ಚಾಮರಾಜನಗರ: ಬಸ್ ಹಾಗೂ ಟಿಪ್ಪರ್ ನಡುವೆ ಡಿಕ್ಕಿಯಾಗಿದ್ದು, ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಈ ಘಟನೆ ನಡೆದಿದೆ. ಗುಂಡ್ಲುಪೇಟೆ -ಮೈಸೂರು ಹೆದ್ದಾರಿಯ ಹೊರವಲಯದಲ್ಲಿ ಬಸ್ ಮತ್ತು ಟಿಪ್ಪರ್ ಮುಖಾಮುಖಿಯಾಗಿದ್ದು, ಬಸ್‍ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
Advertisement
Advertisement
ಬಿಳಿಕಲ್ಲು ತುಂಬಿದ ಟಿಪ್ಪರ್ ಲಾರಿಯ ಅತಿ ವೇಗವೇ ಅನಾಹುತಕ್ಕೆ ಕಾರಣವೆಂದು ಆರೋಪಿಸಲಾಗಿದೆ. ಘಟನೆಯಿಂದಾಗಿ ಬಸ್ಸಿನ ಕಿಟಕಿ, ಗಾಜುಗಳು ಪುಡಿಯಾಗಿದೆ. ಅಪಘಾತದ ರಭಸಕ್ಕೆ ಸುಮಾರು 5ಕ್ಕೂ ಹೆಚ್ಚು ಮಂದಿ ಪ್ರಯಾಣಿಕರಿಗೆ ಗಾಯಗಳಾಗಿವೆ. ಎದುರು ಬರುತ್ತಿದ್ದ ಟಿಪ್ಪರ್ ರಭಸ ನೋಡಿ, ಬಸ್ ಚಾಲಕ ಪಕ್ಕಕ್ಕೆ ವಾಹನ ಚಲಾಯಿಸಿದ್ದಾರೆ. ಇದರಿಂದಾಗಿ ಭಾರೀ ಅನಾಹುತ ಆಗುವುದು ತಪ್ಪಿದೆ. ಇದನ್ನೂ ಓದಿ: ವಿದ್ಯಾರ್ಥಿಗೆ ಸೋಂಕು – ಶಾಲೆಯ ಎಲ್ಲ ಮಕ್ಕಳಿಗೂ ಕೊರೊನಾ ಟೆಸ್ಟ್
Advertisement
ಅಪಘಾತದಲ್ಲಿ ಬಸ್ ಚಾಲಕ ಶ್ಯಾಮುಗೆ ಕೈ ಮತ್ತು ಬೆನ್ನಿನ ಭಾಗಕ್ಕೆ ತೀವ್ರ ಪೆಟ್ಟುಗಳಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳುಗಳನ್ನು ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಗಿದೆ. ಬಸ್‍ನ ಮುಂಬದಿಯ ಪಕ್ಕಕ್ಕೆ ಟಿಪ್ಪರ್ ಗುದ್ದಿದೆ. ಘಟನೆ ಕುರಿತಾಗಿ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.