ಬೆಂಗಳೂರು: ಚಂದನ್ ಶೆಟ್ಟಿ ತಮ್ಮ ರ‍್ಯಾಪ್ ಹಾಡುಗಳ ಮೂಲಕವೇ ಕನ್ನಡದ ಜನತೆಯಿಂದ ಮೆಚ್ಚುಗೆ ಪಡೆದಿದ್ದಾರೆ. ಈಗಾಗಲೇ ಕರ್ನಾಟಕದಲ್ಲಿ ರ‍್ಯಾಪ್ ಸ್ಟಾರ್ ಆಗಿ ಮಿಂಚುತ್ತಿರುವ ಚಂದನ್, ಮೊದಲ ಬಾರಿಗೆ ಹೊರದೇಶದಲ್ಲಿ ಕಾರ್ಯಕ್ರಮವನ್ನು ಮಾಡಲಿದ್ದಾರೆ.
ಬಿಗ್ ಬಾಸ್-5 ಗೆದ್ದ ನಂತರ ಚಂದನ್ ಶೆಟ್ಟಿ ಕರ್ನಾಟಕದಲ್ಲಿ ಹಲವು ಕಾರ್ಯಕ್ರಮವನ್ನು ಮಾಡಿದ್ದಾರೆ. ಈಗ ಇದೇ ಮೊದಲ ಬಾರಿಗೆ ಚಂದನ್ ಆಸ್ಟ್ರೇಲಿಯಾದಲ್ಲಿ ಲೈವ್ ಕಾರ್ಯಕ್ರಮ ನೀಡುತ್ತಿದ್ದಾರೆ. ಈ ಬಗ್ಗೆ ಸ್ವತಃ ಚಂದನ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಪ್ರೇಕ್ಷಕರಿಗೆ ತಿಳಿಸಿದ್ದಾರೆ.
Advertisement
Advertisement
ಕರ್ನಾಟಕದಲ್ಲಿ ಶೋ ಮಾಡುತ್ತಿದ್ದ ಚಂದನ್ ಈಗ ಆಸ್ಟ್ರೇಲಿಯಾದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ಮಾರ್ಚ್ 16ರಂದು ಸಿಡ್ನಿ, ಮಾರ್ಚ್ 17ರಂದು ಮೆಲ್ಬರ್ನ್ ಹಾಗೂ ಮಾರ್ಚ್ 18ರಂದು ಅಡಿಲೇಡ್ ನಲ್ಲಿ ಕಾರ್ಯಕ್ರಮ ಮಾಡಲಿದ್ದಾರೆ. ಇದನ್ನೂ ಓದಿ: ಕಷ್ಟದಲ್ಲಿದ್ದಾಗ ಯಾರೂ ಇರಲಿಲ್ಲ ಅಂದ್ರು ಚಂದನ್ ಶೆಟ್ಟಿ
Advertisement
Advertisement
ನಾನು ಮೊದಲ ಬಾರಿಗೆ ನಮ್ಮ ದೇಶ ಬಿಟ್ಟು ಆಸ್ಟ್ರೇಲಿಯಾದಲ್ಲಿ ಕಾರ್ಯಕ್ರಮ ಮಾಡುತ್ತಿರುವುದಕ್ಕೆ ನಾನು ಕಾತುರದಿಂದ ಕಾಯುತ್ತಿದ್ದೇನೆ. ನಿಮ್ಮಲ್ಲರ ಪ್ರೀತಿ ಹಾಗೂ ಆಶೀರ್ವಾದ ನನಗೆ ಬೇಕಿದೆ. ನಿಮ್ಮನ್ನು ಭೇಟಿ ಮಾಡುವುದಕ್ಕೆ ನಾನು ತುಂಬಾ ಖುಷಿಯಾಗಿದ್ದೀನಿ ಎಂದು ಚಂದನ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ಮಂಗ್ಳೂರು ಸಮುದ್ರದಲ್ಲಿ ಸ್ನೇಹಿತರ ಜೊತೆ ಸಂಭ್ರಮ: ಜಾಲಿಮೂಡಲ್ಲಿ ಬಿಗ್ ಬಾಸ್ ಚಂದನ್ ಶೆಟ್ಟಿ
ಚಂದನ್ ಶೆಟ್ಟಿ ಬಿಗ್ ಬಾಸ್ ಶೋ ಗೆದ್ದಿದ್ದು ಮಾತ್ರವಲ್ಲದೆ, ಕನ್ನಡದಲ್ಲಿ ರ‍್ಯಾಪ್ ಹಾಡುಗಳ ಮೂಲಕ ಜಗತ್ತಿನಾದ್ಯಂತ ಜನಪ್ರಿಯರಾಗಿದ್ದಾರೆ. 3ಪೆಗ್ ಹಾಡು ಚಂದನ್ ಗೆ ಬೇರೆ ಲೆವೆಲ್ಲಿನ ವರ್ಚಸ್ಸು ತಂದುಕೊಟ್ಟಿದೆ.