ಬೆಂಗಳೂರು: ನೋಟ್‍ಬ್ಯಾನ್ ಬಳಿಕ ಐಟಿ ರೇಡ್‍ನಲ್ಲಿ ಸಿಕ್ಕಿಬಿದ್ದು ಜೈಲು ಸೇರಿ ರಿಲೀಸ್ ಆಗಿರುವ ರಾಮಲಿಂಗಂ ಕನ್‍ಸ್ಟ್ರಕ್ಷನ್ ಮಾಲೀಕ ಚಂದ್ರಕಾಂತ್ ಈಗ ಶಶಿಕಲಾ ಕೇರ್‍ಟೇಕರ್ ಆಗಿದ್ದಾರೆ.
ಜೈಲಾಧಿಕಾರಿಗಳ ಸ್ನೇಹ ಸಂಪಾದನೆ ಮಾಡಿದ್ದ ಚಂದ್ರಕಾಂತ್ ಅಧಿಕಾರಿಗಳ ಮೂಲಕ ಚಿನ್ನಮ್ಮನ ಚೆನ್ನಾಗಿ ನೋಡಿಕೊಳ್ಳುವ ಜವಾಬ್ದಾರಿ ತೆಗೆದುಕೊಂಡಿದ್ದಾರೆ ಎನ್ನುವ ಮಾಹಿತಿ ಪಬ್ಲಿಕ್ ಟಿವಿಗೆ ಸಿಕ್ಕಿದೆ.
Advertisement
ಶಶಿಕಲಾ ಬಂಟನಾಗಿರುವ ಸಿಎಂ ಪಳನಿಸ್ವಾಮಿಯ ಮಗ ಮಿಥುನ್ ಮತ್ತು ಚಂದ್ರಕಾಂತ್ ಸಹೋದರ ಸೂರ್ಯಕಾಂತ್ ಮದುವೆಯಾಗಿರೋದು ಅಕ್ಕ-ತಂಗಿಯರನ್ನಂತೆ. ಹೀಗಾಗಿ, ಚಂದ್ರಕಾಂತ್ ಮತ್ತು ಪಳನಿಸ್ವಾಮಿ ಸಂಬಂಧಿಗಳೇ.
Advertisement
ಈರೋಡು ಮೂಲದ ಅಡ್ವೊಕೇಟ್ ಸುಬ್ರಹ್ಮಣ್ಯ ಪುತ್ರಿ ದಿವ್ಯಾ ಅನ್ನೋವ್ರನ್ನ ಪಳನಿಸ್ವಾಮಿ ಪುತ್ರ ಮಿಥುನ್ ಮದುವೆಯಾಗಿದ್ದಾರೆ. ಅಡ್ವೊಕೇಟ್ ಸುಬ್ರಹ್ಮಣ್ಯಗೆ ಕಪ್ಪುಕುಳ ಶೇಖರ್ ರೆಡ್ಡಿ ಬಿಸಿನೆಸ್ ಪಾರ್ಟ್‍ನರ್ ಎನ್ನುವ ವಿಚಾರ ಈಗ ಬೆಳಕಿಗೆ ಬಂದಿದೆ.
Advertisement
ಈ ಮಧ್ಯೆ, ಜಯಲಲಿತಾ ಆಸ್ಪತ್ರೆ ಸೇರಿದಾಗ ತಮಿಳುನಾಡಿನ ರಾಜಕೀಯ ಭವಿಷ್ಯದ ಲೆಕ್ಕಾಚಾರ ಹಾಕಿದ್ದ ಪ್ರಧಾನಿ ಮೋದಿಯವರು ಪನ್ನಿರ್ ಸೆಲ್ವಂ ಬಳಸಿಕೊಂಡು ಪಳನಿಸ್ವಾಮಿ ಆಪ್ತರು ಮತ್ತು ಶೇಖರ್‍ರೆಡ್ಡಿ, ಚಂದ್ರಕಾಂತ್ ಮೇಲೆ ಐಟಿ ರೇಡ್ ಮಾಡಿಸಿದ್ರು ಎನ್ನುವ ಮಾತು ಈಗ ಕೇಳಿ ಬರುತ್ತಿದೆ.