– ಬೌಲಿಂಗ್‌ನಲ್ಲಿ ಮಿಂಚಿದ ಕುಲ್ದೀಪ್ ಯಾದವ್
– ಅರ್ಧಶತಕ ಗಳಿಸಿದ ಸೌದ್ ಶಕೀಲ್
ದುಬೈ: ಇಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಪಾಕಿಸ್ತಾನ 241ಕ್ಕೆ ಆಲೌಟ್ ಆಗಿ ಭಾರತಕ್ಕೆ 242 ರನ್‌ಗಳ ಗುರಿ ನೀಡಿದೆ.
Advertisement
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನಕ್ಕೆ ಆರಂಭಿಕ ಆಘಾತ ಎದುರಾಯಿತು. ಕೇವಲ 10 ರನ್‌ಗಳಿಗೆ ಇಮಾಮ್-ಉಲ್-ಹಕ್ ಮತ್ತು 23 ರನ್ ಗಳಿಸಿ ಬಾಬರ್ ಅಜಮ್ ವಿಕೆಟ್ ಒಪ್ಪಿಸಿದ್ದು, ಪಾಕ್ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತು.
Advertisement
Advertisement
52 ರನ್ ಇರುವಾಗಲೇ ಪಾಕಿಸ್ತಾನ ಎರಡು ವಿಕೆಟ್ ಕಳೆದುಕೊಂಡಿತ್ತು. ಈ ಸಂದರ್ಭದಲ್ಲಿ ಸೌದ್ ಶಕೀಲ್ ಮತ್ತು ಕ್ಯಾಪ್ಟನ್ ಮೊಹಮ್ಮದ್ ರಿಜ್ವಾನ್ ಜೊತೆಗೂಡಿ ತಂಡಕ್ಕೆ ಚೇತರಿಕೆ ನೀಡಿದರು. ಈ ಜೋಡಿ 144 ಬಾಲ್‌ಗಳಿಗೆ 104 ರನ್ ಗಳಿಸಿ ಭರವಸೆ ಮೂಡಿಸಿತು. ಸೌದ್ ಶಕೀಲ್ ಅರ್ಧಶತಕ (62 ರನ್, 76 ಬಾಲ್, 5 ಫೋರ್) ಸಿಡಿಸಿದರು. ರಿಜ್ವಾನ್ 46 ರನ್ ಗಳಿಸಿದರು.
Advertisement
ರಿಜ್ವಾನ್ ವಿಕೆಟ್ ಒಪ್ಪಿಸಿ ಹೊರನಡೆಯುತ್ತಿದ್ದಂತೆ ಮ್ಯಾಚ್ ಪಥವೇ ಬದಲಾಯಿತು. ಕ್ರೀಸ್‌ಗೆ ಬಂದ ಬ್ಯಾಟರ್‌ಗಳು ಹೆಚ್ಚು ಹೊತ್ತು ನಿಲ್ಲದೇ ವಿಕೆಟ್‌ಗಳನ್ನು ಒಪ್ಪಿಸಿ ಹೊರ ನಡೆದರು. ಸಲ್ಮಾನ್ ಆಘಾ 19, ತಯ್ಯಬ್ ತಹಿರ್ 4 ರನ್ ಗಳಿಸಿ ಔಟಾದರು.
ಖುಷ್ದಿಲ್ ಷಾ 38 ರನ್ ಗಳಿಸಿದರು. ಶಾಹೀನ್ ಶಾ ಅಫ್ರಿದಿ ಶೂನ್ಯ ಸುತ್ತಿ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ನಸೀಮ್ ಷಾ 14 ರನ್ ಗಳಿಸಿದರು. ಅಂತಿಮವಾಗಿ ಪಾಕಿಸ್ತಾನ 49.4 ಬಾಲ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 241 ರನ್ ಗಳಿಸಿತು.
ಟೀಂ ಇಂಡಿಯಾ ಪರ ಕುಲ್ದೀಪ್ ಯಾದವ್ 3 ವಿಕೆಟ್ ಕಿತ್ತು ಸ್ಪಿನ್ ಮೋಡಿ ಮಾಡಿದರು. ಹಾರ್ದಿಕ್ ಪಾಂಡ್ಯ 2, ಹರ್ಷಿತ್ ರಾಣಾ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ ತಲಾ ಒಂದು ವಿಕೆಟ್ ಕಿತ್ತರು.