ಬೆಂಗಳೂರು: ಹೆಲ್ಮೆಟ್ ಧರಿಸದೇ ಬೈಕ್ ಓಡಿಸಿ ಚಾಮರಾಜ ಪೇಟೆಯ ಜೆಡಿಎಸ್ ರೆಬಲ್ ಶಾಸಕ ಜಮೀರ್ ಅಹ್ಮದ್ ಸಂಚಾರ ನಿಯಮವನ್ನು ಉಲ್ಲಂಘಿಸಿದ್ದಾರೆ.
ಚಾಮರಾಜ ಪೇಟೆಯ ರಸ್ತೆಯಲ್ಲಿ ಕಳೆದ ಎರಡು ದಿನದಿಂದ ರಾತ್ರಿ ಚುನಾವಣೆ ಪ್ರಚಾರಕ್ಕಾಗಿ ಜಮೀರ್ ಅಹ್ಮದ್ ಓಡಾಡುತ್ತಿದ್ದಾರೆ. ಬೈಕ್ ನಲ್ಲಿ ಹೆಲ್ಮೆಟ್ ಹಾಕದೇ ಹಿಂಬದಿಯಲ್ಲಿ ಕಾರ್ಯಕರ್ತನನ್ನು ಕೂರಿಸಿ ಸಿಗ್ನಲ್ ಜಂಪ್ ಮಾಡಿ ಮನಸೋ ಇಚ್ಛೆ ಗಾಡಿ ಚಲಾಯಿಸಿದ್ದಾರೆ ಎನ್ನುವ ಆರೋಪ ಈಗ ಜಮೀರ್ ಮೇಲೆ ಕೇಳಿಬಂದಿದೆ.
Advertisement
ಜಮೀರ್ ಅಡ್ಡಾದಿಡ್ಡಿಯಾಗಿ ಬೈಕ್ ಚಲಾಯಿಸಿದರೂ ಮೂಕ ಪ್ರೇಕ್ಷಕ ನಂತೆ ಪೊಲೀಸರು ನಿಂತಿದ್ದರು. ಜಮೀರ್ ಹೆಲ್ಮೆಟ್ ಧರಿಸದೇ ಬೈಕ್ ಓಡಿಸುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ.
Advertisement
ಬುಧವಾರ ಟ್ರಾಫಿಕ್ ಇರುವ ರಸ್ತೆಯಲ್ಲಿ ಒನ್ ವೇಯಲ್ಲಿ ಜಮೀರ್ ಅಹ್ಮದ್ ಸವಾರಿ ಮಾಡಿದ್ದರು. ಈ ವೇಳೆ ಜಮೀರ್ ಕಾರಿನಲ್ಲಿ ಕಾರ್ಯಕರ್ತರು ಹತ್ತಿ ನಿಂತಿದ್ದರು.
Advertisement
ಮಹಾರಾಜರಂತೆ ಜಮೀರ್ ಕಾರಿನಲ್ಲಿ ಸವಾರಿ ಮಾಡುತ್ತಿದ್ರೆ ರಸ್ತೆಯದ್ದಕ್ಕೂ ಅವರ ಗಾಡಿ ಹಿಂದೆ ಬಹುಪರಾಕ್ ಹೇಳಲು ಕಾರ್ಯಕರ್ತರ ದಂಡು ಬರುತ್ತಿದ್ದು, ಇದರಿಂದಾಗಿ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ ಎಂದು ಸಾರ್ವಜನಿಕರು ಹೇಳಿದ್ದಾರೆ.
Advertisement
https://youtu.be/1xqGbIO-Asw