ಬೆಂಗಳೂರು: ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ (Okkaliga Math) ಪೀಠಾಧ್ಯಕ್ಷರಾದ ಶ್ರಿ ಚಂದ್ರಶೇಖರ ಸ್ವಾಮೀಜಿ (Chandrashekaranatha Swamiji) ಇಹಲೋಕ ತ್ಯಜಿಸಿದ್ದು, ಮಠದ ಆವರಣದಲ್ಲೇ ನಾಥ ಸಂಪ್ರಾದಾಯದಂತೆ ಅಂತಿಮ ವಿಧಿವಿಧಾನಗಳ ಮೂಲಕ ಶ್ರೀಗಳ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀಗಳು ತಡರಾತ್ರಿ 12 ಗಂಟೆ ಸುಮಾರಿಗೆ ನಿಧನ ಹೊಂದಿದ್ದಾರೆ. ಕೆಂಗೇರಿಯ ಮಠದ ಆವರಣದಲ್ಲಿ ಬೆಳಗ್ಗೆಯಿಂದಲೇ ಶ್ರೀಗಳ ಪಾರ್ಥಿವ ಶರೀರವನ್ನ ಭಕ್ತರ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಇದನ್ನೂ ಓದಿ: ಧರ್ಮಸ್ಥಳದ ಬುಡಕ್ಕೆ ಕೈ ಹಾಕುವ ಕೆಲ್ಸ ಆಗ್ತಿದೆ: ವಿಶ್ವನಾಥ್
ಮಾಜಿ ಪ್ರಧಾನಿ ಹೆಚ್ ಡಿ ದೇವೆಗೌಡ, ಡಿಸಿಎಂ ಡಿಕೆ ಶಿವಕುಮಾರ್, ಸಚಿವ ಚೆಲುವರಾಯಸ್ವಾಮಿ, ವಿಪಕ್ಷ ನಾಯಕ ಆರ್ ಅಶೋಕ್, ಬಿಜೆಪಿ ರಾಜ್ಯಧ್ಯಕ್ಷ ವಿಜಯೇಂದ್ರ, ಸೇರಿದಂತೆ ಹಲವು ನಾಯಕರು ಮತ್ತು ಸುತ್ತೂರು ಶ್ರೀಗಳು, ಆದಿಚುಂಚನಗಿರಿ ಮಠದ ಶ್ರೀಗಳು ಸೇರಿದಂತೆ ಹಲವು ಮಠಾಧೀಶರು ಶ್ರೀಗಳ ಅಂತಿಮ ದರ್ಶನ ಪಡೆದರು. ಶ್ರೀಗಳ ಕೊಡುಗೆ, ಬದುಕಿದ ಮಾರ್ಗದ ಸಂಬಂಧ ನೆನೆದು ಹಲವರು ಭಾವುಕರಾದರು. ಇದನ್ನೂ ಓದಿ: ಭಾನುವಾರ ಭಾರತಕ್ಕೆ ಶುಭಾಂಶು ಶುಕ್ಲಾ: ಆಕ್ಸಿಯಂ ಸ್ಪೇಸ್ ಮಿಷನ್ ಬಳಿಕ ತವರಿಗೆ ಮೊದಲ ಭೇಟಿ