ಮೈಸೂರು: ಇಷ್ಟು ದಿನ ಒಬ್ಬನೇ ಮನೆಯಲ್ಲಿ ಇರುತ್ತಿದ್ದೆ. ಇನ್ಮುಂದೆ ನನ್ನ ಜೊತೆ ಹೆಂಡತಿ ಕೂಡ ಇರುತ್ತಾಳೆ ಎಂದು ರ‍್ಯಾಪರ್ ಚಂದನ್ ಶೆಟ್ಟಿ ಮದುವೆಯಾದ ನಂತರ ಮೊದಲ ಬಾರಿಗೆ ಮಾತನಾಡಿದ್ದಾರೆ.
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ವರ ಚಂದನ್, ಇವತ್ತಿನಿಂದ ಜೀವನ ಬೇರೆ ತರನೇ ಇರುತ್ತದೆ. ಇಷ್ಟು ದಿನ ಒಬ್ಬನೇ ಮನೆಯಲ್ಲಿ ಇರುತ್ತಿದ್ದೆ. ಇನ್ಮುಂದೆ ನನ್ನ ಜೊತೆ ಹೆಂಡತಿ ಕೂಡ ಇರುತ್ತಾಳೆ. ತುಂಬಾ ಖುಷಿಯಾಗುತ್ತಿವೆ. ಜೀವನದಲ್ಲಿ ಮದುವೆ ಅನ್ನೋದು ತುಂಬಾ ಮುಖ್ಯವಾದ ವಿಚಾರವಾಗಿದೆ. ಇವತ್ತಿನಿಂದ ಜೀವನವೂ ತುಂಬಾ ಚೆನ್ನಾಗಿರುತ್ತೆ ಅಂದುಕೊಂಡಿದ್ದೀನಿ ಎಂದು ಸಂತಸದಿಂದ ಹೇಳಿದರು. ಇದನ್ನೂ ಓದಿ: ನಾನಿಷ್ಟಪಟ್ಟ ಹುಡ್ಗನೊಂದಿಗೆ ಮದ್ವೆಯಾಗಿದ್ದು ತುಂಬಾನೇ ಖುಷಿಯಾಗಿದೆ: ನಿವೇದಿತಾ
ಕರ್ನಾಟಕ ಜನತೆ ಎಲ್ಲರೂ ಪ್ರೀತಿ ಕೊಟ್ಟಿದ್ದೀರಾ. ನಿಮ್ಮೆಲ್ಲರ ಆಶೀರ್ವಾದದಿಂದ ನಾವಿಬ್ಬರು ಇಂದು ಮದುವೆಯಾಗಿದ್ದೇವೆ. ಜೀವನ ಪೂರ್ತಿ ನೆನಪಿನಲ್ಲಿ ಉಳಿಯುವಂತೆ ಮದುವೆ ಮಾಡಿಕೊಳ್ಳುಬೇಕು ಅಂದುಕೊಂಡಿದ್ದೆವು. ಅದೇ ರೀತಿ ಮದುವೆ ಕೂಡ ಅದ್ಧೂರಿಯಾಗಿ ಆಗಿದೆ. ನಿಜಕ್ಕೂ ತುಂಬಾ ಖುಷಿಯಾಗಿದೆ ಎಂದು ಚಂದನ್ ಹೇಳಿದರು.
ಕಳೆದ ವರ್ಷದ ‘ಯುವ ದಸರಾ 2019’ ಕಾರ್ಯಕ್ರಮದಲ್ಲಿ ಹಾಡಲು ಬಂದಿದ್ದ ಚಂದನ್ ಶೆಟ್ಟಿ, ನಿವೇದಿತಾ ಅವರಿಗೆ ವೇದಿಕೆಯಲ್ಲೇ ಉಂಗುರ ತೊಡಿಸಿ ಪ್ರೇಮ ನಿವೇದನೆ ಮಾಡಿದ್ದರು. ಈ ವಿಚಾರ ಸಾಕಷ್ಟು ಚರ್ಚೆಗೊಳಗಾಗಿತ್ತು. ಬಳಿಕ ಸ್ವತಃ ಚಂದನ್ ಅವರೇ ಕ್ಷಮೆ ಕೇಳಿದ್ದರು. ನಂತರ ಅಕ್ಟೋಬರ್ 21ರಂದು ಮೈಸೂರಿನ ಸದರ್ನ್ ಸ್ಟಾರ್ ಹೋಟೆಲಲ್ಲಿ ನಿಶ್ಚಿತಾರ್ಥ ನಡೆದಿದ್ದು, ಇಂದು ಮೈಸೂರಿನ ಹುಣಸೂರು ರಸ್ತೆಯಲ್ಲಿರುವ ಸ್ಪೆಕ್ಟ್ರಾ ಕನ್ವೆನ್ಷನ್ ಹಾಲ್‍ನಲ್ಲಿ ಇವರಿಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.