ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ರಲ್ಲಿ 12ನೇ ವಾರ ಬಿಗ್ ಮನೆಯಿಂದ ಚಂದನಾ ಅವರು ಎಲಿಮಿನೇಟ್ ಆಗಿದ್ದಾರೆ. ಇದನ್ನೂ ಓದಿ: ಸಾವಿನ ಸುದ್ದಿ ತಿಳಿಸಿದ ಬಿಗ್‍ಬಾಸ್- ಬಿಕ್ಕಿ, ಬಿಕ್ಕಿ ಅತ್ತ ವಾಸುಕಿ
84 ದಿನಗಳ ಕಾಲ ಬಿಗ್ ಮನೆಯಲ್ಲಿದ್ದು ಅಭಿಮಾನಿಗಳನ್ನು ರಂಜಿಸಿದ್ದ ಚಂದನಾ ಈಗ ಬಿಗ್ ಮನೆಯ ಆಟ ಮುಗಿಸಿ ಮನೆಯಿಂದ ಹೊರಬಂದಿದ್ದಾರೆ. ಬಿಗ್‍ಬಾಸ್ ಪ್ರಾರಂಭವಾದ ಮೊದಲ ದಿನದಿಂದನೂ ಚಂದನಾ ಸ್ಟ್ರಾಂಗ್ ಸ್ಪರ್ಧಿಯಾಗಿ ಗಮನ ಸೆಳೆದಿದ್ದರು. ಶೈನ್ ಶೆಟ್ಟಿ ಮತ್ತು ವಾಸುಕಿ ವೈಭವ್ ಜೊತೆ ಚಂದನಾ ಉತ್ತಮ ಸ್ನೇಹ ಹೊಂದಿದ್ದರು. ಇದೀಗ ಆ ಸ್ನೇಹವೇ ಚಂದನಾ ಅವರಿಗೆ ಮುಳುವಾಯ್ತು ಅನ್ನಿಸುತ್ತದೆ. ಇದನ್ನೂ ಓದಿ: ಶೈನ್‍ಗೆ ವಾರ್ನಿಂಗ್ ಕೊಟ್ಟ ಸುದೀಪ್
ಬಿಗ್‍ಬಾಸ್ ಶುರುವಾದಗಿನಿಂದ ಚಂದನಾ ಪ್ರತಿಯೊಂದಕ್ಕೂ ಶೈನ್ ಮತ್ತು ವಾಸುಕಿ ಹೆಸರನ್ನೇ ತೆಗೆದುಕೊಳ್ಳುತ್ತಿದ್ದರು. ಇದು ಮನೆಯ ಇತರೆ ಸದಸ್ಯರಿಗೆ ಇಷ್ಟವಾಗುತ್ತಿರಲಿಲ್ಲ. ಹೀಗಾಗಿ ಸ್ಪರ್ಧಿಗಳು ಚಂದನಾ ಪ್ರತಿಯೊಂದಕ್ಕೂ ಶೈನ್ ಮತ್ತು ವಾಸುಕಿ ಮೇಲೆ ಅವಲಂಬಿತರಾಗಿದ್ದಾರೆ ಎಂದು ನಾಮಿನೇಟ್ ಮಾಡಿದ್ದರು. ಅಲ್ಲದೇ ಚಂದನಾ ಅವರು ವಾಸುಕಿ ಹಾಗೂ ಶೈನ್ ಶೆಟ್ಟಿಯನ್ನು ನಾಮಿನೇಟ್ ಮಾಡಲೂ ಹಿಂಜರಿಯುತ್ತಿದ್ದರು.
ವಾಸುಕಿ ಮತ್ತು ಶೈನ್ ಮಾತ್ರ ಯಾವುದೇ ಮುಲಾಜಿಲ್ಲದೆ ಚಂದನಾರನ್ನು ನಾಮಿನೇಟ್ ಮಾಡುತ್ತಿದ್ದರು. ಆದರೆ ಇದ್ಯಾವುದೂ ಚಂದನಾರ ಗಮನಕ್ಕೆ ಬರಲೇ ಇಲ್ಲ. ಅತಿಯಾಗಿ ಅವರಿಬ್ಬರನ್ನೂ ನೆಚ್ಚಿಕೊಂಡಿದ್ದೇ ಅವರ ಪಾಲಿಗೆ ಮುಳುವಾಯ್ತು ಅನ್ನಿಸುತ್ತದೆ. ಇತ್ತ ಮನೆಯಲ್ಲಿ ಚಂದನಾ ಅವರಿಗಾಗಿ ಆಡಲಿಲ್ಲ, ಬೇರೆಯವರನ್ನು ಉಳಿಸಲು ಆಡಿದರು ಎಂದು ಚಂದನಾ ಅಕ್ಕ ಸಹ ಹೇಳಿದ್ದಾರೆ.