CrimeLatestMain PostNational

ಚಂಡೀಗಢ ವೀಡಿಯೋ ಲೀಕ್ ಕೇಸ್ – ಯುವತಿಗೆ ಬ್ಲ್ಯಾಕ್‌ಮೇಲ್, ಯೋಧ ಅರೆಸ್ಟ್

ಚಂಡೀಗಢ: ಮೊಹಾಲಿಯ ಚಂಡೀಗಢ ವಿಶ್ವವಿದ್ಯಾಲಯದ (Chandigarh University) ಹಾಸ್ಟೆಲ್ ವಾಶ್‌ರೂಮ್‌ನಲ್ಲಿ ವಿದ್ಯಾರ್ಥಿನಿಯೊಬ್ಬಳು ವಿಡಿಯೋ ರೆಕಾರ್ಡ್ (Bathroom Video) ಮಾಡಿದ್ದ ಪ್ರಕರಣದಲ್ಲಿ, ಆಕೆಗೆ ಬ್ಲ್ಯಾಕ್‌ಮೇಲ್ (Blackmail) ಮಾಡಿದ ಆರೋಪದ ಮೇಲೆ ಪಂಜಾಬ್ ಪೊಲೀಸರು (Punjab Police) ಶನಿವಾರ ಅರುಣಾಚಲ ಪ್ರದೇಶದಲ್ಲಿ ಸೇನಾ ಸಿಬ್ಬಂದಿಯನ್ನು (Soldier) ಬಂಧಿಸಿದ್ದಾರೆ.

ಕಳೆದ ಶನಿವಾರ ವಿದ್ಯಾರ್ಥಿನಿಯೊಬ್ಬಳು ಬಾತ್‌ರೂಂ ವೀಡಿಯೋಗಳನ್ನು ಸೆರೆಹಿಡಿದು ತನ್ನ ಗೆಳೆಯನಿಗೆ ಕಳುಹಿಸುತ್ತಿದ್ದ ವಿಷಯ ಬೆಳಕಿಗೆ ಬಂದ ಬಳಿಕ ವಿಶ್ವವಿದ್ಯಾಲಯದ ಆವರಣದಲ್ಲಿ ಭಾರೀ ಪ್ರತಿಭಟನೆ ನಡೆದಿದೆ. ಬಳಿಕ ವೀಡಿಯೋ ಸೆರೆಹಿಡಿದಿದ್ದ ವಿದ್ಯಾರ್ಥಿನಿ, ಪ್ರಕರಣಕ್ಕೆ ಸಂಬಂಧಿಸಿದ ಹಿಮಾಚಲ ಪ್ರದೇಶದ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದರು.

ಬಂಧಿತ ಆರೋಪಿಗಳಿಂದ ವಶಪಡಿಸಿಕೊಂಡ ಸಾಧನಗಳಿಂದ ಡಿಜಿಟಲ್ ಸಾಕ್ಷ್ಯಗಳನ್ನು ಪತ್ತೆಹಚ್ಚಿ ಇಂದು ಮೊಹಾಲಿಯ ಪೊಲೀಸರ ತಂಡ ಯೋಧ ಸಂಜೀವ್ ಸಿಂಗ್‌ನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಮಕ್ಕಳ ಅಶ್ಲೀಲ ಚಿತ್ರದ ವಿರುದ್ಧ ಕರ್ನಾಟಕ ಸೇರಿದಂತೆ ದೇಶಾದ್ಯಂತ 56 ಸ್ಥಳಗಳಲ್ಲಿ ಸಿಬಿಐ ದಾಳಿ

ವಿಶ್ವವಿದ್ಯಾಲಯದ ಹಾಸ್ಟೆಲ್‌ನಲ್ಲಿ ಇತರ ವಿದ್ಯಾರ್ಥಿನಿಯರ ವೀಡಿಯೋಗಳು ಲೀಕ್ ಆಗಿರುವುದಾಗಿ ವದಂತಿ ಹಬ್ಬಿದ ಬಳಿಕ ವಿಶ್ವವಿದ್ಯಾಲಯದ ಆವರಣದಲ್ಲಿ ಭಾರೀ ಪ್ರತಿಭಟನೆ ನಡೆದಿತ್ತು. ಆದರೆ ಬಂಧಿತ ವಿದ್ಯಾರ್ಥಿನಿ ತನ್ನ ಸ್ವಂತ ಖಾಸಗಿ ವೀಡಿಯೋಗಳನ್ನು ತನ್ನ ಗೆಳೆಯನಿಗೆ ಕಳುಹಿಸಿರುವುದಾಗಿ ತಿಳಿಸಿದ್ದಾಳೆ. ಬಳಿಕ ವಿದ್ಯಾರ್ಥಿನಿಗೆ ವೀಡಿಯೋಗಳನ್ನು ಕಳುಹಿಸಲು ಬ್ಲ್ಯಾಕ್‌ಮೇಲೆ ಮಾಡಲಾಗಿತ್ತೇ ಎಂಬ ವಿಚಾರವಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಪಿಎಫ್‌ಐ ಪ್ರತಿಭಟನೆ ವೇಳೆ ಪಾಕ್ ಪರ ಘೋಷಣೆ – ಪ್ರಕರಣ ದಾಖಲು

Live Tv

Leave a Reply

Your email address will not be published. Required fields are marked *

Back to top button