ ಈ ಹತ್ಯೆ ನಡೆದಿದೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಸಿಸಿಟಿವಿ ಆಧಾರದಲ್ಲಿ ಮಹಾಂತೇಶ್‌ನನ್ನು ಗುರುತಿಸಲಾಗಿದ್ದು, ಈಗ ಮಹಾಂತೇಶ್ ಪತ್ನಿ ವನಜಾಕ್ಷಿಯನ್ನು ವಶಕ್ಕೆ ಪಡೆದಿದ್ದಾರೆ.
Advertisement
ಗೋಕುಲ ರೋಡ್ ಠಾಣೆ ಪೊಲೀಸರು ವನಜಾಕ್ಷಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮಧ್ಯಾಹ್ನ 12:23ಕ್ಕೆ ಗುರೂಜಿ ಅವರನ್ನು ಹತ್ಯೆ ಮಾಡಿದ ಬಳಿಕ ಮಹಾಂತೇಶ್ ಸ್ನೇಹಿತ ಮಂಜುನಾಥನೊಂದಿಗೆ ಪರಾರಿಯಾಗಿದ್ದಾನೆ. ಇದನ್ನೂ ಓದಿ: ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಬರ್ಬರ ಹತ್ಯೆ
Advertisement
ಹತ್ಯೆ ಮಾಡಿದ್ದು ಯಾಕೆ?
ವನಜಾಕ್ಷಿ ಸರಳವಾಸ್ತು ಸಂಸ್ಥೆಯ ಮಾಜಿ ಉದ್ಯೋಗಿಯಾಗಿದ್ದಾಳೆ. ಈ ಹಿಂದೆ ಗುರೂಜಿ ವನಜಾಕ್ಷಿ ಹೆಸರಿನಲ್ಲಿ ಹುಬ್ಬಳ್ಳಿಯ ಗೋಕುಲ ರಸ್ತೆ ಬಳಿಯ ಅಪಾರ್ಟ್‌ಮೆಂಟ್ ನಿರ್ಮಿಸಿದ್ದರು. ಈ ಬೇನಾಮಿ ಆಸ್ತಿಯನ್ನು ಗುರೂಜಿ ವಾಪಸ್ ಕೇಳಿದ್ದರು. ಈ ವಿಚಾರ ಅಲ್ಲದೇ ಹಣಕಾಸಿನ ವಿಚಾರವಾಗಿ ಕೆಲ ದಿನಗಳಿಂದ ಮಹಾಂತೇಶ್ ಮಧ್ಯೆ ಗಲಾಟೆ ನಡೆಯುತ್ತಿತ್ತು. ಇಂದು ಇದು ವಿಕೋಪಕ್ಕೆ ತಿರುಗಿ ಗುರೂಜಿ ಕೊಲೆಯಲ್ಲಿ ಅಂತ್ಯವಾಗಿರಬಹುದು ಎಂಬ ಪ್ರಾಥಮಿಕ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.
Advertisement
Advertisement
ಸ್ವಾಮೀಜಿ ಯಾರನ್ನು ದ್ವೇಷಿಸುತ್ತಿರಲಿಲ್ಲ. ಯಾರ ಮೇಲೂ ದ್ವೇಷ ಇರಲಿಲ್ಲ. ಕೊಲೆ ವಿಚಾರವನ್ನು ಕೇಳಿ ಶಾಕ್ ಆಗಿದೆ ಎಂದು ಗುರೂಜಿ ಕಚೇರಿಯ ಸಿಬ್ಬಂದಿ ಸದಾನಂದ ಹೇಳಿಕೆ ನೀಡಿದ್ದಾರೆ.
ಸಾವಿರಾರು ಕೋಟಿ ಆಸ್ತಿಗೆ ಒಡೆಯರಾಗಿದ್ದ ಚಂದ್ರಶೇಖರ ಗುರೂಜಿ ಅವರಿಗೆ ದೇಶ, ವಿದೇಶಗಳಲ್ಲೂ ಭಕ್ತರಿದ್ದಾರೆ. ಮುಂಬೈನಲ್ಲೂ ತನ್ನ ಕಚೇರಿಯನ್ನು ತೆರೆದಿದ್ದರು.