Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ತಾಜ್ ಮಹಲ್‍ಗೂ ಮುನ್ನವೇ ನಿರ್ಮಾಣವಾಗಿತ್ತು ಕರ್ನಾಟಕದಲ್ಲೊಂದು ಪ್ರೇಮಸೌಧ, ಚಂಪಕ ಸರಸಿ!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | States | Karnataka | ತಾಜ್ ಮಹಲ್‍ಗೂ ಮುನ್ನವೇ ನಿರ್ಮಾಣವಾಗಿತ್ತು ಕರ್ನಾಟಕದಲ್ಲೊಂದು ಪ್ರೇಮಸೌಧ, ಚಂಪಕ ಸರಸಿ!

Karnataka

ತಾಜ್ ಮಹಲ್‍ಗೂ ಮುನ್ನವೇ ನಿರ್ಮಾಣವಾಗಿತ್ತು ಕರ್ನಾಟಕದಲ್ಲೊಂದು ಪ್ರೇಮಸೌಧ, ಚಂಪಕ ಸರಸಿ!

Public TV
Last updated: December 31, 2023 7:14 pm
Public TV
Share
2 Min Read
04 2
SHARE

ಷಹಜಹಾನ್ ತನ್ನ ಪತ್ನಿ ಮುಮ್ತಾಜ್ ಮರಣದ ನಂತರ ಆಗ್ರಾದಲ್ಲಿ ತಾಜ್ ಮಹಲ್ ನಿರ್ಮಿಸಿದ್ದು ಎಲ್ಲರಿಗೂ ಗೊತ್ತಿದೆ. ತಾಜ್ ಮಹಲ್ ನಿರ್ಮಾಣವಾಗುವ ಸುಮಾರು 50ವರ್ಷಗಳ ಮೊದಲೇ ಕೆಳದಿಯ ನಾಯಕರೊಬ್ಬರು ತಮ್ಮ ಪ್ರೀತಿಯ ಮಡದಿಯ ಮರಣದ ನಂತರ ಆಕೆಯ ನೆನಪಿಗಾಗಿ ಸುಂದರ ಸ್ಮಾರಕವನ್ನು ನಿರ್ಮಿಸಿದ್ದು ಹಲವರಿಗೆ ತಿಳಿದಿಲ್ಲ. ಸುಮಾರು 450 ವರ್ಷಗಳ ಹಿಂದೆಯೇ ಶಿವಮೊಗ್ಗ ಜಿಲ್ಲೆಯ ಆನಂದಪುರ ಸಮೀಪದ ಮಲಂದೂರಿನಲ್ಲಿ ತನ್ನ ಪ್ರೀತಿಯ ಪತ್ನಿಯ ಮರಣದ ನಂತರ ಕೆಳದಿಯ  ಅರಸ ವೆಂಕಪ್ಪ ನಾಯಕ ಸುಂದರವಾದ ಕೊಳವನ್ನು ನಿರ್ಮಿಸಿದ್ದ.

ದಟ್ಟ ಕಾಡಾಗಿದ್ದ ಮಲ್ಲಂದೂರಿನ ಮಧ್ಯ ಭಾಗದಲ್ಲಿ ನಿಸರ್ಗ ದತ್ತವಾದ ನೀರಿಗೆ ಚಂಪಕ ಕೊಳವನ್ನು (Champaka Sarasi) ನಿರ್ಮಿಸಿದ ಎಂಬ ಇತಿಹಾಸವಿದೆ. ಇದು ಸುಮಾರು 200 ಅಡಿ ಉದ್ದ, 200 ಅಡಿ ಅಗಲವಿದ್ದು, ಸುಮಾರು 50 ಅಡಿ ಅಳವಿದೆ. ಕೊಳದ ನಡುವೆ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ.

01 14

ಚಂಪಕ ಬಿಡಿಸಿದ ರಂಗೋಲಿಗೆ ಮನಸೋತ ಕೆಳದಿಯ ಅರಸ
ಚಂಪಕ ರಾಣಿ ಕೆಳದಿ ರಾಜ ವೆಂಕಟಪ್ಪ ನಾಯಕರ ರಾಣಿ, ಅವಳು ಬಿಡಿಸುತ್ತಿದ್ದ ರಂಗೋಲಿ ನೋಡಿ ಅದರಿಂದ ಆಕರ್ಷಿತರಾಗಿ ಅವಳನ್ನ ಮೋಹಿಸಿ ಮದುವೆ ಆಗುತ್ತಾರೆ. ಸುಂದರಿ ಚಂಪಕ ಬೇರೆ ಜಾತಿಯವಳೆಂಬ ಕಾರಣದಿಂದ ಅವಳನ್ನ ಪಟ್ಟದ ರಾಣಿ ಪರಿವಾರ ವಿರೋಧಿಸುತ್ತದೆ. ಮುಂದೆ ಇದೇ ಪಟ್ಟದ ರಾಣಿ ಭದ್ರಮ್ಮಾಜಿ ಅನಾರೋಗ್ಯಕ್ಕೆ ಕಾರಣವಾಯಿತು. ಮು0ದೆ ಅವರ ಮರಣಕ್ಕೂ ಕಾರಣವಾಯಿತು ಎಂಬ ಮಾತಿದೆ. ಇದರಿಂದ ಇಡೀ ರಾಜ್ಯದ ಪ್ರಜೆಗಳು ಚಂಪಕಳನ್ನ ನಿಂದಿಸುತ್ತಾರೆ, ಚೆ0ಪಕ ನಾಯಕರನ್ನ ತಲೆ ಕೆಡಿಸಿದ್ದಾಳೆ ಎಂಬ ಆರೋಪ ಮಾಡುತ್ತಾರೆ. ಇದೇ ಕಾರಣಕ್ಕೆ ಆಕೆ ಆತ್ಮಹತ್ಯೆಗೆ ಶರಣಾಗುತ್ತಾಳೆ.

02 13

ಚಂಪಕಾಳ ಮರಣದ ನಂತರ ಅರಸ, ಆಕೆಯ ನೆನಪು ಶಾಶ್ವತವಾಗಿ ಉಳಿಯಬೇಕೆ0ದು ಸುಂದರವಾದ ಕೊಳವನ್ನು ಕಲ್ಲಿನಲ್ಲಿ ಕಟ್ಟಿಸುತ್ತಾನೆ. ಕೊಳದ ಮಧ್ಯದಲ್ಲಿ ಈಶ್ವರ ದೇವಸ್ಥಾನ, ಅಲ್ಲಿಗೆ ಹೋಗಲು ಕಲ್ಲಿನ ಸಣ್ಣ ಸೇತುವೆ, ಕೊಳದ ಸುತ್ತು ಕಲ್ಲಿನ ಸೋಪಾನ, ಚಂಪಕಾಳ ಸಮಾಧಿ ಬಳಿ ಕಲ್ಲಿನಲ್ಲಿ ಸುಂದರವಾದ ಆನೆಯ ಶಿಲ್ಪಗಳು ಇದೆ.

ಸಂಪಿಗೆಯ ಮರಗಳ ಕಾಡಿಂದ ಚಂಪಕ ಹೆಸರು?
ಇಲ್ಲಿ ಹೆಚ್ಚು ಸಂಪಿಗೆ ಮರಗಳು ಇದ್ದ ಕಾರಣ ಚಂಪಕ ಸರಸು ಎಂದು ಹೆಸರು ಬಂದಿದೆ ಎಂದು ಸಹ ಹೇಳಲಾಗುತ್ತದೆ. ಕೊಳ ಮತ್ತು ಅದರ ವಿವಿಧ ಗುಣಲಕ್ಷಣಗಳ ಬಗ್ಗೆ ಮಾತನಾಡುವ ಅನೇಕ ಶಾಸನಗಳಿವೆ. ಲಿಂಗಾಯತ ಮಠದ ಕುರುಹುಗಳು ಸಹ ಇಲ್ಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಣಬಹುದು. ಚಂಪಕ ಸರಸಿ ಎಂಬುದು ರಾಣಿಯ ಹೆಸರಲ್ಲ ಆದರೆ ಅದು ಇಲ್ಲಿರುವ ಮಠದ ಹೆಸರು ಎಂದು ಹೇಳುವ ಕೆಲವು ಐತಿಹಾಸಿಕ ಗ್ರಂಥಗಳೂ ಇವೆ. ಕ್ರಿ.ಶ.1592ರ ಶಾಸನವೊಂದು ರಾಜ ಹಿರಿಯ ವೆಂಕಟಪ್ಪ ನಾಯಕನು ಚಂಪಕ ಸರಸಿ ಮಠಕ್ಕೆ ಗ್ರಾಮವನ್ನು ದಾನವಾಗಿ ನೀಡಿದನೆಂಬ ಉಲ್ಲೇಖವಿದೆ.

03 8

ಇತ್ತೀಚೆಗೆ ಕೆಲವು ವರ್ಷಗಳ ಹಿಂದೆ ಶಿಥಿಲಾವಸ್ಥೆಯಲ್ಲಿದ್ದ ಈ ಕೊಳವನ್ನು, ಚಿತ್ರನಟ ಯಶ್ ಅವರ ಯಶೋ ಮಾರ್ಗ ಸಂಸ್ಥೆಯ ಮೂಲಕ ಕೊಳ ಅಭಿವೃದ್ಧಿಪಡಿಸಲಾಗಿದೆ. ಸುಮಾರು 7 ತಿಂಗಳ ಕಾಲ ಕೆಲಸ ಮಾಡಿ ನವೀಕರಣ ಮಾಡಲಾಗಿದೆ.

ಹೋಗುವುದು ಹೇಗೆ?
ಚಂಪಕ ಸರಸಿಗೆ ಶಿವಮೊಗ್ಗದಿಂದ 50 ಕಿ.ಮೀ ಇದೆ. ಇಲ್ಲಿಗೆ ತಲುಪಲು ಅನಂದಪುರದ ವರೆಗೆ ಬಸ್ ಹಾಗೂ ರೈಲಿನ ವ್ಯವಸ್ಥೆ ಇದೆ. ಅನಂದಪುರದಿಂದ ಶಿಕಾರಿಪುರ ಮಾರ್ಗದ ಮಧ್ಯದಲ್ಲಿ ಬರುವ ಮಲಂದೂರಿನ ಮುಖ್ಯ ರಸ್ತೆಯಿಂದ ಒಳಗೆ ಅರ್ಧ ಕಿ.ಮೀ ದೂರದಲ್ಲಿ ಈ ಕೊಳ ಸಿಗುತ್ತದೆ.

TAGGED:Champaka SarasiKeladishivamoggaYasho Margaಆನಂದಪುರಕೆಳದಿ ಅರಸರುಚಂಪಕ ಸರಸಿಯಶೋ ಮಾರ್ಗ
Share This Article
Facebook Whatsapp Whatsapp Telegram

Cinema news

kavya gowda
ನಟಿ ಕಾವ್ಯ ಗೌಡ, ಪತಿ ಮೇಲೆ ಹಲ್ಲೆ ಆರೋಪ; ದೂರು ದಾಖಲು
Cinema Latest Main Post Sandalwood
Raghavendra Chitravani 1
ರಾಘವೇಂದ್ರ ಚಿತ್ರವಾಣಿಗೆ 50ರ ಸಂಭ್ರಮ – ಸಿನಿ ಗಣ್ಯರಿಂದ ಲೋಗೋ ಲಾಂಚ್
Cinema Latest Sandalwood Top Stories
Gilli Nata 6
ಚನ್ನಪಟ್ಟಣದಲ್ಲಿ ಗಿಲ್ಲಿ ಕ್ರೇಜ್ – ವೇದಿಕೆ ಏರಿದ ಅಭಿಮಾನಿಗಳ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ
Cinema Districts Karnataka Latest Ramanagara States Top Stories
Anantha Padmanabha
ಹಿಟ್‌ ಡೈಲಾಗ್‌ ರೈಟರ್‌ ಪ್ರಶಾಂತ್‌ ರಾಜಪ್ಪ ನಿರ್ದೇಶನದ ಚೊಚ್ಚಲ ಚಿತ್ರದ ಟೈಟಲ್ ರಿವೀಲ್
Cinema Latest Sandalwood

You Might Also Like

Ursula von der Leyen and Narendra Modi
Latest

ಐರೋಪ್ಯ ಒಕ್ಕೂಟದ ವ್ಯಾಪಾರ ಒಪ್ಪಂದ: ಭಾರತಕ್ಕೆ ಏನು ಅನುಕೂಲ?

Public TV
By Public TV
2 minutes ago
India EU Trade Deal 1
Latest

ಭಾರತ-ಯುರೋಪ್ ಒಕ್ಕೂಟ ವ್ಯಾಪಾರ ಒಪ್ಪಂದಕ್ಕೆ ಸಹಿ

Public TV
By Public TV
5 minutes ago
Criminal Behind Bomb Attack On Prison Convoy Shot Dead In Encounter In Tamil Nadu
Crime

ಪೊಲೀಸ್ ವಾಹನದ ಮೇಲೆ ಕಂಟ್ರಿ ಬಾಂಬ್ ಎಸೆದಿದ್ದ ಆರೋಪಿ ಎನ್‌ಕೌಂಟರ್‌ನಲ್ಲಿ ಹತ್ಯೆ

Public TV
By Public TV
35 minutes ago
SMG STUDENTS
Districts

ಭದ್ರಾವತಿ | ಶಾಲೆಯಲ್ಲಿ 10ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ – ಆಸ್ಪತ್ರೆಗೆ ದಾಖಲು

Public TV
By Public TV
2 hours ago
Byrathi Suresh
Bengaluru City

ಶಿಡ್ಲಘಟ್ಟ ಕೇಸ್‌ನಲ್ಲಿ ಕಾನೂನಿನಂತೆ ಕ್ರಮ: ಬೈರತಿ ಸುರೇಶ್

Public TV
By Public TV
2 hours ago
Modi India Europe Trade Deal
Bengaluru City

1 ಒಪ್ಪಂದ, 27 ಯುರೋಪ್‌ ಮಾರುಕಟ್ಟೆಗಳು – ಕರ್ನಾಟಕಕ್ಕೆ ಏನು ಪ್ರಯೋಜನ?

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?