ಮೈಸೂರು: ನೂತನ ವಧು-ವರರಾದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡಾರಿಗೆ ಹೊಸ ಜಾಗ್ವಾರ್ ಕಾರು ಗಿಫ್ಟ್ ನೀಡಲಾಗಿದೆ.
ಚಂದನ್ ಕುಟುಂಬಸ್ಥರಿಂದ ಈ ಕಾರು ಗಿಫ್ಟ್ ಸಿಕ್ಕಿದೆ. ಮರೂನ್ ಬಣ್ಣದ ಹೊಸ ಸೀರಿಸ್ ಕಾರನ್ನು ಕುಟುಂಬಸ್ಥರು ನೂತನ ವಧು-ವರರಿಗೆ ನೀಡಿದ್ದಾರೆ. ಕಲ್ಯಾಣ ಮಂಟಪದ ಎದುರು ಕಾರು ನಿಲ್ಲಿಸಿ ಚಂದನ್ ಮತ್ತು ನಿವೇದಿತಾಗೆ ಫ್ಯಾಮಿಲಿ ಇಂದು ಸರ್ಪ್ರೈಸ್ ನೀಡಿದೆ.
ಮೈಸೂರಿನ ಹಿನಕಲ್‍ನಲ್ಲಿರುವ ಸ್ಪೆಕ್ಟ್ರಾ ಕನ್ವೆನ್ಷನ್ ಹಾಲ್‍ನಲ್ಲಿ ಬಿಗ್‍ಬಾಸ್ ಜೋಡಿ ಮದುವೆ ನಡೆದಿದೆ. ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಮದುವೆ ಗೌಡ ಹಾಗೂ ಶೆಟ್ಟಿ ಸಂಪ್ರದಾಯಗಳೆರಡರಲ್ಲೂ ನಡೆದಿದೆ. ಬೆಳಗ್ಗೆ 8.15ರಿಂದ 9 ಗಂಟೆಗೆ ಧಾರಾ ಮುಹೂರ್ತ, ಮೀನ ಲಗ್ನದಲ್ಲಿ ನಿವೇದಿತಾಳನ್ನು ಚಂದನ್ ಶೆಟ್ಟಿ ವರಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ನಿವೇದಿತಾ ಪೋಷಕರಾದ ಹೇಮ ಮತ್ತು ರಮೇಶ್, ಚಂದನ್‍ಶೆಟ್ಟಿ ಪೋಷಕರಾದ ಪ್ರೇಮಲತಾ ಹಾಗೂ ಪರಮೇಶ್, ಆಪ್ತರು, ಸ್ನೇಹಿತರು, ಹಿತೈಷಿಗಳ ಸಮ್ಮುಖದಲ್ಲಿ ನಿವೇದಿತಾಗೆ ಚಂದನ್ ತಾಳಿ ಕಟ್ಟಿದ್ದಾರೆ.
ಮಂಗಳವಾರ ಸಂಜೆ ಚಂದನ್ ಮತ್ತು ನಿವೇದಿತಾ ಆರತಕ್ಷತೆ ನಡೆದಿದೆ. ಬೇಬಿ ಡಾಲ್ ಮೆರೂನ್ ಕಲರ್ ಗೌನ್‍ನಲ್ಲಿ ಮಿಂಚಿದರೆ, ಚಂದನ್ ಕೂಡ ಅದೇ ಕಲರ್ ಧಿರಿಸಿನಲ್ಲಿ ಕಂಗೊಳಿಸುತ್ತಿದ್ದರು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಧ್ರುವ ಸರ್ಜಾ ದಂಪತಿ ಹಾಗೂ ಅಕುಲ್ ಬಾಲಾಜಿ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿ ಶುಭ ಹಾರೈಸಿದ್ದಾರೆ.