ಬಿಗ್ ಬಾಸ್ ಬೆಡಗಿ ನಿವೇದಿತಾ ಗೌಡಗೆ (Niveditha Gowda) ಮತ್ತೆ ಜೊತೆಯಾಗ್ತಾರಾ? ಎಂಬ ಅಭಿಮಾನಿಗಳ ಕುತೂಹಲಕ್ಕೆ ಚಂದನ್ ಶೆಟ್ಟಿ ಕ್ಲ್ಯಾರಿಟಿ ನೀಡಿದ್ದಾರೆ. ಇದು ಮಕ್ಕಳ ಆಟ ಅಲ್ಲ, ಮತ್ತೆ ನಿವೇದಿತಾ ಜೊತೆ ಒಂದಾಗಲ್ಲ ಎಂದು ಚಂದನ್ (Chandan Shetty) ಹೇಳಿದ್ದಾರೆ. ಇದನ್ನೂ ಓದಿ:ಬ್ರೇಕಪ್ ಬೆನ್ನಲ್ಲೇ ಸಿನಿಮಾದಲ್ಲಿ ತಮನ್ನಾ ಆ್ಯಕ್ಟೀವ್- ಬಾಲಿವುಡ್‌ನಲ್ಲಿ ಬಿಗ್ ಚಾನ್ಸ್
ಡಿವೋರ್ಸ್ ಕುರಿತು ಎದುರಾದ ಪ್ರಶ್ನೆಗೆ ಚಂದನ್ ಪ್ರತಿಕ್ರಿಯಿಸಿ, ನಾವು ಡಿವೋರ್ಸ್ ಯಾಕೆ ತೆಗೆದುಕೊಂಡ್ವಿ ಎಂಬುದು ನಮ್ಮ ಪರ್ಸನಲ್ ವಿಚಾರ. ನನ್ನ ನಿರ್ಧಾರದ ಬಗ್ಗೆ ಸ್ಪಷ್ಟವಾಗಿದ್ದೀನಿ. ಇದು ಮಕ್ಕಳ ಆಟ ಅಲ್ಲ, ಇಬ್ಬರೂ ಯೋಚಿಸಿ ಡಿವೋರ್ಸ್ ಪಡೆದಿದ್ದೇವೆ. ಅದು ಬಿಟ್ಟರೆ ಅವರಿಗೆ ಈಗ ಪಶ್ಚಾತ್ತಾಪ ಕಾಡ್ತಿಲ್ಲ. ಮತ್ತೆ ನಿವೇದಿತಾ ಜೊತೆ ಒಂದಾಗಲ್ಲ. ನಮ್ಮ ನಿರ್ಧಾರ ಸರಿಯಿದೆ ಎಂದಿದ್ದಾರೆ. ಇನ್ನೂ ಸೋಶಿಯಲ್ ಮೀಡಿಯಾದಲ್ಲಿ ನಿವೇದಿತಾಗೆ ಕೆಟ್ಟ ಕಾಮೆಂಟ್ ಮಾಡಬೇಡಿ, ನಿಂದಿಸಬೇಡಿ ಎಂದು ಚಂದನ್ ಮಾತನಾಡಿದ್ದಾರೆ.
ಇತ್ತೀಚೆಗೆ ಚಂದನ್ ನಟನೆಯ ಸಿನಿಮಾ ಸೆಟ್‌ನಲ್ಲಿ ನಿವೇದಿತಾ ಕಣ್ಣೀರಿಟ್ಟಿದ್ದರು. ಸಿನಿಮಾ ಸೀನ್ ಆಗಿದ್ದರೂ ನಿವೇದಿತಾ ನೈಜವಾಗಿ ನಟಿಸಿದ್ದರು. ಈ ಕುರಿತು ಮಾತನಾಡಿದ ಚಂದನ್, ‘ಮುದ್ದು ರಾಕ್ಷಸಿ’ (Muddu Rakshasi) ಸಿನಿಮಾ ಸೆಟ್‌ನಲ್ಲಿ ಸಿಕ್ಕಾಗ ನಿವೇದಿತಾ ಎಮೋಷನಲ್ ಆಗಲಿಲ್ಲ. ಅಲ್ಲೇ ಸೆಟ್‌ನಲ್ಲೇ ಅವರು ಕ್ಲ್ಯಾರಿಟಿ ನೀಡಿದ್ದಾರೆ. ಯಾವುದೇ ಸಿನಿಮಾ ಮುಗಿಯೋ ಟೈಮ್‌ನಲ್ಲಿ ಬೇಜರಾಗುತ್ತದೆ, ಅಳು ಬರುತ್ತದೆ ಎಂದು ನಿವೇದಿತಾ ಅಂದೇ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ. ಹಾಗಾಗಿ ಎಮೋಷನಲಿ ಅವರಿಗೆ ನನ್ನೊಂದಿಗೆ ಯಾವುದೇ ರೀತಿಯ ಬಾಂಧವ್ಯವಿಲ್ಲ. ಇದೇ ಎಂದು ನನಗೂ ಕೂಡ ಅನಿಸಲಿಲ್ಲ. ಹಾಗೇ ಏನಾದರೂ ಇದ್ದಿದ್ರೆ ನಿವೇದಿತಾ ನೇರವಾಗಿ ನನಗೆ ಕರೆ ಮಾಡುತ್ತಿದ್ದರು. ಹಾಗೇನು ಅವರು ಮಾಡಲಿಲ್ಲ ಎಂದಿದ್ದಾರೆ.
ಮತ್ತೆ ನಿವೇದಿತಾ ಜೊತೆ ಡಿವೋರ್ಸ್ (Divorce) ನಂತರ ನಟಿಸಿದ್ದು ಎಮೋಷನಲಿ ಸ್ವಲ್ಪ ಕಷ್ಟವಾಯಿತು. ಪರ್ವಾಗಿಲ್ಲ, ಸಿನಿಮಾಗಾಗಿ ಮಾಡಬೇಕಾಗುತ್ತದೆ ಎಂದರು ಚಂದನ್ ಶೆಟ್ಟಿ.