ಅಮರಾವತಿ: ಆಂಧ್ರದಲ್ಲಿ (Andhra Pradesh) ನಾಳೆ ಎನ್‌ಡಿಎ (NDA) ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಸಿಎಂ ಆಗಿ ಚಂದ್ರಬಾಬು ನಾಯ್ಡು (Chandrababu Naidu), ಡಿಸಿಎಂ ಆಗಿ ಜನಸೇನಾನಿ ಪವನ್ ಕಲ್ಯಾಣ್ (Pawan Kalyan) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಚಂದ್ರಬಾಬು ಸಂಪುಟದಲ್ಲಿ ಬಿಜೆಪಿಗರಿಗೂ ಸ್ಥಾನಮಾನ ಸಿಗಲಿದೆ ಎಂದು ಹೇಳಲಾಗಿದೆ. ನಾಳೆಯ ಪದಗ್ರಹಣ ಸಮಾರಂಭದಲ್ಲಿ ಪ್ರಧಾನಿ ಮೋದಿ, ಚಿರಂಜೀವಿ, ರಜಿನಿಕಾಂತ್ ಸೇರಿ ಹಲವು ಗಣ್ಯರು ಸಾಕ್ಷಿಯಾಗಲಿದ್ದಾರೆ. ಅಮರಾವತಿಯೇ ಆಂಧ್ರ ರಾಜಧಾನಿ. ವಿಶಾಖಪಟ್ಟಣ ಆರ್ಥಿಕ ರಾಜಧಾನಿ ಎಂದು ಭಾವಿ ಸಿಎಂ ಚಂದ್ರಬಾಬು ನಾಯ್ಡು ಘೋಷಣೆ ಮಾಡಿದ್ದಾರೆ. ಇನ್ನು ಆಂಧ್ರದಲ್ಲಿಯೂ ಕರ್ನಾಟಕ, ತೆಲಂಗಾಣ ಮಾದರಿಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪಯಣಕ್ಕೆ ಅವಕಾಶ ಮಾಡಿಕೊಡುವ ಬಗ್ಗೆ ಈಗಾಗಲೇ ಅಧ್ಯಯನ ಶುರುವಾಗಿದ್ದು, ಮುಂದಿನ ಒಂದೆರಡು ವಾರಗಳಲ್ಲಿ ಈ ಯೋಜನೆ ಜಾರಿಯಾಗುವ ಸಂಭವ ಇದೆ. ಇದನ್ನೂ ಓದಿ: ಎರಡು ಕಿವಿಗಳಲ್ಲೂ ಶ್ರವಣದೋಷ ಇದ್ದ ನೈಜೀರಿಯನ್ ಯುವತಿಗೆ ಫೋರ್ಟಿಸ್ ವೈದ್ಯರಿಂದ ಯಶಸ್ವಿ ‘ಡ್ಯುಯಲ್ ಕಾಕ್ಲಿಯರ್ ಇಂಪ್ಲಾಂಟ್ ಸರ್ಜರಿ’
Advertisement
Advertisement
ಮತ್ತೊಂದೆಡೆ ಒಡಿಶಾದಲ್ಲಿಯೂ ನಾಳೆಯೇ ನೂತನ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಇಂದು ಭುವನೇಶ್ವರದಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಬುಡಕಟ್ಟು ಸಮುದಾಯದ ಮೋಹನ್ ಮಝ್ಹಿ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ನಾಳೆ ಮೋದಿ ಸಮ್ಮುಖದಲ್ಲಿ ಮೋಹನ್ ಮಝ್ಹಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. 52 ವರ್ಷದ ಮೋಜನ್ ಮಝ್ಹಿ ನಾಲ್ಕನೇ ಬಾರಿ ಕಿಯೋಂಜರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಇನ್ನು, ಎರಡು ಡಿಸಿಎಂ ಹುದ್ದೆ ಸೃಷ್ಟಿಸಲು ಬಿಜೆಪಿ ನಿರ್ಧರಿಸಿದೆ. ನಾಳೆಯ ಪದಗ್ರಹಣ ಸಮಾರಂಭಕ್ಕೆ ಮಾಜಿ ಸಿಎಂ ನವೀನ್ ಪಟ್ನಾಯಕ್‌ರನ್ನು ಬಿಜೆಪಿ ಆಹ್ವಾನಿಸಿದೆ. ವಿಶೇಷ ಎಂದರೆ ಒಡಿಶಾ ನೂತನ ಸಿಎಂಗೆ ಅಧಿಕೃತ ನಿವಾಸವನ್ನು ಹುಡುಕಲಾಗುತ್ತಿದೆ. 24 ವರ್ಷ ಸಿಎಂ ಆಗಿದ್ದ ನವೀನ್ ಪಟ್ನಾಯಕ್ ತಮ್ಮ ನಿವಾಸದಿಂದಲೇ ಆಡಳಿತ ನಡೆಸಿದ್ದ ಕಾರಣ ಈ ಸಮಸ್ಯೆ ಉದ್ಭವ ಆಗಿದೆ. ಇದನ್ನೂ ಓದಿ: SDMFನಿಂದ 100 ಕೋಟಿ ಬಿಡುಗಡೆ – ಮೊದಲ ಹಂತದಲ್ಲಿ 93 ಕೆರೆಗಳ ಸಂಗ್ರಹಣಾ ಸಾಮರ್ಥ್ಯ ವೃದ್ಧಿ: ಸಚಿವ ಎನ್.ಎಸ್.ಬೋಸರಾಜು
Advertisement