ಬೆಂಗಳೂರು: ಚಾಮರಾಜಪೇಟೆಯಲ್ಲಿ ಗಣೇಶನ ಗಲಾಟೆ ನಿಲ್ಲುವಂತೆ ಕಾಣುತ್ತಿಲ್ಲ. ಶಾಸಕ ಜಮೀರ್ ಅಹ್ಮದ್ ಖಾನ್ ಕಚೇರಿಯಲ್ಲಿ ಇಂದು ಗಣೇಶೋತ್ಸವ ನಡೆಸಲು ಮುಂದಾಗಿದ್ದು, ಇದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
ಹೌದು ಜಮೀರ್ ಅಹ್ಮದ್ ಖಾನ್ ಅವರು ಇಂದು ಗಣೇಶ ಪ್ರತಿಷ್ಠಾಪನೆಗೆ ಮುಂದಾಗಿದ್ದಾರೆ. ಚಾಮರಾಜಪೇಟೆಯ ವರ್ತಕರ ಬೀದಿ 4ನೇ ಮುಖ್ಯರಸ್ತೆಯಲ್ಲಿರುವ ತಮ್ಮ ಕಛೇರಿಯಲ್ಲಿ ಬೆಳಗ್ಗೆ 9.15 ರಿಂದ 10 ಗಂಟೆಯೊಳಗಿನ ಶುಭಲಗ್ನದಲ್ಲಿ ವಿದ್ಯಾಗಣಪತಿ ಪ್ರತಿಷ್ಠಾಪನೆಗೆ ಸಿದ್ಧತೆ ನಡೆಸಿದ್ದಾರೆ. ತಮ್ಮ ಕಛೇರಿಯಲ್ಲೇ ಲೈಟಿಂಗ್ಸ್, ಫ್ಲೆಕ್ಸ್ ಎಲ್ಲವನ್ನು ಸಿದ್ದಪಡಿಸಿರುವ ಜಮೀರ್, ಸಂಜೆ 4 ಗಂಟೆಗೆ ಅದ್ಧೂರಿ ಮೆರವಣಿಗೆ ಮೂಲಕ ಗಣಪತಿ ಮೂರ್ತಿ ವಿಸರ್ಜನೆ ಮಾಡಲಿದ್ದಾರೆ. ಇದನ್ನೂ ಓದಿ: ನೆಲಮಂಗಲದಲ್ಲಿ ಹೆದ್ದಾರಿಗೆ ನುಗ್ಗಿದ ನೀರು – ಕಿಲೋಮೀಟರ್‌ಗಟ್ಟಲೇ ಟ್ರಾಫಿಕ್ ಜಾಮ್
Advertisement
Advertisement
ಸದ್ಯ ಈ ವಿಚಾರವಾಗಿ ಸ್ಥಳೀಯರು ಜಮೀರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 4 ಬಾರಿ ಗೆದ್ದರು ಗಣೇಶನ ಮೇಲೆ ಇಲ್ಲದ ಪ್ರೀತಿ ಈಗ್ಯಾಕೆ ಹೆಚ್ಚಾಗಿದೆ. ಈ ಸೌಹಾರ್ದತೆ ನಿಜಕ್ಕೂ ಇವರ ಮನಸ್ಸಲ್ಲಿದ್ದಿದ್ದರೆ ಮೈದಾನದಲ್ಲೇ ಗಣೇಶ ಕೂರಿಸಲು ಮುಂದಾಗುತ್ತಿದ್ದರು. ಮೈದಾನದಲ್ಲಿ ಗಣೇಶನ ಕೂರಿಸೋಕೆ ಬಿಡದ ಇವರು, ಕಛೇರಿಯಲ್ಲಿ ಗಣೇಶನನ್ನು ಕೂರಿಸಿ ಮುಂಬರುವ ಚುನಾವಣೆಗೆ ಹಿಂದೂಗಳನ್ನು ಓಲೈಕೆ ಮಾಡಲು ಬಣ್ಣ ಹಾಕದೇ ನಾಟಕ ಮಾಡುತ್ತಿದ್ದಾರೆಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಚಾಮರಾಜಪೇಟೆಯಲ್ಲಿ ನಾಳೆ ಜಮೀರ್ ನೇತೃತ್ವದಲ್ಲೇ ಗಣೇಶೋತ್ಸವ!