ಬಿಗ್ ಬಾಸ್ ಮನೆಯಿಂದ ಚಂದ್ರಪ್ರಭ ಹೊರಬಂದಿದ್ದಾರೆ. ಕೊನೆ ಘಳಿಗೆಯಲ್ಲಿ ತಾನು ಬಯಸಿದಂತೆಯೇ ಮನೆಯಿಂದ ಔಟ್ ಆಗಿದ್ದಾರೆ.
ಈ ವಾರ ಬಿಗ್ ಬಾಸ್ ಮನೆಯಲ್ಲಿ 10 ಮಂದಿ ನಾಮಿನೇಟ್ ಆಗಿದ್ದರು. ಅವರಲ್ಲಿ ಚಂದ್ರಪ್ರಭ ಕೂಡ ಒಬ್ಬರು. ಕಿಚ್ಚನ ಪಂಚಾಯ್ತಿಯಲ್ಲಿ ಸುದೀಪ್ ಅವರು ವೋಟ್ ಪ್ರಕಾರ ಒಬ್ಬೊಬ್ಬರನ್ನೇ ಸೇವ್ ಮಾಡುತ್ತಾ ಬಂದರು. ಕೊನೆಯಲ್ಲಿ ಕಾಕ್ರೋಚ್ ಸುಧಿ ಮತ್ತು ಚಂದ್ರಪ್ರಭ ಉಳಿದುಕೊಂಡಿದ್ದರು.
ಎಲಿಮಿನೇಷನ್ ಭೀತಿಯಲ್ಲಿದ್ದ ಕಾಕ್ರೋಚ್ ಸುಧಿ ತಮಗೆ ಸಿಕ್ಕಿರುವ ಸ್ಪೆಷಲ್ ಪವರ್ ಬಳಸಿಕೊಂಡು ಸೇವ್ ಆದರು. ಆದರೆ, ಕೊನೆಯಲ್ಲಿ ಚಂದ್ರಪ್ರಭ ಹೊರಬರಬೇಕಾಯಿತು.
ಕಿಚ್ಚನ ಪಂಚಾಯ್ತಿ ವೇಳೆ ಚಂದ್ರಪ್ರಭ ಡಲ್ ಆಗಿದ್ದರು. ಸುದೀಪ್ ಎದುರೇ ಎದ್ದು ಹೊರನಡೆದಿದ್ದರು. ಚಂದ್ರಪ್ರಭನ ನಡೆಗೆ ಸ್ಪರ್ಧಿಗಳು ಶಾಕ್ ಆದರು. ಕೊನೆಗೆ ಮನವೊಲಿಸಿ ಮನೆಯೊಳಗಡೆ ಕರೆತಂದರು. ಗಿಲ್ಲಿ ಮೇಲೆ ಕೈಮಾಡಿ ವಿವಾದಕ್ಕೆ ಸಿಲುಕಿದ್ದ ರಿಷಾ ಅವರನ್ನು ಮನೆಯಲ್ಲೇ ಉಳಿಸಿಕೊಳ್ಳಬೇಕಾ ಅಥವಾ ಬೇಡವಾ ಎಂಬ ಬಗ್ಗೆ ಸ್ಪರ್ಧಿಗಳಿಂದ ಬಿಗ್ ಬಾಸ್ ಅಭಿಪ್ರಾಯ ಕೇಳುತ್ತಿದ್ದರು. ಅದರಲ್ಲಿ ಪಾಲ್ಗೊಂಡಾಗ, ‘ಯಾಕೆ ಹೊರಹೋಗಿದ್ದು’ ಎಂದು ಚಂದ್ರಪ್ರಭಗೆ ಸುದೀಪ್ ಅವರು ಪ್ರಶ್ನೆ ಮಾಡಿದರು. ‘ನನಗೆ ಮನೆಯಲ್ಲಿ ಇರೋದಕ್ಕೆ ಇಷ್ಟ ಇಲ್ಲ’ ಎಂದು ಚಂದ್ರಪ್ರಭ ಮಾತನಾಡಿದರು. ‘ಇದನ್ನು ನಾವು ತೀರ್ಮಾನಿಸಲ್ಲ. ಜನರಿಗೆ ನೀವು ಇಷ್ಟ ಆಗಲಿಲ್ಲ ಅಂದ್ರೆ, ಅವರೇ ಹೊರಗೆ ಕಳಿಸುತ್ತಾರೆ’ ಎಂದು ಸುದೀಪ್ ಸಮಾಧಾನಪಡಿಸಿದ್ದರು. ಆದರೆ, ಕೊನೆಗೆ ಚಂದ್ರಪ್ರಭ ಎಲಿಮಿನೇಟ್ ಆಗಿದ್ದಾರೆ.

