SSLC ಪರೀಕ್ಷೆಯಲ್ಲಿ ಪಾಸ್ ಮಾಡಿಸ್ತೀನೆಂದು ಹೇಳಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ ಪ್ರಿನ್ಸಿಪಾಲ್

Public TV
1 Min Read
RAPE 4

ಚಂಡೀಗಢ: ಪ್ರಿನ್ಸಿಪಾಲ್‍ವೊಬ್ಬ 10 ನೇ ತರಗತಿಯ ವಿದ್ಯಾರ್ಥಿನಿಗೆ ಬೋರ್ಡ್ ಪರೀಕ್ಷೆ ಪಾಸ್ ಮಾಡಿಸಲು ಸಹಾಯ ಮಾಡುತ್ತೇನೆಂದು ಹೇಳಿ ಅತ್ಯಾಚಾರ ಮಾಡಿರುವ ಘಟನೆ ಹರಿಯಾಣದ ಸೋನಿಪತ್ ನ ಗೋಹಾನಾ ಪಟ್ಟಣದಲ್ಲಿ ನಡೆದಿದೆ.

ಸೋನಿಪತ್ ಶಾಲೆಯ ಪ್ರಿನ್ಸಿಪಾಲ್ ಈ ಕೃತ್ಯವೆಸಗಿದ್ದಾನೆ. ಈ ಕೃತ್ಯಕ್ಕೆ ಇಬ್ಬರು ಮಹಿಳೆಯರು ಕೂಡ ಸಹಾಯ ಮಾಡಿದ್ದು, ಆರೋಪಿಗಳ ವಿರುದ್ಧ ಪೋಕ್ಸೊ ಕಾಯ್ದೆ ಯಡಿ ಪ್ರಕರಣ ದಾಖಲಾಗಿದೆ. ಮೂವರು ಆರೋಪಿಗಳು ಮಂಗಳವಾರ ರಾತ್ರಿಯಿಂದ ತಲೆಮರೆಸಿಕೊಂಡಿದ್ದಾರೆ.

626960 rape dna image

ಏನಿದು ಘಟನೆ?: ವರದಿಗಳ ಪ್ರಕಾರ ವಿದ್ಯಾರ್ಥಿನಿಯ ತಂದೆ ಮಗಳ ಬೋರ್ಡ್ ಪರೀಕ್ಷೆ ಪಾಸ್ ಮಾಡಿಸಲು ಪ್ರಿನ್ಸಿಪಾನ್‍ಗೆ 10 ಸಾವಿರ ರೂ. ಕೊಡಲು ಸಿದ್ಧವಾಗಿದ್ದರು. ಈ ಬಗ್ಗೆ ಪೊಲೀಸರಿಗೆ ತಂದೆ ಹೇಳಿಕೆ ನೀಡಿದ್ದು, ಪರೀಕ್ಷೆ ಬರೆಯಬೇಕೆಂದು ನನ್ನ ಮಗಳನ್ನು ಮತ್ತು ನನ್ನನ್ನು ಗೋಹಾನಾ ಶಾಲೆಗೆ ಕರೆದಿದ್ದರು. ನಾವು ಆ ಸ್ಥಳಕ್ಕೆ ಬಂದಾಗ, ಪ್ರಿನ್ಸಿಪಾಲ್ ನನ್ನ ಮಗಳನ್ನು ಅವರ ಸಂಬಂಧಿಕರ ಸ್ಥಳದಲ್ಲಿ ಬಿಟ್ಟು ತೆರಳುವಂತೆ ಹೇಳಿದರು. ಮತ್ತೊಬ್ಬ ಹುಡುಗಿ ನನ್ನ ಮಗಳ ಪರೀಕ್ಷೆಯನ್ನು ಬರೆಯುತ್ತಾಳೆ ಎಂದು ಅವರು ಹೇಳಿದರು. ದೈಹಿಕ ಶಿಕ್ಷಣ ಪರೀಕ್ಷೆಯು ಮುಗಿದ ನಂತರ ನನ್ನ ಮಗಳನ್ನು ಕರೆದುಕೊಂಡು ಹೋಗುವಂತೆ ಪ್ರಿನ್ಸಿಪಾಲ್ ಹೇಳಿದ್ದನು. ನಾನು ನನ್ನ ಮಗಳನ್ನು ಕರೆದುಕೊಂಡು ಹೋಗಲು ಬಂದಾಗ ಅವಳು ಪ್ರಿನ್ಸಿಪಾಲ್ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆಂದು ತಿಳಿಸಿದಳು ಎಂದು ಹೇಳಿದ್ದಾರೆ. ಅಲ್ಲಿ ಏನಾಯಿತು ಎಂದು ವಿದ್ಯಾರ್ಥಿನಿಯ ತಂದೆ ಅರಿಯುವಷ್ಟರಲ್ಲಿ ಆ ಮೂವರು ಮನೆಯಿಂದ ಓಡಿಹೋಗಿದ್ದರು.

ನಾವು ಸಂತ್ರಸ್ತೆಯ ಹೇಳಿಕೆ ಪಡೆದು, ಈ ಬಗ್ಗೆ ಪ್ರಕರಣವ ದಾಖಲಿಸಿದ್ದೆವೆ. ವಿದ್ಯಾರ್ಥಿನಿಗೆ ಸಹಾಯ ಮಾಡಲು ಕೌನ್ಸೆಲರ್ಸ್ ತಂಡಕ್ಕೆ ಸೂಚಿಸಲಾಗಿದೆ ಎಂದು ಖಾಸಗಿ ಮಾಧ್ಯಮವೊಂದಕ್ಕೆ ಪೊಲೀಸರು ತಿಳಿಸಿದ್ದಾರೆ.

gang rape

 

Share This Article
Leave a Comment

Leave a Reply

Your email address will not be published. Required fields are marked *