ಬೆಂಗಳೂರು: ಬಿಗ್ ಬಾಸ್ ಸೀಸನ್ 5 ಕಾರ್ಯಕ್ರಮದ ಸ್ಪರ್ಧಿಗಳಾದ ರ‍್ಯಾಪರ್ ಚಂದನ್ ಶೆಟ್ಟಿ ಮತ್ತು ಶೃತಿ ಪ್ರಕಾಶ್ ಈಗ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ.
`ಬಿಗ್ ಬಾಸ್’ ಮನೆಯೊಳಗಿದ್ದ ಸಂದರ್ಭದಲ್ಲಿ ಇಬ್ಬರೂ ಆತ್ಮೀಯರಾಗಿದ್ದರು. ಅಲ್ಲಿಂದ ಹೊರ ಬಂದ ಬಳಿಕ ಇಬ್ಬರೂ ತಮ್ಮದೇ ಕೆಲಸಗಳಲ್ಲಿ ಬ್ಯುಸಿಯಾಗಿದ್ದರು. ರಿಯಾಲಿಟಿ ಶೋ ತೀರ್ಪುಗಾರ, ಸಂಗೀತ ನಿರ್ದೇಶನ, ಗಾಯನ ಹೀಗೆ ಹಲವು ರೀತಿಯಲ್ಲಿ ಚಂದನ್ ಬ್ಯುಸಿಯಾಗಿದ್ದಾರೆ. ಶ್ರುತಿ ಅವರು ಗಾಯನ, ಅಭಿನಯದಲ್ಲಿ ತೊಡಗಿಕೊಂಡಿದ್ದಾರೆ.
Advertisement
ಇದೀಗ ಚಂದನ್ ಹಾಗೂ ಶ್ರುತಿ ಪ್ರಕಾಶ್ ಒಂದೇ ಹಾಡಿನಲ್ಲಿ ನಟಿಸುತ್ತಿದ್ದಾರೆ. ಚಂದನ್ ಬಿಗ್ ಬಾಸ್ ಶೋ ಮುಗಿಸಿ ಬಂದ ಮೇಲೆ ಅವರ ಯಾವುದೇ ಹಾಡು ಬಿಡುಗಡೆಯಾಗಿಲ್ಲ. ಈಗ ಇವರಿಬ್ಬರ ಕಾಂಬಿನೇಷನ್ ನಲ್ಲಿ ಹೊಸ ಸಾಂಗ್ ಮೂಡಿ ಬರುತ್ತಿದೆ. ಇದನ್ನು ಓದಿ: ಮತ್ತೆ ಒಂದಾದ ಚಂದನ್ ಶೆಟ್ಟಿ-ಶೃತಿ ಪ್ರಕಾಶ್
Advertisement
Advertisement
ಚಂದನ್ ಸದ್ಯಕ್ಕೆ ಹೊಸ ಹಾಡಿನ ತಯಾರಿಯಲ್ಲಿದ್ದು, ಚಂದನ್ ಮತ್ತು ಶೃತಿ ಕಾಂಬೀನೇಷನ್ ನಲ್ಲಿ ಮೂಡಿ ಬರುತ್ತಿರುವ ಹೊಸ ಹಾಡಿಗೆ ಟೈಟಲ್ ಹುಡುಕುತ್ತಿದ್ದಾರೆ. ಆದರೆ ಈಗ ಅವರೇ ಹೊಸ ಸಾಂಗ್ ಟೈಟಲ್ ಹುಡುಕುವ ಆಫರ್ ಅನ್ನು ಅಭಿಮಾನಿಗಳಿಗೆ ಕೊಟ್ಟಿದ್ದಾರೆ. ಚಂದನ್ ತಮ್ಮ ಇನ್ಸ್ ಸ್ಟಾಗ್ರಾಮ್ ನಲ್ಲಿ ಶೃತಿ ಪ್ರಕಾಶ್ ಜೊತೆಗಿರುವ ಫೋಟೋವನ್ನು ಹಾಕಿ ಹೊಸ ಹಾಡಿಗೆ ಒಂದು ಟೈಟಲ್ ನೀಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.