ನವದೆಹಲಿ: ಈ ಬಾರಿಯ ಮುಂಗಾರು ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯನ್ನು (Mansoon Rain) ತರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ಜೂನ್‌ನಿಂದ ಸೆಪ್ಟೆಂಬರ್‌ವರೆಗಿನ ನಾಲ್ಕು ತಿಂಗಳ ಕಾಲ ಸರಾಸರಿ 87 ಸೆಂ.ಮೀ. ಮಳೆಯ ದೀರ್ಘಕಾಲೀನ ಸರಾಸರಿಗಿಂತ 105% ಮಳೆಯಾಗುವ ಸಾಧ್ಯತೆಯಿದೆ, ಇದರಲ್ಲಿ ±5% ದೋಷಾಂಶವಿರಲಿದೆ ಎಂದು ಅಂದಾಜಿಸಿದೆ.
ನೈಋತ್ಯ ಮಾನ್ಸೂನ್ ಸಾಮಾನ್ಯವಾಗಿ ಜೂನ್ 1ರ ಸುಮಾರಿಗೆ ಕೇರಳದ ಮೂಲಕ ತನ್ನ ಮುನ್ನಡೆಯನ್ನು ಪ್ರಾರಂಭಿಸಿ ಸೆಪ್ಟೆಂಬರ್ ಮಧ್ಯಭಾಗದಲ್ಲಿ ಹಿಂದೆ ಸರಿಯುತ್ತದೆ. ಸರಾಸರಿಗಿಂತ ಹೆಚ್ಚಿನ ಮಳೆಯು ಕೃಷಿ ವಲಯಕ್ಕೆ ಅಗತ್ಯವಾದ ಉತ್ತೇಜನವನ್ನು ನೀಡಬಹುದು ಎಂದು ಭೂ ವಿಜ್ಞಾನ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ನವಜಾತ ಶಿಶುಗಳ ಕಳ್ಳಸಾಗಣೆ ಮಾಡಿದರೆ ಆಸ್ಪತ್ರೆಗಳ ಪರವಾನಿಗೆ ಕೂಡಲೇ ಅಮಾನತುಗೊಳಿಸಿ: ಸುಪ್ರೀಂ
ಈ ವರ್ಷದ ಮುನ್ಸೂಚನೆಯ ಪ್ರಕಾರ, ಕೆಲವು ಪ್ರದೇಶಗಳನ್ನು ಹೊರತುಪಡಿಸಿ, ದೇಶದ ಹೆಚ್ಚಿನ ಭಾಗಗಳು ಅನುಕೂಲಕರ ಮಳೆಯಿಂದ ಪ್ರಯೋಜನ ಪಡೆಯುವ ಸಾಧ್ಯತೆಯಿದೆ. ನಾಲ್ಕು ತಿಂಗಳ ಮಾನ್ಸೂನ್ ಋತುವಿನಲ್ಲಿ ಲಡಾಖ್, ಈಶಾನ್ಯ ಮತ್ತು ತಮಿಳುನಾಡಿನಲ್ಲಿ ಮಳೆ ಸಾಮಾನ್ಯಕ್ಕಿಂತ ಕಡಿಮೆ ಇರಲಿದೆ ಎಂದು ನಿರೀಕ್ಷಿಸಲಾಗಿದೆ. ಇದನ್ನೂ ಓದಿ: Gadag | ಡೆತ್‌ನೋಟ್ ಬರೆದಿಟ್ಟು ನವ ವಿವಾಹಿತೆ ಆತ್ಮಹತ್ಯೆ
ಐಎಂಡಿ ಸಾಮಾನ್ಯ ಮಳೆಯನ್ನು 50 ವರ್ಷಗಳ ಸರಾಸರಿ 87 ಸೆಂ.ಮೀ (ಸುಮಾರು 35 ಇಂಚುಗಳು) 96% ರಿಂದ 104% ರವರೆಗೆ ವ್ಯಾಖ್ಯಾನಿಸುತ್ತದೆ. ಈ ವ್ಯಾಪ್ತಿಗಿಂತ ಹೆಚ್ಚಿನ ಪ್ರಮಾಣವನ್ನು ‘ಸಾಮಾನ್ಯಕ್ಕಿಂತ ಹೆಚ್ಚು’ ಎಂದು ಪರಿಗಣಿಸಲಾಗುತ್ತದೆ. ಇದನ್ನೂ ಓದಿ: ವರದಿಯೇ ಹೊರಗೆ ಬಾರದೇ ಜಾತಿಗಣತಿ ವಿರೋಧ ಮಾಡೋದು ಸರಿಯಲ್ಲ: ಸಂತೋಷ್ ಲಾಡ್
ಭಾರತೀಯ ಸಾಗರದ ಡೈಪೋಲ್ ಸಕಾರಾತ್ಮಕವಾಗಿರುವುದು ದಕ್ಷಿಣ ಭಾರತದ ರಾಜ್ಯಗಳಿಗೆ ಹೆಚ್ಚಿನ ಮಳೆಯನ್ನು ತರಲಿದೆ. ಈ ವರ್ಷದ ಉತ್ತರ ಗೋಳಾರ್ಧದಲ್ಲಿ ಕಡಿಮೆ ಹಿಮಪಾತವೂ ಮುಂಗಾರಿಗೆ ಪೂರಕವಾಗಿದೆ ಎಂದು ಹವಮಾನ ಇಲಾಖೆ ಮುಖ್ಯಸ್ಥ ಡಾ. ಮೃತ್ಯುಂಜಯ್ ಮೊಹಪಾತ್ರಾ ತಿಳಿಸಿದ್ದಾರೆ. ಕಳೆದ ವರ್ಷ ಮುಂಗಾರು 108% LPA ಮಳೆಯನ್ನು ಒದಗಿಸಿತ್ತು. ಆದರೆ ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ಕಡಿಮೆ ಮಳೆಯಾಗಿತ್ತು. ಐಎಂಡಿ ತನ್ನ ಮುನ್ಸೂಚನೆಯನ್ನು ಮೇ ತಿಂಗಳಲ್ಲಿ ನವೀಕರಿಸಲಿದೆ. ಇದನ್ನೂ ಓದಿ: Chitradurga | ಗಂಜಲಗುಂಟೆ ಗ್ರಾಮದಲ್ಲಿ 3 ತಿಂಗಳಿಂದ ನೀಗದ ನೀರಿನ ಬವಣೆ – ಗ್ರಾಮಸ್ಥರು ಕಂಗಾಲು