ಬೆಂಗಳೂರು: ‘ಬಿಗ್ ಬಾಸ್’ ಸೀಸನ್ 5ರ ವಿನ್ನರ್ ಚಂದನ್ ಶೆಟ್ಟಿ, ತಮ್ಮ ಗೆಳಯನಾದ ದಿವಾಕರ್ ಮನೆಗೆ ಸರ್ಪ್ರೈಸ್ ಭೇಟಿ ನೀಡಿದ್ದಾರೆ.
ಬಿಗ್ ಬಾಸ್ ಸೀಸನ್ ನ್ ರನ್ನರ್ ಅಪ್ ಸ್ಪರ್ಧಿ ದಿವಾಕರ್ ಮತ್ತು ಅವರ ಪತ್ನಿ ಮಮತಾ ಅವರ ವಿವಾಹ ವಾರ್ಷಿಕೋತ್ಸವ ಸಂಭ್ರಮ ಇತ್ತು. ಈ ಸಂದರ್ಭದಲ್ಲಿ ಚಂದನ್ ದಿವಾಕರ್ ಮನೆಗೆ ಸರ್ಪ್ರೈಸ್ ಭೇಟಿ ನೀಡಿದ್ದರು.
Advertisement
ವಿದ್ಯಾರಣ್ಯಪುರದಲ್ಲಿರುವ ದಿವಾಕರ್ ಮನೆಗೆ ಚಂದನ್ ಶೆಟ್ಟಿ ಆಗಮಿಸಿ ದಿವಾಕರ್ ದಂಪತಿಗೆ ವಿವಾಹ ವಾರ್ಷಿಕೋತ್ಸವಕ್ಕೆ ಶುಭಹಾರೈಸಿದ್ದಾರೆ. ಈ ವೇಳೆ ದಿವಾಕರ್ ದಂಪತಿ ಸಂಬಂಧಿಕರು ಮತ್ತು ಸ್ನೇಹಿತರ ಜೊತೆ ಕೇಕ್ ಕತ್ತರಿಸಿ ಚಂದನ್ ಸಂಭ್ರಮಿಸಿದರು.
Advertisement
Advertisement
ಚಂದನ್ ಶೆಟ್ಟಿ ಮತ್ತು ದಿವಾಕರ್ ಇಬ್ಬರು ಆತ್ಮೀಯ ಸ್ನೇಹಿತರು. ಚಂದನ್ ಶೆಟ್ಟಿ ಸಿನಿಮಾ ನಿರ್ದೇಶನ ಮಾಡಲಿದ್ದು, ಈ ಚಿತ್ರದಲ್ಲಿ ದಿವಾಕರ್ ಗೆ ಅವಕಾಶ ಮಾಡಿಕೊಡುವುದಾಗಿ ಹೇಳಿಕೊಂಡಿದ್ದರು. ಆದರೆ ಅದು ಇನ್ನು ಅಂತಿಮವಾಗಿಲ್ಲ. ಮತ್ತೊಂದೆಡೆ ಚಂದನ್ ಶೆಟ್ಟಿಗೆ ಸ್ಯಾಂಡಲ್ ವುಡ್ ನಲ್ಲಿ ಭರ್ಜರಿ ಅವಕಾಶಗಳು ಸಿಗುತ್ತಿದ್ದು, ದೊಡ್ಡ ನಟರ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡುವ ಸಾಧ್ಯತೆಗಳಿವೆ. ಅಷ್ಟೇ ಅಲ್ಲದೇ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಮಾಸ್ಟರ್ ಡ್ಯಾನ್ಸರ್’ ರಿಯಾಲಿಟಿ ಶೋದ ತೀರ್ಪುಗಾರರಾಗಿ ಚಂದನ್ ಕಾಣಿಸಿಕೊಳ್ಳುತ್ತಿದ್ದಾರೆ. ಇದನ್ನು ಓದಿ: ಕುರುಕ್ಷೇತ್ರ ನಿರ್ಮಾಪಕ ಮುನಿರತ್ನ ರಿಂದ ಚಂದನ್ ಶೆಟ್ಟಿಗೆ ಬಂಪರ್ ಆಫರ್