ನವದೆಹಲಿ: ‘ದಿ ನ್ಯೂಸ್ ಮಿನಿಟ್’ನ ಸಹ ಸಂಸ್ಥಾಪಕಿ ಹಾಗೂ ಸಂಪಾದಕಿ ಧನ್ಯಾ ರಾಜೇಂದ್ರನ್ (Dhanya Rajendran) ಅವರಿಗೆ 2022ರ ಅತ್ಯುತ್ತಮ ಮಹಿಳಾ ಮಾಧ್ಯಮ ಪ್ರತಿನಿಧಿಯಾಗಿ ಚಮೇಲಿ ದೇವಿ ಜೈನ್ ಪ್ರಶಸ್ತಿಯನ್ನು (Chameli Devi Jain Award) ನೀಡಿ ಗೌರವಿಸಲಾಗಿದೆ.
ಚಮೇಲಿ ದೇವಿ ಜೈನ್ ಪ್ರಶಸ್ತಿ ಭಾರತೀಯ ಪತ್ರಿಕೋದ್ಯಮದ ಪ್ರಶಸ್ತಿಯಾಗಿದ್ದು, ಇದನ್ನು ಅತ್ಯುತ್ತಮ ಮಹಿಳಾ ಮಾಧ್ಯಮ ಪ್ರತಿನಿಧಿಗಳಿಗಾಗಿ ನೀಡಲಾಗುತ್ತದೆ. ಭಾರತದ ಸ್ವಾತಂತ್ರ್ಯ ಹೋರಾಟಗಾರ್ತಿ ಚಮೇಲಿ ದೇವಿ ಜೈನ್ ಅವರ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಚಮೇಲಿ ದೇವಿ ಭಾರತದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಜೈಲಿಗೆ ಹೋಗಿದ್ದ ಮೊದಲ ಜೈನ ಮಹಿಳೆಯಾಗಿದ್ದಾರೆ.
Advertisement
Advertisement
ಶಿಕ್ಷಣ ತಜ್ಞರಾದ ಪುರುಷೋತ್ತಮ್ ಅಗರ್ವಾಲ್ ಅವರು ಧನ್ಯಾ ಅವರಿಗೆ ಚಮೇಲಿ ದೇವಿ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದಾರೆ. ಪ್ರಶಸ್ತಿ ಪಡೆದ ಬಳಿಕ ಮಾತನಾಡಿದ ಧನ್ಯಾ, ಈ ದೇಶದಲ್ಲಿ ಡಿಜಿಟಲ್ ಮಾಧ್ಯಮ ಸಂಸ್ಥೆಗಳು ಅತ್ಯಾಧುನಿಕ ಪತ್ರಿಕೋದ್ಯಮವನ್ನು ಹೇಗೆ ನಿರ್ಮಿಸುತ್ತಿದೆ ಹಾಗೂ ಅದಕ್ಕಾಗಿ ಕೆಲಸ ಮಾಡುತ್ತಿರುವವರು ಹೇಗೆ ಶೋಷಣೆಗೆ ಒಳಗಾಗುತ್ತಿದ್ದಾರೆ ಎಂಬುದರ ಕುರಿತು ಮಾತನಾಡಿದ್ದಾರೆ. ಇದನ್ನೂ ಓದಿ: ಎಸ್.ಎಂ ಕೃಷ್ಣರಿಗೆ ಪದ್ಮವಿಭೂಷಣ ಪ್ರಶಸ್ತಿ ಪ್ರದಾನ
Advertisement
Advertisement
ಡಿಜಿಟಲ್ ಮಾಧ್ಯಮ ಪತ್ರಕರ್ತರಿಗೆ ಯಾವುದೇ ಮಾನ್ಯತೆ ಇಲ್ಲ. ಸರ್ಕಾರ ತಂದಿರುವ ಡಿಜಿಟಲ್ ಮೀಡಿಯಾ ನಿಯಮಗಳು ನಮ್ಮನ್ನು ಮತ್ತಷ್ಟು ಕುಗ್ಗಿಸಿದೆ. ನಮ್ಮ ವರದಿಗಾರರಿಗೆ ಬಾಗಿಲು ತೆರೆಯುವ ದೊಡ್ಡ ಮಾಧ್ಯಮ ಬೆಂಬಲವಿಲ್ಲ. ನಾವು ಶಕ್ತಿ ಮತ್ತು ಪರಂಪರೆಯ ಪರಿಸರ ವ್ಯವಸ್ಥೆಯ ಭಾಗವಾಗಿಲ್ಲ. ಇದೆಲ್ಲದರ ಹೊರತಾಗಿಯೂ ಡಿಜಿಟಲ್ ಮೀಡಿಯಾ ವೇದಿಕೆಗಳು ಈಗ ಅನೇಕ ಕಠಿಣ ಕಥೆಗಳನ್ನು ಮುರಿದಿವೆ. ಈ ಸಮಯದಲ್ಲಿ ನಾವು ಜನರ ಧ್ವನಿಯಾಗಿದ್ದೇವೆ. ಅನೇಕ ಬಹಿರಂಗ ಮತ್ತು ತನಿಖಾ ತುಣುಕುಗಳು ಈಗ ದೊಡ್ಡದಾದವುಗಳಿಗೆ ಹೋಲಿಸಿದರೆ ಸಣ್ಣ ಡಿಜಿಟಲ್ ಸ್ವತಂತ್ರ ಸೈಟ್‌ಗಳಿಗೆ ದಾರಿ ಕಂಡುಕೊಳ್ಳುತ್ತವೆ. ನಾನು ಈ ಪರಿಸರ ವ್ಯವಸ್ಥೆಯ ಭಾಗವಾಗಿರುವುದಕ್ಕೆ ಕೃತಜ್ಞಳಾಗಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: BIFFES 2023- ಬೆಂಗಳೂರು ಚಿತ್ರೋತ್ಸವ SCHEDULE : ಮಾರ್ಚ್ 24 ರಿಂದ 30ರವರೆಗೆ