ಬೆಂಗಳೂರು: ಈದ್ಗಾ ಮೈದಾನ ವಿವಾದಕ್ಕೆ ಸಂಬಂಧಿಸಿಂದತೆ ನಾಳೆ ಚಾಮರಾಜಪೇಟೆ ಬಂದ್‍ಗೆ ಕರೆ ಕೊಡಲಾಗಿದೆ.
ಹೌದು. ನಾಳೆ ಬೆಳಗ್ಗೆ 8 ರಿಂದ ಸಂಜೆ 5 ಗಂಟೆ ತನಕ ಚಾಮರಾಜಪೇಟೆ ಬಂದ್ ಮಾಡುವಂತೆ ನಾಗರೀಕ ಒಕ್ಕೂಟ ಕರೆ ಕೊಟ್ಟಿದೆ. ಪ್ರತಿಭಟನೆಗೆ ಹಿಂದೂ ಸಂಘಟನೆಗಳು ಕೂಡ ಸಾಥ್ ನೀಡುತ್ತಿವೆ. ಈ ಮೂಲಕ ಬಂದ್ ತೀವೃಗೊಳಿಸಲು ಸಂಘಟನೆಗಳು ಕೂಡ ಮುಂದಾಗಿವೆ.
Advertisement
Advertisement
ಚಾಮರಾಜಪೇಟೆ ವಕ್ಫ್ ಗೆ ಸೇರಬಾರದು ಅದು ಆಟದ ಮೈದಾನವಾಗಿಯೇ ಉಳಿಯಬೇಕು ಎನ್ನುವ ನಿಟ್ಟಿನಲ್ಲಿ ಈ ಬಂದ್ ನಡೆಯಲಿದೆ. ವ್ಯಾಪಾರ ಚಟುವಟಿಕೆಯ ಕೇಂದ್ರವಾಗಿರುವ ಬೆಂಗಳೂರಿನ ಚಾಮರಾಜಪೇಟೆ ಬಂದ್‍ಗೆ ಈಗಾಗಲೇ ನಾಗರೀಕ ಒಕ್ಕೂಟ ಸಕಲ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ. ಈಗಾಗಲೇ ಎಲ್ಲಾ ಅಂಗಡಿ ಮುಗ್ಗಟ್ಟು ಮನೆ ಮನೆಗಳಿಗೆ ಕರ ಪತ್ರ ಹಂಚಲಾಗಿದೆ.
Advertisement
Advertisement
ಚಾಮರಾಜಪೇಟೆ ಅಂಗಡಿಗಳ ಗೋಡೆ, ಬ್ಯಾಂಕ್‍ಗಳ ಮುಂದೆ ಮುಂದೆ ಬಂದ್ ಗೆ ಸಂಪೂರ್ಣ ಬೆಂಬಲ ನೀಡುವಂತೆ ಪೋಸ್ಟರ್ ಅಂಟಿಸಲಾಗಿದೆ. ಆಟೋಗಳ ಮೂಲಕ ಬಂದ್ ಬಗ್ಗೆ ಅನೌನ್ಸ್‍ಮೆಂಟ್ ಮಾಡಲಾಗುತ್ತಿದೆ. ಇಷ್ಟು ಮಾತ್ರವಲ್ಲದೆ ಬಿಬಿಎಂಪಿ ಕಚೇರಿಗೂ ಬಿತ್ತಿ ಪತ್ರ ಅಂಟಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಇಂದಿನಿಂದಲೇ ಕಣ್ಗಾವಲು ಇರಿಸಿವೆ.
ಬಂದ್ ಸಂಬಂಧ ಮಾತನಾಡಿದ ಲಹರಿ ವೇಲು, ಜಮೀರ್ ಅವರೇ ನಾವು ಇಲ್ಲಿನ ಮೂಲ ನಿವಾಸಿಗಳು. ಪ್ರತಿಭಟನೆಗೆ ಕರೆ ಕೊಟ್ಟವರು ಮೂಲ ನಿವಾಸಿಗಳು ಅಲ್ಲ ಅಂತಿರಲ್ಲ ನಾನು ಹುಟ್ಟಿ ಬೆಳೆದಿದ್ದು ಇಲ್ಲೆ. ಸತ್ರೂ ಇಲ್ಲಿನ ಸ್ಮಶಾನಕ್ಕೇ ತರಬೇಕು. ಈ ಮೈದಾನಕ್ಕೆ ಜಯಚಾಮರಾಜೇಂದ್ರ ಒಡೆಯರ್ ಹೆಸರು ನಾಮಕರಣ ಆಗಬೇಕು. ಗಣೇಶೋತ್ಸವ ಆಚರಣೆ ಮಾಡಬೇಕು ಎಂದು ಶಾಸಕರ ವಿರುದ್ಧ ಕಿಡಿಕಾರಿ ನಾಳೆಯ ಬಂದ್ ಯಶಸ್ಸಿಯಾಗುತ್ತೆ ಅಂತ ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಮದ್ಯದ ದೊರೆ ವಿಜಯ್ ಮಲ್ಯಗೆ 4 ತಿಂಗಳು ಜೈಲು: ಸುಪ್ರೀಂ ಕೋರ್ಟ್ ತೀರ್ಪು
ಜಮೀರ್ ಚೇಲಾಗಳು ಬಂದ್ ಇಲ್ಲ ಅಂತಾ ಹೇಳ್ತಾ ಇದ್ದಾರೆ. ನಮ್ಮ ಆಕ್ರೋಶದ ಕಟ್ಟೆ ಒಡೆದಿದೆ. ನಾಳೆ ಬಂದ್ ಮಾಡೇ ಮಾಡ್ತೀವಿ. ರ್ಯಾಲಿ ಮಾಡೇ ಮಾಡ್ತೀವಿ. ಪೊಲೀಸ್ ಅಡ್ಡಿ ಪಡಿಸಿದ್ರೂ ಕ್ಯಾರೇ ಎನ್ನಲ್ಲ. ನಮಗೆ ನ್ಯಾಯ ಬೇಕು. ಸಾಕು ಈ ಜಮೀರ್ ಕಡೆಯ ದೌರ್ಜನ್ಯ ಎಂದು ನಾಗರೀಕ ಒಕ್ಕೂಟ ಕಿಡಿಕಾರಿದೆ. ಇತ್ತ ವ್ಯಾಪಾರಿಗಳು ಪ್ರತಿಕ್ರಿಯಿಸಿ, ಒಂದು ದಿನ ವ್ಯಾಪಾರ ಹೋದ್ರೂ ಪರವಾಗಿಲ್ಲ. ನಾವ್ ಬಂದ್ ಮಾಡ್ತೀವಿ. ನಮ್ಮ ಈ ಏರಿಯಾಗೆ ಇದೊಂದೇ ಆಟದ ಮೈದಾನ ಇರುವುದು. ಹೀಗಾಗಿ ಇದನ್ನು ಉಳಿಸಿಕೊಳ್ಳಬೇಕು ಎಂದು ಹೇಳುವ ಮೂಲಕ ಬೆಂಬಲ ಸೂಚಿಸಿದ್ದಾರೆ.
ಜಮೀರ್ ಗೆ ಮನವಿ:
ಇದೇ ವೇಳೆ ಹಿಂದೂ ಸಂಘಟನೆಯವರು ಜಮೀರ್ ಕಚೇರಿಯೊಳಗೆ ತೆರಳಿ ಬಂದ್ ಗೆ ಬೆಂಬಲ ಕೋರಿದ್ದಾರೆ. ಈ ವೇಳೆ ಜಮೀರ್ ಇಲ್ಲದ ಕಾರಣ ಅವರ ಪಿಎ ಬಳಿ ಸಪೋರ್ಟ್ ಮಾಡುವಂತೆ ಹೇಳಿ ಬಂದಿದ್ದಾರೆ.