ಸ್ಯಾಂಡಲ್ವುಡ್ ನಟ ಚಂದನ್ ಶೆಟ್ಟಿ (Chandan Shetty) ಮತ್ತು ನಿವೇದಿತಾ ಗೌಡ (Niveditha Gowda) ಜೂನ್ 7ರಂದು ಡಿವೋರ್ಸ್ ಪಡೆದಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಇಬ್ಬರ ಡಿವೋರ್ಸ್ ಬಗ್ಗೆ ಹಲವು ವದಂತಿಗಳು ಹಬ್ಬಿತ್ತು. ಈ ಬೆನ್ನಲ್ಲೇ ಬೆಂಗಳೂರಿನ ರೆಸಾರ್ಟ್ವೊಂದರಲ್ಲಿ ಚಂದನ್ ಮತ್ತು ನಿವೇದಿತಾ ಸುದ್ದಿಗೋಷ್ಠಿ ಆಯೋಜಿಸಲಾಗಿತ್ತು. ನಮ್ಮ ಇಬ್ಬರ ನಡುವೆ ಹೊಂದಾಣಿಕೆ ಇಲ್ಲದೇ ಡಿವೋರ್ಸ್ (Divorce) ಪಡೆದಿದ್ದೇವೆ ಎಂದು ಚಂದನ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.
Advertisement
ಜೂನ್ 7ರಂದು ನಾವು ಕಾನೂನು ಬದ್ಧವಾಗಿ ಡಿವೋರ್ಸ್ ಪಡೆದಿದ್ದೇವೆ. ಚೆನ್ನಾಗಿದ್ದ ಜೋಡಿ ಯಾಕೆ ಡಿವೋರ್ಸ್ ಪಡೆದರು ಎಂಬ ಬಗ್ಗೆ ಹಲವರಿಗೆ ಅನುಮಾನ ಇದೆ. ಹೀಗಾಗಿ ಈ ಎಲ್ಲದರ ಬಗ್ಗೆ ಸ್ಪಷ್ಟನೆ ಕೊಡುತ್ತೇವೆ ಎಂದು ಚಂದನ್ ಶೆಟ್ಟಿ ಮಾತನಾಡಿದ್ದಾರೆ. ನಮ್ಮಿಬ್ಬಿರ ಜೀವನ ಶೈಲಿ ಬೇರೆ ಬೇರೆ ಇದೆ. ಇಬ್ಬರ ನಡುವೆ ಸಾಕಷ್ಟು ಸಮಸ್ಯೆ ಆಗುತ್ತಿತ್ತು. ಸಂಬಂಧ ಸರಿ ಮಾಡಲು ಸಾಕಷ್ಟು ಪ್ರಯತ್ನ ಮಾಡಿದ್ದೇವೆ. ಆದರೆ ಆಗಲಿಲ್ಲ. ಇಬ್ಬರೂ ಒಮ್ಮತದಿಂದ ಡಿವೋರ್ಸ್ ಪಡೆದಿದ್ದೇವೆ ಎಂದು ಚಂದನ್ ಶೆಟ್ಟಿ ಮಾತನಾಡಿದ್ದಾರೆ.
Advertisement
Advertisement
ನಾವಿಬ್ಬರೂ ಬೇರೇ ಚೆನ್ನಾಗಿ ಇಬ್ಬರೂ ಚೆನ್ನಾಗಿ ಇರುತ್ತೇವೆ ಎಂದು ನಿರ್ಧಾರ ಮಾಡಿದ್ದೇವು. ಹಾಗಂತ ನಮ್ಮ ಇಬ್ಬರ ನಡುವೆ ದ್ವೇಷ, ಭಿನ್ನಾಭಿಪ್ರಾಯ ಇಲ್ಲ ಎಂದಿದ್ದಾರೆ ಚಂದನ್. ನಿವೇದಿತಾ ಇಂದು ಚಿತ್ರರಂಗದಲ್ಲಿ ಬೆಳೆದಿರುವ ರೀತಿ ಬಗ್ಗೆ ಖುಷಿಯಿದೆ. ನನ್ನ ಕೆಲಸದ ಬಗ್ಗೆಯೂ ಅವರಿಗೆ ಗೌರವವಿದೆ. ಇಬ್ಬರೂ ಗೌರವಯುತವಾಗಿಯೇ ಬೇರೆಯಾಗಿದ್ದೇವೆ ಎಂದು ಚಂದನ್ ಸ್ಪಷ್ಟನೆ ನೀಡಿದ್ದಾರೆ.
Advertisement
ನಮ್ಮ ನಡುವೆ ಮಗುವಿನ ವಿಚಾರಕ್ಕೆ ಕಿತ್ತಾಟ ಆಗಿಲ್ಲ. ಮಗುವಿನ ವಿಚಾರಕ್ಕೆ ನಾವಿಬ್ಬರೂ ಬೇರೇ ಆಗಿಲ್ಲ. ಇದು ಸುಳ್ಳು ಸುದ್ದಿ ಎಂದಿದ್ದಾರೆ. ನಿವೇದಿತಾ ನನ್ನ ಕಡೆಯಿಂದ ಜೀವನಾಂಶ ಕೇಳಿಲ್ಲ, ನಾನು ಕೊಟ್ಟಿಲ್ಲ ಎಂದು ಚಂದನ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.