– ಸಂಪ್ರದಾಯ, ಭಕ್ತರ ನಂಬಿಕೆಗಳನ್ನ ಗೌರವಿಸಿ ಎಂದ ಹಾಲಿ ಸಿಎಂ
ತಿರುಪತಿ: ಆಂಧ್ರ ರಾಜಕೀಯದಲ್ಲಿ ತಿರುಪತಿ ಲಡ್ಡು ರಾಜಕೀಯ ತೀವ್ರ ಸ್ವರೂಪ ಪಡೆದುಕೊಂಡಿದೆ. ಭಾರೀ ಹೈಡ್ರಾಮಾ, ತೀವ್ರ ವಿರೋಧದ ನಡುವೆ ಮಾಜಿ ಸಿಎಂ ವೈ.ಎಸ್ ಜಗನ್ ಮೋಹನ್ ರೆಡ್ಡಿ (Jagan Mohan Reddy) ತಿರುಪತಿಗೆ ಭೇಟಿಯನ್ನು ರದ್ದು ಮಾಡಿಕೊಂಡರು. ದೇವರ ದರ್ಶನಕ್ಕೆ ಹೋಗ್ತಿದ್ರೆ ನೊಟೀಸ್ ಕೊಟ್ಟು ತಡೆ ಹಿಡೀತಿದ್ದಾರೆ ಎಂದು ಚಂದ್ರಬಾಬು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ರು. ದೇವರ ದರ್ಶನಕ್ಕೆ ಹೋಗ್ತಿದ್ದಾಗ ಅಡ್ಡಿಪಡಿಸಿರೋದು ದೇಶದಲ್ಲೇ ಇದು ಮೊದಲ ಕೇಸ್. ಆಂಧ್ರದಲ್ಲಿ ರಾಕ್ಷಸ ರಾಜ್ಯವಿದೆ ಎಂದು ಜಗನ್ ವಾಗ್ದಾಳಿ ನಡೆಸಿದ್ರು.
ಲಡ್ಡು ವಿವಾದವನ್ನು (Tirupati Laddu Controversy) ಮರೆಮಾಚಲು ಡಿಕ್ಲರೇಷನ್ ವಿಚಾರ ದೊಡ್ಡದು ಮಾಡಿದ್ದಾರೆ. ಬರೆದುಕೊಳ್ಳಿ ನನ್ನ ಮತ ಮಾನವೀಯತೆ.. ನಾಲ್ಕು ಗೋಡೆ ಮಧ್ಯೆ ಬೈಬಲ್ ಓದುತ್ತೇನೆ.. ಹೊರಗೆ ಹೋದ್ರೆ ಎಲ್ಲಾ ಧರ್ಮ ಗೌರವಿಸ್ತೇನೆ.. ಹಿಂದೂ ಆಚರಣೆ ಮಾಡ್ತೇನೆ ಎಂದಿದ್ದಾರೆ. ಧರ್ಮದ ಹೆಸರಲ್ಲಿ ಕೀಳು ರಾಜಕೀಯ ನಡೀತಿದೆ ಎಂದು ಜಗನ್ ಕಿಡಿಕಾರಿದ್ದಾರೆ. ಈ ಮಧ್ಯೆ, ಲಡ್ಡು ವಿವಾದಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆಯನ್ನು ಅಕ್ಟೋಬರ್ 4ಕ್ಕೆ ಸುಪ್ರೀಂ ಕೋರ್ಟ್ ಮುಂದೂಡಿದೆ. ಇದನ್ನೂ ಓದಿ: MUDA Case| ರಾಜಧರ್ಮ ಪಾಲಿಸದಿದ್ದರೆ ಅದು ರಾವಣ ರಾಜ್ಯ ಆಗಲಿದೆ: ಕೋರ್ಟ್ ಆದೇಶದಲ್ಲಿ ಏನಿದೆ?
ಜಗನ್ V/S ಚಂದ್ರಬಾಬು ನಾಯ್ಡು:
ಇನ್ನೂ ಮಾಜಿ ಸಿಎಂ ಜಗನ್ ತಿರುಪತಿ ವೆಂಕಟೇಶ್ವರ ದೇವಸ್ಥಾನ ಭೇಟಿಯನ್ನು ಮುಂದೂಡಿದ ಬಳಿಕ ಮತ್ತು ಹಾಲಿ ಮುಖ್ಯಮಂತ್ರಿಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಜಗನ್ ತಿರುಪತಿ ಭೇಟಿ ರದ್ದುಗೊಳಿಸಿದ ಬಗ್ಗೆ ಸಿಎಂ ಚಂದ್ರಬಾಬು ನಾಯ್ಡು (Chandrababu Naidu) ಪ್ರತಿಕ್ರಿಯಿಸಿದ್ದಾರೆ. ಜಗನ್ ತಿರುಮಲ ದೇವಸ್ಥಾನಕ್ಕೆ ತೆಲುಗು ದೇಶಂ ಪಕ್ಷ (ಟಿಡಿಪಿ) ಸರ್ಕಾರ ಅಡ್ಡಿಪಡಿಸಿದೆ ಎಂದು ಸುಳ್ಳು ಹರಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಯಾರಾದರೂ ನಿಮ್ಮನ್ನು ಹೋಗದಂತೆ ತಡೆದಿದ್ದಾರಾ? ನೋಟಿಸ್ ಇದ್ದರೇ ಮಾಧ್ಯಮದವರಿಗೆ ತೋರಿಸಿ, ಏಕೆ ಸುಳ್ಳುಗಳನ್ನು ಹರಡುತ್ತಿದ್ದೀರಿ? ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಗಂಗೇನಹಳ್ಳಿ ಡಿನೋಟಿಫಿಕೇಷನ್ ಪ್ರಕರಣ; 1 ಗಂಟೆ ಲೋಕಾಯುಕ್ತ ವಿಚಾರಣೆ ಎದುರಿಸಿದ ಕೇಂದ್ರ ಸಚಿವ ಹೆಚ್‌ಡಿಕೆ
ಸಾರ್ವಜನಿಕ ಜೀವನದಲ್ಲಿ ಜನರು ಸಂಪ್ರದಾಯಗಳನ್ನು ಅನುಸರಿಸಬೇಕು ಮತ್ತು ಏನು ಮಾಡಬೇಕೋ ಅದನ್ನು ಮಾಡಲೇಬೇಕು. ಪೂಜಾ ಸ್ಥಳಕ್ಕೆ ಭೇಟಿ ನೀಡಬೇಕಾದ್ರೆ, ಅಲ್ಲಿನ ಸಂಪ್ರದಾಯಗಳನ್ನು ಗೌರವಿಸಬೇಕು. ಸಂಪ್ರದಾಯಗಳನ್ನು ಮತ್ತು ಭಕ್ತರ ನಂಬಿಕೆಗಳನ್ನು ಅಗೌರವಗೊಳಿಸಬಾರದು. ಏಕೆಂದರೆ ಅಲ್ಲಿನ ನಂಬಿಕೆಗಳಿಗಿಂತ ಯಾರೂ ಮೇಲಲ್ಲ, ಯಾರೂ ದೇವರಲ್ಲ ಎಂದು ತಿರುಗೇಟು ನೀಡಿದ್ದಾರೆ.