ಅಮರಾವತಿ: ಆಂಧ್ರಪ್ರದೇಶ (Andhra Pradesh) ರಾಜ್ಯ ವಕ್ಫ್ ಮಂಡಳಿಯನ್ನು (Waqf Board) ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು (Chandrababu Naidu) ನೇತೃತ್ವದ ಸರ್ಕಾರ ವಿಸರ್ಜಿಸಿದೆ.
ಹಿಂದಿನ ವೈಎಸ್ಆರ್ ಕಾಂಗ್ರೆಸ್ ಆಡಳಿತದಿಂದ ನಾಮನಿರ್ದೇಶನಗೊಂಡ ರಾಜ್ಯ ವಕ್ಫ್ ಮಂಡಳಿಯನ್ನು ವಿಸರ್ಜಿಸಲಾಗಿದೆ. ವಕ್ಫ್ (ತಿದ್ದುಪಡಿ) ಮಸೂದೆ, 2024ರ ವಿರುದ್ಧ ನಡೆಯುತ್ತಿರುವ ಕೋಲಾಹಲದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಈಗಾಗಲೇ ನನ್ನ ಬೇಷರತ್ ಬೆಂಬಲ ನೀಡಿದ್ದೇನೆ: ‘ಮಹಾ’ ಸಿಎಂ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಗೆ ಶಿಂಧೆ ಬೆಂಬಲ
Advertisement
Advertisement
ನ.30 ರ ದಿನಾಂಕದ ಆದೇಶದಲ್ಲಿ, ವೈಎಸ್‌ಆರ್‌ಸಿ ಆಡಳಿತದಿಂದ ರಚಿಸಲ್ಪಟ್ಟ ರಾಜ್ಯ ವಕ್ಫ್ ಬೋರ್ಡ್ ದೀರ್ಘಕಾಲದ ವರೆಗೆ (ಮಾರ್ಚ್ 2023 ರಿಂದ) ಕಾರ್ಯನಿರ್ವಹಿಸುತ್ತಿಲ್ಲ ಎಂದು ರಾಜ್ಯ ಸರ್ಕಾರವು ಗಮನಿಸಿದೆ.
Advertisement
ಆಗ ರಚನೆಯಾದ ವಕ್ಫ್ ಬೋರ್ಡ್ ಒಟ್ಟು 11 ಸದಸ್ಯರನ್ನು ಹೊಂದಿತ್ತು. ಅವರಲ್ಲಿ ಮೂವರು ಚುನಾಯಿತರು. ಉಳಿದ ಎಂಟು ಮಂದಿ ನಾಮನಿರ್ದೇಶನಗೊಂಡವರು. ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಜೈಲಲ್ಲಿದ್ದ ಟೆರರಿಸ್ಟ್‌ಗಳು ಈಗ ರಿಲೀಸ್ ಆಗಿದ್ದಾರೆ: ತ್ರಿಪುರಾ ಸಿಎಂ ಕಳವಳ
Advertisement
ಮಂಡಳಿಯನ್ನು ರಚಿಸಲು ಅನುಸರಿಸಿದ ಪ್ರಕ್ರಿಯೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಆಂಧ್ರಪ್ರದೇಶದ ಹೈಕೋರ್ಟ್ 2023ರ ನ.1 ರಂದು ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷರ ಆಯ್ಕೆಗೆ ತಡೆ ನೀಡಿತ್ತು.