ಬೆಂಗಳೂರು: ಚಾಮರಾಜಪೇಟೆ(Chamrajpet) ಶಾಸಕ ಜಮೀರ್ ಅಹ್ಮದ್(Zameer Ahmed) ಅವರು ಗಣೇಶೋತ್ಸವದ ಪ್ರಯುಕ್ತ 10 ಕಿ.ಮೀ ರ‍್ಯಾಲಿ ನಡೆಸಿ, ಪ್ರಥಮ ವಂದಿತನಿಗೆ ವಿಶೇಷ ಪೂಜೆಸಲ್ಲಿಸಿದ್ದಾರೆ.
ಮೈಸೂರು ಟೋಲ್ ಗೇಟ್ ನಿಂದ ಆರಂಭವಾದ ಗಣೇಶೋತ್ಸವ ರ‍್ಯಾಲಿಯು, ಚಾಮರಾಜಪೇಟೆಯ ಅಶ್ವತ್ಥ ಕಟ್ಟೆ ಯ ಮೂಲಕ ಹಾದು ವಾಲ್ಮೀಕಿ ನಗರ ದವರೆಗೆ ಸಾಗಿತು. ಬಣ್ಣ ಬಣ್ಣದ ಹೂಗಳು ಹಾಗೂ ಬೃಹತ್ ಮಾಲೆ ಯಿಂದ ಅಲಂಕೃತಗೊಂಡಿದ್ದ ಗಣೇಶನನ್ನು ಹೊತ್ತು ಸಾಗಿದ ವಾಹನವು ಆಕರ್ಷಣೆಯ ಕೇಂದ್ರಬಿಂದುವಾಗಿತ್ತು.
Advertisement
Advertisement
ತಾವು ಸಾಗುವ ಮಾರ್ಗದಲ್ಲಿ ಪ್ರತಿಷ್ಠಾಪಿಸಲಾಗಿದ್ದ ವಿನಾಯಕ ಮೂರ್ತಿಯ ಬಳಿಗೆ ತೆರಳಿ ಪೂಜೆ ಸಲ್ಲಿಸಿದ ಜಮೀರ್ ಅಹ್ಮದ್ ಖಾನ್ ಅವರು, ಗಣೇಶನಿಗೆ ಕಾಣಿಕೆ ಅರ್ಪಿಸಿ, ನೆರೆದಿದ್ದ ಭಕ್ತಾದಿಗಳು ಹಾಗೂ ಸ್ಥಳೀಯರಿಗೆ ಸಿಹಿ ಹಂಚಿ ಅನ್ನಸಂತರ್ಪಣೆ ಮಾಡಿದರು. ಈ ವೇಳೆ ಅವರೊಂದಿಗೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
Advertisement
ಚಾಮರಾಜಪೇಟೆಯ ಅಶ್ವತ್ಥ ಕಟ್ಟೆಯಲ್ಲಿ ಡಾ.ವಿಷ್ಣುವರ್ಧನ್ ಪ್ರತಿಮೆಗೆ ಶಾಸಕ ಜಮೀರ್ ಅಹ್ಮದ್ ಖಾನ್ ಅವರು ಮಾಲಾರ್ಪಣೆ ಮಾಡಿ, ಕೇಕ್ ಕತ್ತರಿಸಿ ಸಿಹಿ ಹಂಚಿ ನೂರಾರು ಜನರಿಗೆ ಅನ್ನಸಂತರ್ಪಣೆ ಮಾಡಿದರು.
Advertisement
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ನಾನು ಡಾ.ವಿಷ್ಣುವರ್ಧನ್ ಅವರ ಅಪ್ಪಟ ಅಭಿಮಾನಿ. ಇಂದು ಎಲ್ಲೆಡೆ ಅವರ ಜನ್ಮದಿನವನ್ನು ಅತ್ಯಂತ ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತಿದೆ. ಅಂತೆಯೇ ನಾನೂ ಇಂದು ಅವರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿ, ಸಾಹಸಸಿಂಹನ ಸವಿ ನೆನಪುಗಳನ್ನು ಮೆಲುಕು ಹಾಕಿದೆ. ಸರಳ ಮತ್ತು ಮೃದು ಸ್ವಭಾವದರಾಗಿದ್ದ ಡಾ. ವಿಷ್ಣುವರ್ಧನ್ ಅವರು ಅಭಿನಯಿಸಿರುವ ಸದಭಿರುಚಿಯ ಚಿತ್ರಗಳ ಮೂಲಕ ಅವರು ಸದಾ ನಮ್ಮೆಲ್ಲರ ಮನದಲ್ಲಿ ಅಜರಾಮರರಾಗಿರುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.