ಹೈದರಾಬಾದ್: ಆಂಧ್ರಪ್ರದೇಶ ಸಿಎಂ, ತೆಲುಗುದೇಶಂ (ಟಿಡಿಪಿ) ಪಕ್ಷದ ಮುಖ್ಯಸ್ಥರಾಗಿರುವ ಚಂದ್ರಬಾಬು ನಾಯ್ಡು ಸತತವಾಗಿ 8ನೇ ವರ್ಷ ತಮ್ಮ ಆಸ್ತಿ ವಿವರಗಳನ್ನು ಘೋಷಣೆ ಮಾಡಿದ್ದು, ಅವರಿಗಿಂತ ಮೊಮ್ಮಗ 6 ಪಟ್ಟು ಹೆಚ್ಚು ಆಸ್ತಿಯನ್ನು ಹೊಂದಿದ್ದಾನೆ.
ಚಂದ್ರಬಾಬು ನಾಯ್ಡು ತನ್ನ ಬಳಿ 2.99 ಕೋಟಿ ರೂ. ಆಸ್ತಿ ಇದೆ ಎಂದು ಘೋಷಣೆ ಮಾಡಿಕೊಂಡಿದ್ದಾರೆ. ಆದರೆ ಅವರ 3 ವರ್ಷದ ಮೊಮ್ಮದ ನಾರಾ ದೇವಾಂಶ್ 18.71 ಕೋಟಿ ಆಸ್ತಿಯನ್ನು ಹೊಂದಿದ್ದಾನೆ.
Advertisement
Advertisement
ಕಳೆದ ವರ್ಷಕ್ಕಿಂತ ಈ ಬಾರಿ ನಾಯ್ಡು ಅವರ ಆಸ್ತಿ 46 ಲಕ್ಷ ರೂ. ಹೆಚ್ಚಾಗಿದೆ. ಆದರೆ ಕಳೆದ ಬಾರಿ ಹೂಡಿಕೆ ಮಾಡಿದ್ದ 5.64 ಕೋಟಿ ರೂ. ಮೊತ್ತ 5.31 ಕೋಟಿ ರೂ.ಗೆ ಇಳಿಕೆ ಆಗಿದೆ.
Advertisement
ನಾಯ್ಡು ಅವರ ಮೊಮ್ಮಗ 16.17 ಕೋಟಿ ರೂ. ಮೌಲ್ಯದ ಮನೆಯನ್ನು ಹೈದರಾಬಾದ್‍ನ ಜುಬ್ಲಿ ಹಿಲ್ಸ್ ನಲ್ಲಿ ಹೊಂದಿದ್ದು, 2.49 ಕೋಟಿ ರೂ. ಠೇವಣಿ ಇಟ್ಟಿದ್ದಾರೆ. ಹೆರಿಟೇಜ್ ಫುಡ್ಸ್ ಸಂಸ್ಥೆಯ ಮುಖ್ಯಸ್ಥರಾಗಿರುವ ನಾಯ್ಡು ಅವರ ಪತ್ನಿ ಭುವನೇಶ್ವರಿ ಅವರು ಕುಟುಂಬದಲ್ಲಿ ಹೆಚ್ಚು ಆಸ್ತಿಯನ್ನು ಹೊಂದಿದ್ದಾರೆ. ಕಳೆದ ಬಾರಿ 25.41 ಕೋಟಿ ರೂ. ಇದ್ದ ಅವರ ಆಸ್ತಿ ಈಗ 31.01 ಕೋಟಿ ರೂ.ಗೆ ಏರಿಕೆಯಾಗಿದೆ.
Advertisement
ಅಂದಹಾಗೇ ದೇವಾಂಶ್, ಚಂದ್ರಬಾಬು ನಾಯ್ಡು ಮಾತ್ರವಲ್ಲದೇ ತಂದೆ ನಾರಾ ಲೋಕೇಶ್ ಅವರಗಿಂತಲೂ ಹೆಚ್ಚಿನ ಆಸ್ತಿಯನ್ನು ಹೊಂದಿದ್ದಾನೆ. ಲೋಕೇಶ್ ಟಿಡಿಪಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದು, ಈ ಬಾರಿ ಅವರ ಆಸ್ತಿಯಲ್ಲಿ 15.21 ಕೋಟಿ ರೂ. ಹೆಚ್ಚಳವಾಗಿದೆ. 2017 ರಲ್ಲಿ ಲೋಕೇಶ್ 21.40 ಕೋಟಿ ರೂ. ಆಸ್ತಿ ಹೊಂದಿದ್ದರು. ಉಳಿದಂತೆ ಲೋಕೇಶ್ ಅವರ ಪತ್ನಿ ಬ್ರಹ್ಮಣಿ ಅವರ ಆಸ್ತಿ ಕಳೆದ ಬಾರಿಗಿಂತ ಕಡಿಮೆ ಆಗಿದ್ದು, 15.01 ಕೋಟಿ ರೂ. ಆಸ್ತಿ ಹೊಂದಿದ್ದ ಅವರು ಈ ಬಾರಿ 7.72 ಕೋಟಿ ರೂ. ಆಸ್ತಿ ಹೊಂದಿರುವುದಾಗಿ ಘೋಷಣೆ ಮಾಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv