ನವದೆಹಲಿ: ಚುನಾವಣೆಯಲ್ಲಿ ಗೆಲ್ಲುವವರೆಗೂ ರಾಜ್ಯ ವಿಧಾನಸಭೆಗೆ ಕಾಲಿಡುವುದಿಲ್ಲ ಎಂದು ತೆಲುಗು ದೇಶಂ ಪಕ್ಷದ(ಟಿಡಿಪಿ) ಅಧ್ಯಕ್ಷ ಮತ್ತು ಆಂಧ್ರಪ್ರದೇಶದ ಮಾಜಿ ಸಿಎಂ ಎನ್.ಚಂದ್ರಬಾಬು ನಾಯ್ಡು ಪ್ರತಿಜ್ಞೆ ಮಾಡಿದರು.
ವಿಧಾನಸಭೆಯಲ್ಲಿ ಚಳಿಗಾಲದ ಅಧಿವೇಶನದ ಎರಡನೇ ದಿನದಂದು ಮಹಿಳಾ ಸಬಲೀಕರಣ ಕುರಿತು ಚರ್ಚೆ ನಡೆಯುತ್ತಿದ್ದು, ಅದನ್ನು ನಾಯ್ದು ಅವರು ಅರ್ಧದಲ್ಲಿಯೇ ಬಿಟ್ಟು ವಿಧಾನಸಭೆಯಿಂದ ಹೊರನಡೆಯುವ ಮೊದಲು ಕಣ್ಣೀರು ಹಾಕಿಕೊಂಡು ಮಾಧ್ಯಮಗಳೊಂದಿಗೆ ಮಾತನಾಡಿದರು. ಈ ವೇಳೆ ಅವರು, ಚುನಾವಣೆಯಲ್ಲಿ ನಾವು ಗೆಲ್ಲುವವರೆಗೂ ರಾಜ್ಯ ವಿಧಾನಸಭೆಗೆ ಕಾಲಿಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ ಅವರು ತಮ್ಮ ಮುಖವನ್ನು ಮುಚ್ಚಿಕೊಂಡು, ಕೆಲವು ನಿಮಿಷಗಳ ಕಾಲ ಮಾತನಾಡಲು ಸಾಧ್ಯವಾದೆ ಭಾವುಕರಾದರು. ಇದನ್ನೂ ಓದಿ: ಈಗಲೂ ರೈತರು ಪ್ರತಿಭಟನೆ ಮಾಡುತ್ತಿರುವುದು ಯಾಕೆ – ಅಮರಿಂದರ್ ಪ್ರಶ್ನೆ
Advertisement
#WATCH | Former Andhra Pradesh CM & TDP chief Chandrababu Naidu breaks down at PC in Amaravati
He likened the Assembly to ‘Kaurava Sabha’ & decided to boycott it till 2024 in protest against ‘ugly character assassinations’ by YSRCP ministers & MLAs, says TDP in a statement pic.twitter.com/CKmuuG1lwy
— ANI (@ANI) November 19, 2021
Advertisement
ಆಡಳಿತಾರೂಢ ವೈಎಸ್‍ಆರ್ ಕಾಂಗ್ರೆಸ್ ಪಕ್ಷದ(ವೈಎಸ್‌ಆರ್‌ಸಿಪಿ) ಶಾಸಕರು ತಮ್ಮ ಪತ್ನಿ ಭುವನೇಶ್ವರಿ ಅವರ ಬಗ್ಗೆ ವೈಯಕ್ತಿಕ ಟೀಕೆಗಳನ್ನು ಮಾಡುವ ಮೂಲಕ ತಮ್ಮನ್ನು ಅವಮಾನಿಸಿದ್ದಾರೆ. ತಮ್ಮ ರಾಜಕೀಯ ಜೀವನದಲ್ಲಿ ಇಂತಹ ಅವಮಾನವನ್ನು ಎದುರಿಸಿಲ್ಲ ಎಂದು ಆರೋಪಿಸಿ ನಾಯ್ಡು ಭಾವುಕರಾಗಿ ಹರಿಹಾಯ್ದರು.
Advertisement
ನನ್ನ ಪತ್ನಿ ಎಂದಿಗೂ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಿಲ್ಲ, ಆದರೆ ವೈಎಸ್‍ಆರ್‍ಸಿಪಿ ನಾಯಕರು ಅವರ ಹೆಸರನ್ನು ಎಳೆದುಕೊಂಡು ಚಾರಿತ್ರ್ಯವಧೆಗೆ ಮುಂದಾಗಿದ್ದಾರೆ. ನನ್ನ ತಂದೆ ಎನ್‍ಟಿ ರಾಮರಾವ್ ಅವರು ಮುಖ್ಯಮಂತ್ರಿಯಾಗಿದ್ದಾಗ ಮತ್ತು ನಾನು ದೀರ್ಘಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದಾಗಲೂ ನನ್ನ ಪತ್ನಿ ಎಂದಿಗೂ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಲಿಲ್ಲ ಎಂದು ತಿಳಿಸಿದ ಅವರು, ಇನ್ನು ಮುಂದೆ ನಾನು ಈ ಸಭೆಗೆ ಹಾಜರಾಗುವುದಿಲ್ಲ. ನಾನು ಮುಖ್ಯಮಂತ್ರಿಯಾದ ನಂತರವೇ ಸದನಕ್ಕೆ ಮರಳುತ್ತೇನೆ ಎಂದು ಪ್ರತಿಜ್ಞೆ ಮಾಡಿದರು.
Advertisement
ಕಳೆದ ಎರಡೂವರೆ ವರ್ಷಗಳಲ್ಲಿ ನಾನು ಎಲ್ಲ ಅವಮಾನಗಳನ್ನು ಸಹಿಸಿಕೊಂಡಿದ್ದೇನೆ. ಆದರೆ ಆಡಳಿತ ಪಕ್ಷವು ಎಲ್ಲ ಮಿತಿಗಳನ್ನು ಮೀರಿದೆ. ಯಾವುದೇ ಮಹಿಳೆಯ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಅದು ಮಾತನಾಡುವ ವ್ಯಕ್ತಿಯ ಗುಣವನ್ನು ಮಾತ್ರ ಪ್ರತಿಬಿಂಬಿಸುತ್ತದೆ. ಅದು ಅಲ್ಲದೇ ಸಿಎಂ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರ ತಂದೆ ಮತ್ತು ಅಂದಿನ ಸಿಎಂ ವೈ.ಎಸ್.ರಾಜಶೇಖರ್ ರೆಡ್ಡಿ ಅವರು ನನ್ನ ತಾಯಿಗೂ ಅವಮಾನ ಮಾಡಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಚಿಕ್ಕಬಳ್ಳಾಪುರ, ಕೋಲಾರದಲ್ಲಿ ವರುಣಾರ್ಭಟ- ದಾವಣೆಗೆರೆಯಲ್ಲಿ ದೇಗುಲ ಜಲಾವೃತ
ವೈಎಸ್‌ಆರ್‌ಸಿಪಿ ಶಾಸಕರು ನನ್ನ ಪತ್ನಿಯ ವಿರುದ್ಧ ಚಾರಿತ್ರ್ಯವಧೆ ನಡೆಸಿದ್ದಕ್ಕಾಗಿ ನಾವು ಪೊಲೀಸರಿಗೆ ದೂರು ನೀಡಲಿದ್ದೇವೆ. ಇದನ್ನು ಮಹಿಳಾ ಆಯೋಗದ ಮುಂದೆಯೂ ತರಬೇಕು. ಧರ್ಮದ ಈ ಹೋರಾಟದಲ್ಲಿ ಜನರು ತಮಗೆ ಬೆಂಬಲ ನೀಡುವಂತೆ ಮನವಿ ಮಾಡಿದರು.