ನವದೆಹಲಿ: ಅಯೋಧ್ಯೆಯಲ್ಲಿ (Ayodhya) ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರ (Ram Mandir) ಕಾಮಗಾರಿ ಮುಂದಿನ ಸಂಕ್ರಮಣದ ವೇಳೆಗೆ ಅಂತ್ಯವಾಗಲಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ತಿಳಿಸಿದ್ದಾರೆ. ಅಕ್ಟೋಬರ್ ವೇಳೆಗೆ ಮೊದಲ ಮಹಡಿ ಸಿದ್ಧವಾಗಲಿದ್ದು, ಮುಂದಿನ ಜನವರಿಗೆ ಕಾಮಗಾರಿ ಅಂತ್ಯವಾಗಲಿದೆ ಎಂದರು.
ಸುದ್ದಿಗೋಷ್ಠಿ ನಡೆಸಿ ಮಂದಿರ ನಿರ್ಮಾಣ ಪ್ರಗತಿ ಬಗ್ಗೆ ತಿಳಿಸಿದ ಅವರು, ದೇವಸ್ಥಾನದ ಕಾಮಗಾರಿ 60%ರಷ್ಟು ಅಂತ್ಯವಾಗಿದೆ. ವೇಗವಾಗಿ ಕಾಮಗಾರಿ ವೇಗವಾಗಿ ನಡೆಯುತ್ತಿದ್ದು, ನಿಗದಿತ ಅವಧಿಗಿಂತ ಮುಂಚೆ ಕಾಮಗಾರಿ ಅಂತ್ಯವಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
Advertisement
Advertisement
2024ರ ಮಕರ ಸಂಕ್ರಾಂತಿಯ (Makar Sankranti) ವೇಳೆಗೆ ದೇವಾಲಯದ ಗರ್ಭಗುಡಿಯಲ್ಲಿ ಭಗವಾನ್ ರಾಮಲಾಲಾ ಅವರ ಪ್ರಾಣ ಪ್ರತಿಸ್ಥಾಪಿಸಲಾಗುವುದು, ಸದ್ಯದ ಸಿದ್ಧತೆಗಳ ಪ್ರಕಾರ ಜನವರಿ 1 ರಿಂದ 14ರೊಳಗೆ ಪ್ರಾಣ ಪ್ರತಿಷ್ಠಾನ ಕಾರ್ಯ ನಡೆಯುವ ಯೋಜನೆ ಇದೆ ಎಂದರು. ಇದನ್ನೂ ಓದಿ: ನಿರಾಣಿ ಆ ಹುಲಿ ಜೊತೆ ಮಾತಾಡಲಿ- ಯತ್ನಾಳ್‍ರನ್ನ ಹುಲಿಗೆ ಹೋಲಿಕೆ ಮಾಡಿದ ಸ್ವಾಮೀಜಿ
Advertisement
ಶ್ರೀರಾಮನ ವಿಗ್ರಹವು ಟ್ರಸ್ಟ್ ಪ್ರಕಾರ 8.5 ಅಡಿ ಎತ್ತರವಿರುತ್ತದೆ. ರಾಮ ನವಮಿಯಂದು ಸೂರ್ಯ ಕಿರಣ ರಾಮನ ಮೇಲೆ ಬೀಳುವಂತೆ ವಿನ್ಯಾಸ ಮಾಡಿರುವ ಹಿನ್ನಲೆ ಮೂರ್ತಿ 8.5 ಅಡಿ ಎತ್ತರಕ್ಕೆ ನಿರ್ಧರಿಸಿದೆ. ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲು ನಿರ್ಧರಿಸಿರುವ ರಾಮನ ಮೂರ್ತಿಯೂ 5 ರಿಂದ 7 ವರ್ಷ ವಯಸ್ಸಿನ ಮಗುವಿನ ರೂಪದಲ್ಲಿರಲಿದೆ.
Advertisement
ಈ ಮೂರ್ತಿ ಆಕಾಶ ನೀಲಿ ಬಣ್ಣದಲ್ಲಿರಲಿದ್ದು, ವಿಗ್ರಹಕ್ಕೆ ಅಂತಹ ಕಲ್ಲನ್ನು ಆಯ್ಕೆ ಮಾಡಲಾಗುತ್ತದೆ. ಪದ್ಮಶ್ರೀ ಪುರಸ್ಕೃತ ಶಿಲ್ಪಿ ರಾಮಲಾಲಾ ವಿಗ್ರಹದ ಆಕಾರವನ್ನು ಮಾಡಲಿದ್ದಾರೆ. ಓರಿಸ್ಸಾದ ಹಿರಿಯ ಶಿಲ್ಪಿಗಳಾದ ಸುದರ್ಶನ್ ಸಾಹು ಮತ್ತು ವಾಸುದೇವ್ ಕಾಮತ್ ಮತ್ತು ಕರ್ನಾಟಕ ಮೂಲದ ರಾಮಯ್ಯ ವಾಡೇಕರ್ ಕೆತ್ತನೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಚಂಪತ್ ರೈ ತಿಳಿಸಿದರು. ಇದನ್ನೂ ಓದಿ: ಸ್ಯಾಂಟ್ರೋ ಟ್ರಾವೆಲ್ಸ್ ಹತ್ತಿದವರಿಗೆ ಸಿಡಿ ಭಯ- ರವಿ ಹತ್ರ ಸಿಡಿ ಇವೆಯಾ..!?
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k