ಹುಬ್ಬಳ್ಳಿ: ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಹತ್ಯೆ ಪ್ರಕರಣದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ನಡೆದ 4 ಗಂಟೆಗಳಲ್ಲೇ ಆರೋಪಿಗಳ ಹೆಡೆಮುರಿಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರು ಮಹಾಂತೇಶ್, ಮಂಜುನಾಥ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಬರ್ಬರ ಹತ್ಯೆ
ಹತ್ಯೆ ನಂತರ ಕಾರಿನಲ್ಲಿ ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿಗಳನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.
ಹತ್ಯೆ ಹೇಗಾಯ್ತು?
ಚಂದ್ರಶೇಖರ್ ಗುರೂಜಿ ಇಂದು ಹೋಟೆಲಿನಲ್ಲಿ ತಂಗಿದ್ದರು. ಹೋಟೆಲಿನಲ್ಲಿ ತಂಗಿದ್ದ ಇವರನ್ನು ಕರೆ ಮಾಡಿದ ಇಬ್ಬರು ರಿಸೆಪ್ಶನಿಸ್ಟ್ ಜಾಗಕ್ಕೆ ಬರಲು ಹೇಳಿದ್ದಾರೆ. ಇದನ್ನೂ ಓದಿ: ಗುರೂಜಿ ಹತ್ಯೆ ಹಿಂದೆ ಬೇನಾಮಿ ಅಪಾರ್ಟ್‌ಮೆಂಟ್ ಆಸ್ತಿ ಗಲಾಟೆ? – ಆಪ್ತನ ಪತ್ನಿ ಬಂಧನ
ಗುರೂಜಿ ಇವರ ಬಳಿ ಬರುತ್ತಿದ್ದಂತೆ ಇಬ್ಬರು ಎದ್ದು ನಿಂತಿದ್ದಾರೆ. ಗುರೂಜಿ ಕುಳಿತ ಬಳಿಕ ಒಬ್ಬ ಆಶೀರ್ವಾದ ಪಡೆಯುವ ನಾಟಕ ಮಾಡಿದ್ದರೆ ಮತ್ತೊಬ್ಬ ನಿಂತಿದ್ದ. ಕೆಲ ಕ್ಷಣದಲ್ಲೇ ಮುಂದುಗಡೆ ನಿಂತಿದ್ದ ಯುವಕ ಚಾಕುವಿನಿಂದ ಇರಿದಿದ್ದಾನೆ. ಈ ವೇಳೆ ಮತ್ತೊಬ್ಬ ಚಾಕುವಿನಿಂದ ಇರಿದಿದ್ದಾನೆ. ನಂತರ ಇಬ್ಬರು ಮನ ಬಂದಂತೆ ಇರಿದು ಬರ್ಬರವಾಘಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಒಟ್ಟು 20 ಸೆಕೆಂಡ್‌ನಲ್ಲಿ 60 ಬಾರಿ ಚಾಕುವಿನಿಂದ ಇರಿಯಲಾಗಿದೆ.