‘ಸೀತಾ ವಲ್ಲಭ’ ಸೀರಿಯಲ್ ನಟಿ ಸುಪ್ರೀತಾ ಸತ್ಯನಾರಾಯಣ್ (Supritha Sathyanarayan) ಇತ್ತೀಚೆಗೆ ಚಂದನ್ ಶೆಟ್ಟಿ (Chandan Shetty) ಜೊತೆ ಎಂಗೇಜ್ ಆಗಿರೋದಾಗಿ ಅಧಿಕೃತವಾಗಿ ತಿಳಿಸಿದ್ದರು. ಇದೀಗ ಅವರ ಎಂಗೇಜ್‌ಮೆಂಟ್ ಫೋಟೋವನ್ನು ಹಂಚಿಕೊಂಡಿದ್ದಾರೆ.
ಇದೇ ಮಾರ್ಚ್ 12ರಂದು ಚಂದನ್ ಶೆಟ್ಟಿ ಜೊತೆ ನಟಿ ಅದ್ಧೂರಿಯಾಗಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಮರೂನ್ ಬ್ಲೌಸ್‌ಗೆ ಇರುವ ಹಸಿರು ಬಣ್ಣದ ಸೀರೆಯುಟ್ಟು ಸುಪ್ರೀತಾ ಸತ್ಯನಾರಾಯಣ್ ಮಿಂಚಿದ್ದಾರೆ. ಮರೂನ್ ಕಲರ್ ಶೆರ್ವಾನಿಯಲ್ಲಿ ವರ ಚಂದನ್ ಶೆಟ್ಟಿ ಧರಿಸಿದ್ದಾರೆ. ಇದನ್ನೂ ಓದಿ: ಉಡುಪಿ| ಹೊಸ ಮಾರಿಗುಡಿಗೆ ಬಾಲಿವುಡ್ ಖ್ಯಾತ ನಟ ಸುನೀಲ್ ಶೆಟ್ಟಿ ಭೇಟಿ
ಹಲವು ವರ್ಷಗಳ ಪ್ರೀತಿಗೆ ಉಂಗುರದ ಮುದ್ರೆ ಒತ್ತಿದ್ದಾರೆ. ಸದ್ಯದಲ್ಲೇ ಇಬ್ಬರು ಹಸೆಮಣೆ ಏರಲಿದ್ದಾರೆ. ಸದ್ಯ ಹೊಸ ಜೋಡಿಗೆ ಫ್ಯಾನ್ಸ್ ಶುಭಕೋರುತ್ತಿದ್ದಾರೆ. ಇದನ್ನೂ ಓದಿ:ಚಂದನ್ ಶೆಟ್ಟಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ‘ಸೀತಾ ವಲ್ಲಭ’ ನಟಿ
ಹೊಸ ಚಾಪ್ಟರ್ ಇಲ್ಲಿಂದ ಶುರು. ಹಲೋ ಎನ್ನುವ ನಿನ್ನ ಧ್ವನಿಯಿಂದಲೇ ಪ್ರೀತಿ ಶುರುವಾದ ಬಗ್ಗೆ ಹೇಳಲಾ ಅಥವಾ ನಿನ್ನ ನಗು ನೋಡಿದಾಗ ನನ್ನ ಹೊಟ್ಟೆಯೊಳಗಡೆ ಚಿಟ್ಟೆ ಹಾರಾಟ ಮಾಡೋ ಬಗ್ಗೆ ಹೇಳಲಾ? ನಿನ್ನ ನಗು ಅಂದ್ರೆ ನನಗೆ ತುಂಬ ಇಷ್ಟ. ಆ ನಗುಗೋಸ್ಕರ ನಾನು ಏನು ಬೇಕಿದ್ರೂ ಮಾಡುವೆ. ಖುಷಿಗೋಸ್ಕರ ನಾನು ದೇವರ ಬಳಿ ಪ್ರಾರ್ಥಿಸಿದೆ. ಅವನು ನನಗೆ ನಿಮ್ಮನ್ನು ಕೊಟ್ಟ. ನನ್ನ ಜೀವನಕ್ಕೆ ಬಂದಿದ್ದಕ್ಕೆ, ನಿಜವಾದ ಲವ್ ಏನು ಎಂದು ಅರ್ಥ ಮಾಡಿಸಿದ್ದಕ್ಕೆ, ನನ್ನ ಜೀವನವನ್ನು ಸುಂದರ ಮಾಡಿದ್ದಕ್ಕೆ ಥ್ಯಾಂಕ್ಯೂ ಎಂದು ಇತ್ತೀಚೆಗೆ ಭಾವಿ ಪತಿಯೊಂದಿನ ಫೋಟೋ ಹಾಕಿ ಬರೆದುಕೊಂಡಿದ್ದರು ಸುಪ್ರೀತಾ.
View this post on Instagram
ನಿನ್ನ ನಗು, ಶಾಂತಿ, ಖುಷಿಗೋಸ್ಕರ ನಾನು ಪ್ರಾಮೀಸ್ ಮಾಡುವೆ. ನಿನ್ನ ಜೀವನದುದ್ದಕ್ಕೂ ಇರುವೆ ಎಂದು ಮಾತುಕೊಡ್ತೀನಿ. ಇಬ್ಬರೂ ಒಟ್ಟಿಗೆ ಜೀವನ ಕಳೆಯೋಣ. ಐ ಲವ್ ಯೂ ಕಂದ. ನನ್ನ ಹೃದಯ ನಿನ್ನದು. ನನ್ನ ಎದೆಯಾಳೋ ಧಣಿ ನೀನೇ, ನಿನ್ನ ಸಹಚಾರಿಣಿ ನಾನೇ ಎಂದು ನಟಿ ಪೋಸ್ಟ್ ಮಾಡಿದ್ದರು.
ಡಿಜಿಟಲ್ ಕ್ರಿಯೇಟರ್, ಸಾಫ ಉದ್ಯೋಗಿ ಚಂದನ್ ಶೆಟ್ಟಿ ಅವರನ್ನು ಮದುವೆಯಾಗಲು ನಟಿ ಸಜ್ಜಾಗಿದ್ದಾರೆ. ಕೊಡಗು ಮೂಲದ ಚಂದನ್ ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.