– ಮತ್ತೆ ಭಾರತಕ್ಕೆ ʻಹೆಡ್ಡೇಕ್ʼ ಆಗುತ್ತಾ?
ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಇನ್ನೇನು ಅಂತಿಮಘಟ್ಟ ತಲುಪಿದೆ. ಇಂದು ನಡೆಯಲಿರೋ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ತಂಡಗಳಾದ ಟೀಂ ಇಂಡಿಯಾ (Team India) ಹಾಗೂ ಆಸ್ಟ್ರೇಲಿಯಾ (Australia) ಮುಖಾಮುಖಿಯಾಗಲಿವೆ.
ಮಧ್ಯಾಹ್ನ 2:30ಕ್ಕೆ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆರಂಭವಾಗಲಿದ್ದು, 2023ರ ಏಕದಿನ ವಿಶ್ವಕಪ್ ಫೈನಲ್ ಸೋಲಿಗೆ ಭಾರತ ಸೇಡು ತೀರಿಸಿಕೊಳ್ಳಲಿದೆಯೇ ಎಂಬುದನ್ನು ಕಾದುನೋಡಬೇಕಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ (champions trophy) ಈವರೆಗೆ ಭಾರತ ಮತ್ತು ಆಸೀಸ್ ನಡುವೆ 4 ಪಂದ್ಯಗಳು ನಡೆದಿದ್ದು, 2 ರಲ್ಲಿ ಭಾರತ, 1ರಲ್ಲಿ ಆಸ್ಟ್ರೇಲಿಯಾ ಗೆದ್ದರೆ, 2009ರಲ್ಲಿ ಒಂದು ಪಂದ್ಯ ಮಳೆಗೆ ಬಲಿಯಾಗಿತ್ತು. ಇದನ್ನೂ ಓದಿ: ವರುಣ್ ಬೆಂಕಿ ಬೌಲಿಂಗ್‌ಗೆ ನ್ಯೂಜಿಲೆಂಡ್ ಬರ್ನ್ – ಭಾರತಕ್ಕೆ 44 ರನ್‌ಗಳ ಭರ್ಜರಿ ಜಯ
Advertisement
Advertisement
ಪಿಚ್ ರಿಪೋರ್ಟ್ ಹೇಗಿದೆ?
ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಬಳಸಿದ ಪಿಚ್‌ನಲ್ಲಿಯೇ ಈ ಪಂದ್ಯ ನಡೆಯಲಿದೆ. ಇನ್ನೂ ದುಬೈನ ಯಾವುದೇ ಅಂಗಳದಲ್ಲಿ ಪಂದ್ಯ ನಡೆದರೂ, ಪಂದ್ಯ ಸಾಗಿದಂತೆ ಪಿಚ್ ನಿಧಾನಗೊಳ್ಳುತ್ತದೆ. ಹೀಗಾಗಿ ಸ್ಪಿನ್ ಮಾಂತ್ರಿಕರು ಹೆಚ್ಚು ಪರಿಣಾಮಕಾರಿಯಾಗಲಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲೂ ಟೀಂ ಇಂಡಿಯಾ ನಾಲ್ವರು ಸ್ಪಿನ್ನರ್‌ಗಳನ್ನ ಕಣಕ್ಕಿಳಿಸೋ ಸಾಧ್ಯತೆಯಿದೆ. ವರುಣ್ ಚಕ್ರವರ್ತಿ ಜೊತೆಗೆ ಕುಲ್‌ದೀಪ್ ಯಾದವ್, ಅಕ್ಷರ್ ಪಟೇಲ್ ಹಾಗೂ ರವೀಂದ್ರ ಜಡೇಜಾ ಕಣಕ್ಕಿಳಿಯೋದು ಫಿಕ್ಸ್ ಆಗಿದೆ. ಸ್ಪೀಡ್ ಗನ್ ಮೊಹಮ್ಮದ್ ಶಮಿ ಜೊತೆಗೆ ಹಾರ್ದಿಕ್ ಪಾಂಡ್ಯ ವೇಗದ ಬೌಲಿಂಗ್‌ನಲ್ಲಿ ಜೊತೆಯಾಗಲಿದ್ದಾರೆ.
Advertisement
Advertisement
ಇಬ್ಬನಿಯ ಸಮಸ್ಯೆ ಇಲ್ಲದಿರುವ ಕಾರಣ, ಟಾಸ್ ಗೆಲ್ಲುವ ತಂಡ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸುವ ಸಾಧ್ಯತೆ ಹೆಚ್ಚು. 270-280 ರನ್ ಗೆಲ್ಲುವ ಸ್ಕೋರ್ ಆಗಬಹುದು. ಆದ್ರೆ ಸದ್ಯ ಟೀಂ ಇಂಡಿಯಾ ಮೊದಲು ಬ್ಯಾಟ್ ಮಾಡಿದ್ರೆ 300 ರನ್ ಅಥವಾ ಮೊದಲು ಬೌಲಿಂಗ್ ಮಾಡಿದ್ರೆ ಆಸೀಸ್ ತಂಡವನ್ನು 250 ರನ್‌ಗಳಿಗೆ ಕಟ್ಟಿಹಾಕುವ ಯೋಚನೆಯಲ್ಲಿದೆ. ಸದ್ಯ ಸತತ 13 ಬಾರಿ ಟಾಸ್ ಸೋತಿರುವ ಟೀಂ ಇಂಡಿಯಾ ಈಬಾರಿಯಾದ್ರೂ ಟಾಸ್ ಗೆಲ್ಲುತ್ತಾ ಎಂಬುದನ್ನು ಕಾದುನೋಡಬೇಕಿದೆ. ಇದನ್ನೂ ಓದಿ: ರೋಹಿತ್ ಶರ್ಮಾ ದಪ್ಪಗಿದ್ದಾರೆ – ಕಾಂಗ್ರೆಸ್ ವಕ್ತಾರೆ ಪೋಸ್ಟ್, ವಿವಾದದ ಬೆನ್ನಲ್ಲೇ ಪಕ್ಷದಿಂದ ಛೀಮಾರಿ
ಇನ್ನೂ ಟೀಂ ಇಂಡಿಯಾ ಬ್ಯಾಟರ್‌ಗಳು ಫಾರ್ಮ್‌ನಲ್ಲಿ ಇರೋದ್ರಿಂದ ಆಸೀಸ್ ವಿರುದ್ಧ ರನ್ ಶಿಖರ ಕಟ್ಟುವ ಸಾಧ್ಯತೆಯಿದೆ. ಹಿಟ್‌ಮ್ಯಾನ್ ರೋಹಿತ್ ಶರ್ಮಾ, ಶುಭಮನ್ ಗಿಲ್, ಆರಂಭದಲ್ಲಿ ಬಿಗ್ ಇನ್ನಿಂಗ್ಸ್ ಕಟ್ಟಬೇಕಿದೆ. 3ನೇ ಕ್ರಮಾಂಕದಲ್ಲಿ ಕೊಹ್ಲಿ, 4ನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಿದ್ರೆ, ಕನ್ನಡಿಗ ಅಕ್ಷರ್ ಪಟೇಲ್, ಕೆ.ಎಲ್ ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯ ಮ್ಯಾಚ್ ಫಿನಿಶರ್‌ಗಳಾಗಿ ಕಣಕ್ಕಿಳಿಯಲು ಕಾದುಕುಳಿತಿದ್ದಾರೆ. ಇದನ್ನೂ ಓದಿ: ಬೆತ್ ಮೂನಿ ಸ್ಫೋಟಕ ಬ್ಯಾಟಿಂಗ್ – ಯುಪಿ ವಿರುದ್ಧ ಗುಜರಾತ್‌ಗೆ 81 ರನ್‌ಗಳ ಭರ್ಜರಿ ಜಯ
ʻಭಾರತಕ್ಕೆ ಹೆಡ್ಡೇಕ್ʼ
ಟೀಂ ಇಂಡಿಯಾದಂತೆ ಆಸ್ಟ್ರೇಲಿಯಾ ಕೂಡ ಸಾಲಿಡ್ ಫಾರ್ಮ್‌ನಲ್ಲಿದೆ. ಅದ್ರಲ್ಲೂ ಐಸಿಸಿ ಟ್ರೋಫಿ ಟೂರ್ನಿಗಳಾದ್ರೆ, ಕಾಂಗರೂಗಳು ಎದುರಾಳಿ ತಂಡಗಳನ್ನು ಬೇಟೆಯಾಡೋದ್ರಲ್ಲಿ ಅನುಮಾನವೇ ಇಲ್ಲ. ಎಷ್ಟೇ ಟಾರ್ಗೆಟ್ ಆಗಿರಲಿ, ಎಂತಹದ್ದೇ ಸಂದರ್ಭ ಇರಲಿ, ಆಸೀಸ್ ಆಟಗಾರರು ವೀರಾವೇಶದಿಂದ ಹೋರಾಡ್ತಾರೆ. ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯವೂ ಇದಕ್ಕೆ ಸಾಕ್ಷಿಯಾಗಿದೆ. ಬುಮ್ರಾ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯುತ್ತಿರುವ ಭಾರತ ತಂಡಕ್ಕೆ ಟ್ರಾವಿಸ್ ಹೆಡ್ ಮತ್ತೆ ಕಾಡುತ್ತಾರಾ? ಅಥವಾ ಶಮಿ ಸಾರಥ್ಯ ಬೌಲಿಂಗ್ ಪಡೆ ಬಹುಬೇಗನೆ ವಿಕೆಟ್ ಪಡೆದು ಪೆವಿಲಿಯನ್‌ಗಟ್ಟುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.
ವಿಶ್ವಕಪ್ ಸೋಲಿಗೆ ತಿರುಗೇಟು ಕೊಡುತ್ತಾ ಟೀಂ ಇಂಡಿಯಾ..?
ಇನ್ನೂ ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ 2023ರ ವಿಶ್ವಕಪ್ ಫೈನಲ್ ಪಂದ್ಯದ ಸೋಲು ಮರೆಯೋದಕ್ಕೆ ಸಾಧ್ಯವಿಲ್ಲ. ಒಂದೂವರೆ ವರ್ಷಗಳ ನಂತರ ಮತ್ತೊಂದು ಐಸಿಸಿ ಟೂರ್ನಿಯ ಸೆಮಿಫೈನಲ್‌ನಲ್ಲಿ ಭಾರತ-ಆಸ್ಟ್ರೇಲಿಯಾ ಮುಖಾಮುಖಿ ಎದುರಾಗ್ತಿವೆ. ಆಸ್ಟ್ರೇಲಿಯಾವನ್ನು ಸೋಲಿಸಿ ಸೇಡು ತೀರಿಸಿಕೊಳ್ಳೋಕೆ ಇದೊಂದು ಒಳ್ಳೆಯ ಅವಕಾಶ. ರೋಹಿತ್ ಶರ್ಮಾ ಪಡೆ ಆಸೀಸ್‌ನ್ನು ಸೋಲಿಸಿ ಸೇಡು ತೀರಿಸಿಕೊಳ್ಳುತ್ತದೆ ಎಂದು ಟೀಂ ಇಂಡಿಯಾ ಕ್ರಿಕೆಟ್ ಪ್ರೇಮಿಗಳು ನಿರೀಕ್ಷಿಸಿದ್ದಾರೆ.