ಗಾಯಕ ಚಂದನ್ ಶೆಟ್ಟಿ (Chandan Shetty) ಮತ್ತು ಕಿರುತೆರೆ ನಟಿ ಹಾಗೂ ಚಂದನ್ ಪತ್ನಿ ನಿವೇದಿತಾ ಗೌಡ (Nivedita Gowda) ಹಾಲಿಡೇ ಮೂಡ್ ನಲ್ಲಿದ್ದಾರೆ. ಪ್ರವಾಸದಲ್ಲಿ ವಿಡಿಯೋವೊಂದನ್ನು ಮಾಡಿದ್ದು, ಆ ವಿಡಿಯೋ ಸಖತ್ ವೈರಲ್ ಆಗಿದೆ. ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಅಂಡರ್ ವಾಟರ್ ಶೂಟ್ ಮಾಡಿದ್ದು, ನೀರಿನೊಳಗೆ ರೊಮ್ಯಾನ್ಸ್ (Romance) ಮಾಡಿದ್ದಾರೆ.
ಅಂಡರ್ ವಾಟರ್ (Underwater) ನಲ್ಲಿ ತುಟಿಗೆ ತುಟಿ ಬೆರೆಸಿ ರೊಮ್ಯಾಂಟಿಕ್ ಆಗಿ ವಿಡಿಯೋ ಶೂಟ್ ಮಾಡಿದ್ದು, ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ಚಂದನ್ ಶೆಟ್ಟಿ. ಈ ವಿಡಿಯೋಗೆ ನಾನಾ ರೀತಿಯಲ್ಲಿ ಕಾಮೆಂಟ್ಸ್ ಬರುತ್ತಿವೆ. ಕೆಲವರು ಸಪೋರ್ಟ್ ಮಾಡಿದರೆ ಇನ್ನೂ ಕೆಲವರು ಖಾಸಗಿ ಸಂಗತಿಗಳನ್ನು ಬಹಿರಂಗವಾಗಿ ತೋರಿಸುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ:ಸಮಂತಾ ನಟನೆಯ ಹಾಲಿವುಡ್ ಸಿನಿಮಾಗೆ ಟೈಟಲ್ ಫಿಕ್ಸ್
ಕಾಮೆಂಟ್ ಗಳು ಏನೇ ಇರಲಿ ಚಂದನ್ ಮತ್ತು ನಿವೇದಿತಾ ಕೆಲ ಹೊತ್ತು ನೀರಿನೊಳಗೆ ರೊಮ್ಯಾನ್ಸ್ ಮಾಡುವ ಮೂಲಕ ಅಭಿಮಾನಿಗಳಿಗೆ ಉಚಿತ ಮನರಂಜನೆ ನೀಡಿದ್ದಾರೆ. ದಾಂಪತ್ಯದ ಅನ್ಯೋನ್ಯತೆಗೆ ಸಾಕ್ಷಿ ಎನ್ನುವಂತೆ ವಿಡಿಯೋ ಮಾಡಿದ್ದಾರೆ. ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.