CinemaDistrictsKarnatakaLatestSandalwood

ಶೈನ್ ಅವಾಜ್ ಹಾಕಿದ್ದಕ್ಕೆ ಚಂದನಾ ಕಣ್ಣೀರು

ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಸೀಸನ್-7ರಲ್ಲಿ ಶೈನ್ ಶೆಟ್ಟಿ ಅವರು ಸ್ಪರ್ಧಿ ಚಂದನಾ ಅವರ ಜೊತೆ ಜಗಳವಾಡಿ ಅವಾಜ್ ಹಾಕಿದ್ದಾರೆ. ಶೈನ್ ವರ್ತನೆ ನೋಡಿ ಚಂದನಾ ಕಣ್ಣೀರು ಹಾಕಿದ್ದಾರೆ.

ಚಂದನಾ ಅವರು ಟಾಸ್ಕ್ ಮಾಡಿ ಮೈ ಹಾಗೂ ತಲೆಯಲ್ಲೆಲ್ಲ ಮರಳು ಆಗಿದ್ದ ಕಾರಣ ಸ್ನಾನ ಮಾಡಿದ್ದರು. ಆದರೆ ಇದು ಶೈನ್ ಹಾಗೂ ಕಿಶನ್ ಅವರಿಗೆ ಇಷ್ಟವಾಗಲಿಲ್ಲ. ಬಿಗ್ ಬಾಸ್ ಹೇಳುವ ಮೊದಲೇ ನೀವು ಏಕೆ ಸ್ನಾನ ಮಾಡಿದ್ದೀರಿ ಎಂದು ಚಂದನಾರನ್ನು ಪ್ರಶ್ನಿಸಿದ್ದರು. ಆಗ ಚಂದನಾ ಬಿಗ್ ಬಾಸ್ ಆದೇಶ ನೀಡಿದ್ದರು. ಹಾಗಾಗಿ ನಾನು ಸ್ನಾನ ಮಾಡಿಕೊಂಡು ಬಂದೆ ಎಂದು ಹೇಳಿದ್ದಾರೆ. ಈ ವೇಳೆ ಶೈನ್ ಹಾಗೂ ಕಿಶನ್ ಬಿಗ್ ಬಾಸ್ ಬೇರೆ ಆದೇಶ ನೀಡಿದ್ದರು ಎಂದು ಹೇಳಿದ್ದಾರೆ.

ಈ ವಿಚಾರವಾಗಿ ಚಂದನಾ ಹಾಗೂ ಶೈನ್ ನಡುವೆ ವಾದ ನಡೆಯುತ್ತೆ. ಈ ವೇಳೆ ಶೈನ್ ಬಿಗ್ ಬಾಸ್ ಗಾರ್ಡನ್ ಏರಿಯಾಗೆ ಬರಲು ಹೇಳಿದ್ದರು ಅಷ್ಟೇ. ಅವರು ಬೇರೆ ಆದೇಶ ನೀಡಲಿಲ್ಲ. ಹಾಗಿದರೆ ನಾವು ಕೂಡ ಬ್ಯಾಗ್ ಎತ್ತಿಕೊಂಡು ಗಾರ್ಡನ್‍ಗೆ ಬಂದು ಕೂರುತ್ತಿದ್ದೆವು ಎಂದಾಗ ನೀವು ಮಾಡಬೇಕಿತ್ತು ಎಂದು ಚಂದನಾ ಹೇಳಿದ್ದಾರೆ. ನನ್ನ ತಲೆಯಲ್ಲಿ ಬ್ರೈನ್ ಎನ್ನುವುದು ಸ್ವಲ್ಪ ಇದೆ ಎಂದು ಶೈನ್ ಹೇಳಿದಾಗ ಚಂದನಾ ನನಗೆ ಬ್ರೈನ್ ಇಲ್ಲ, ಲದ್ದಿ ಇದೆ ಎಂದು ಕೋಪಗೊಂಡು ಪತ್ರಿಕ್ರಿಯಿಸಿದ್ದಾರೆ.

ವಾದ-ವಿವಾದ ಹೆಚ್ಚಾಗುತ್ತಿದ್ದಂತೆ ಶೈನ್ ಹೋಗಮ್ಮ ಕಂಡಿದ್ದೀನಿ ಎಂದು ಹೇಳಿದ್ದಾರೆ. ಆಗ ಚಂದನಾ ಕಂಡಿದ್ದೀರಾ? ಹೌದು. ಮತ್ತೆ ಬಂದು ಅದು ಮಾಡು ಇದು ಮಾಡು ಎಂದು ಹೇಳಿ ಆಗ ನೋಡಿಕೊಳ್ಳುತ್ತೀನಿ ಎಂದು ಹೇಳಿದ್ದಾರೆ. ಇದರಿಂದ ಮತ್ತೆ ಕೋಪಗೊಂಡ ಶೈನ್ ನಾನು ಯಾವಾಗ ಅದು ಮಾಡು ಇದು ಮಾಡು ಎಂದು ಹೇಳಿದ್ದೇನೆ. ನಿನ್ನ ವಯಸ್ಸಿಗೆ ತಕ್ಕಂತೆ ಮಾತಾಡು, ಬಾಯಿಗೆ ಬಂದಂತೆ ಮಾತನಾಡಬೇಡ ಎಂದು ಚಂದನಾಗೆ ಹೇಳಿದ್ದಾರೆ. ಆಗ ಚಂದನಾ ನಾನು ಮಾತನಾಡಲ್ಲ ಏನಿವಾಗ ಎಂದು ಪತ್ರಿಕ್ರಿಯಿಸಿದ್ದಾರೆ.

ಪ್ರತಿ ಮಾತಿಗೆ ಚಂದನಾ ವಾದ ಮಾಡುತ್ತಿರುವುದನ್ನು ನೋಡಿ ಶೈನ್, ಇದೆಲ್ಲ ನನ್ನ ಹತ್ತಿರ ಇಟ್ಟುಕೊಳ್ಳಬೇಡಿ. ಯಾರ ಹತ್ತಿರ ಇಟ್ಟಕೊಳ್ಳಬೇಕೋ ಅವರ ಹತ್ತಿರ ಇಟ್ಟುಕೊಳ್ಳಿ ಎಂದು ಅವಾಜ್ ಹಾಕಿದ್ದಾರೆ. ಶೈನ್ ಈ ರೀತಿ ಹೇಳುತ್ತಿದ್ದಂತೆ ಗಾರ್ಡನ್ ಏರಿಯಾದಲ್ಲಿ ಕುಳಿತ್ತಿದ್ದ ಚಂದನಾ ಅಳುತ್ತಾ ಮನೆಯೊಳಗೆ ಹೋಗಿದ್ದಾರೆ. ಚಂದನಾ ಅಳುತ್ತಿರುವುದನ್ನು ನೋಡಿ ಶೈನ್ ನಾನು ತಮಾಷೆ ಮಾಡಿದ್ದು, ಸಿರಿಯಸ್ ಆಗಿ ತಗೋಬೇಡ ಎಂದು ಚಂದನಾರನ್ನು ಸಮಾಧಾನ ಮಾಡಲು ಮುಂದಾದರು.

Leave a Reply

Your email address will not be published.

Back to top button