‘ಗಿಚ್ಚಿ ಗಿಲಿಗಿಲಿ’ (Gichchi Gili Gili) ವಿನ್ನರ್ ಚಂದ್ರಪ್ರಭಾ (Chandraprabha) ಕಳೆದ ಎರಡ್ಮೂರು ದಿನಗಳಿಂದ ಸುದ್ದಿಯಲ್ಲಿದ್ದಾರೆ. ಹಿಟ್ & ರನ್ ಕೇಸ್ ವಿಚಾರವಾಗಿ ಚಂದ್ರಪ್ರಭಾ ಚಿಕ್ಕಮಗಳೂರು ನಗರದ ಸಂಚಾರಿ ಠಾಣೆಗೆ ಹಾಜರಾಗಿದ್ದಾರೆ. ಸೆ.4ರಂದು ಯುವಕ ಮಾಲ್ತೇಶ್‍ಗೆ ಅಪಘಾತ ಮಾಡಿ ಚಂದ್ರಪ್ರಭಾ ಎಸ್ಕೇಪ್ ಆಗಿದ್ದರು. ಸದ್ಯ ಅಪಘಾತಕ್ಕೀಡಾದ ಯುವಕನಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Advertisement
ಚಂದ್ರಪ್ರಭಾ ಹಿಟ್ & ರನ್ ಕೇಸ್ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದಂತೆ ಆಕ್ಸಿಡೆಂಟ್ ಆಗಿರುವ ಯುವಕನನ್ನು ಆಸ್ಪತ್ರೆಗೆ ಸೇರಿಸಿದ್ದೇನೆ ಎಂದು ಚಂದ್ರಪ್ರಭಾ ಸುಳ್ಳು ಹೇಳಿಕೆ ನೀಡಿದ್ದರು. ಅಂದು ಒಂದು ಹೇಳಿ ಇಂದು ಚಂದ್ರಪ್ರಭಾ ಯೂಟರ್ನ್ ಹೊಡೆದಿದ್ದಾರೆ. ಅಪಘಾತದ ಬಗ್ಗೆ ಇದೀಗ ಚಿಕ್ಕಮಗಳೂರು ಠಾಣೆಯ ಎದುರು ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ:ಬಾಲಿವುಡ್‌ನತ್ತ ರಿಷಬ್ ಶೆಟ್ಟಿ- ಐತಿಹಾಸಿಕ ಪಾತ್ರದಲ್ಲಿ ಕಾಂತಾರ ಶಿವ
Advertisement
Advertisement
ನಾನು ಮಾಡಿದ ಕೆಲಸ ತಪ್ಪಾಯ್ತು ಎಲ್ಲರಿಗೂ ಕ್ಷಮೆ ಕೇಳುತ್ತೇನೆ. ಆತ ಕುಡಿದಿದ್ದ ಎಂದು ಹೇಳಿದ್ದೆ, ಮಾಲ್ತೇಶ್ ಕುಡಿದಿರಲಿಲ್ಲ. ಅಂದು ಅಪಘಾತದ ಬಳಿಕ ಯುವಕನ ಯೋಗಕ್ಷೇಮ ವಿಚಾರಿಸಬೇಕಿತ್ತು. ಈ ವಿಚಾರವಾಗಿ ಕ್ಷಮೆ ಕೇಳುತ್ತೇನೆ. ನಾನು ಬಡವ, ತಂದೆ ಸತ್ತು 11 ವರ್ಷವಾಗಿದೆ. ಆಸ್ಪತ್ರೆಗೆ ಹೋಗಿ ಯುವಕನ ಯೋಗಕ್ಷೇಮ ವಿಚಾರಿಸುತ್ತೇನೆ. ಮಾಲ್ತೇಶ್ ಆಸ್ಪತ್ರೆಯ ಖರ್ಚಿಗೆ ನನ್ನ ಕೈಲಾದ ಸಹಾಯ ಮಾಡುತ್ತೇನೆ ಎಂದು ಚಂದ್ರಪ್ರಭಾ ಮಾಧ್ಯಮಕ್ಕೆ ಮಾತನಾಡಿದ್ದಾರೆ.
Advertisement
ಸೆ.4ರಂದು ಚಂದ್ರಪ್ರಭಾ ಅವರು ಯುವಕ ಮಾಲ್ತೇಶ್‍ಗೆ ಅಪಘಾತ ಮಾಡಿ ಗಾಡಿ ನಿಲ್ಲಿಸದೇ ಪರಾರಿಯಾಗಿದ್ದರು. ಅಪಘಾತಕ್ಕೀಡಾದ ಮಾಲ್ತೇಶ್ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರು. ಮಾನವೀಯತೆಗೂ ಚಂದ್ರಪ್ರಭಾ, ಅಪಘಾತದ ಸ್ಥಳದಲ್ಲಿ ಯುವಕನಿಗೆ ಏನಾಯ್ತು ಎಂದು ನೋಡಲು ಸಹ ಬಂದಿರಲಿಲ್ಲ. ಚಿಕ್ಕಮಗಳೂರಿನ ಸ್ಥಳಿಯ ಪೊಲೀಸ್ ಠಾಣೆಯಲ್ಲಿ ಚಂದ್ರಪ್ರಭಾ ವಿರುದ್ಧ ದೂರು ದಾಖಲಾಗಿತ್ತು. ಇದೀಗ ಇಂದು (ಸೆ.8) ಚಿಕ್ಕಮಗಳೂರಿನ ಪೊಲೀಸರ ಸೂಚನೆಯ ಮೇರೆಗೆ ಅಪಘಾತವಾದ ಕಾರಿನ ಜೊತೆಯೇ ಚಂದ್ರಪ್ರಭಾ ಬಂದಿದ್ದಾರೆ.