ಮಹಿಳೆ ನಿಗೂಢ ಸಾವಿಗೆ ಟ್ವಿಸ್ಟ್- ತಾಯಿ ಹತ್ಯೆಗೈದು ಮಗಳನ್ನು ಅಪಹರಿಸಿದ್ನಾ ಪ್ರಿಯಕರ?

Public TV
1 Min Read
KOLLEGAL DEATH

ಚಾಮರಾಜನಗರ: ಕೊಳ್ಳೇಗಾಲದಲ್ಲಿ (Kollegala) ನಡೆದಿದ್ದ ಒಂಟಿ ಮಹಿಳೆಯ (Woman) ಅನುಮಾನಾಸ್ಪದ ಸಾವು ಪ್ರಕರಣ ದಿನ ಕಳೆದಂತೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ತಾಯಿಯ ಸಾವಿನ ಬಳಿಕ ಆಕೆಯ 6 ವರ್ಷದ ಮಗಳು ನಾಪತ್ತೆಯಾಗಿದ್ದು, ಮಹಿಳೆಯ ಪ್ರಿಯಕರನೇ ಹತ್ಯೆಗೈದು ಆಕೆಯ ಮಗಳನ್ನು ಅಪಹರಿಸಿದ್ದಾನೆ ಎಂಬ ಅನುಮಾನ ವ್ಯಕ್ತವಾಗಿದೆ.

ಶನಿವಾರ ಸಂಜೆ ಕೊಳ್ಳೆಗಾಲದ ಆದರ್ಶನಗರದಲ್ಲಿ ಮಹಿಳೆ ರೇಖಾ ಎಂಬಾಕೆಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆಕೆಯ 6 ವರ್ಷದ ಮಗಳು ಮಾನ್ವಿತ ಈಗ ಕಾಣೆಯಾಗಿದ್ದಾಳೆ. ಅಸಲಿಗೆ ಮಹಿಳೆಯ ಸಾವಿನ ಪ್ರಕರಣ ಬೆಳಕಿಗೆ ಬಂದಿದ್ದೇ ಬಲು ರೋಚಕವಾಗಿದೆ. ಕಳೆದ ಒಂದು ವಾರದಿಂದ ಮಗಳು ಶಾಲೆಗೆ ಗೈರಾಗಿದ್ದಾಳೆಂದು ಮಾಹಿತಿ ತಿಳಿಯಲು ಶಾಲೆಯ ಶಿಕ್ಷಕ ರೇಖಾಳಿಗೆ ಕರೆ ಮಾಡಿದ್ದಾರೆ. ಎಷ್ಟೇ ಕರೆ ಮಾಡಿದರು ಕರೆ ಸ್ವೀಕರಿಸದಿದ್ದಾಗ ಖುದ್ದು ಶಿಕ್ಷಕ ಮನೆಗೆ ಭೇಟಿ ಕೊಟ್ಟು ಮಾಹಿತಿ ಪಡೆಯಲು ಮುಂದಾದಾಗ ಆಗ ಸಾವಿನ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ: ವಸತಿ ಶಾಲೆಯಲ್ಲಿ ಬಾಲಕಿಯರ ಬಟ್ಟೆ ಬದಲಿಸುವ ವೀಡಿಯೋ ತೆಗೆದ ಸಿಬ್ಬಂದಿ – ಪೋಷಕರ ಆಕ್ರೋಶ

ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಕೆಇಬಿ ಲೈನ್ ಮ್ಯಾನ್ ನಾಗೇಂದ್ರ ಎಂಬಾತನ ವಿಚಾರ ಆಕೆಯ ಪತಿ ಸುನೀಲ್‍ಗೆ ತಿಳಿದು, ಆತ ಆತ್ಮಹತ್ಯೆ ಮಾಡಿಕೊಂಡಿದ್ದ. ಇದಾದ ಬಳಿಕ ಆಗಿನಿಂದಲೂ ಇಬ್ಬರೂ ಅನ್ಯೂನ್ಯವಾಗಿದ್ದರು. ಕೆಲವು ದಿನಗಳಿಂದ ಮಹಿಳೆಯನ್ನು ಮದುವೆ ಆಗುವುದಾಗಿ ನಾಗೇಂದ್ರ ಹೇಳಿದ್ದ. ಅಷ್ಟೇ ಅಲ್ಲದೇ ಕೊಳ್ಳೇಗಾಲದಲ್ಲಿ ಪ್ರತ್ಯೇಕವಾದ ಮನೆ ಮಾಡಿ ಇಟ್ಟಿದ್ದ. ಕೆಲವು ದಿನಗಳ ಹಿಂದೆ ಇಬ್ಬರ ನಡುವೆ ಜಗಳ ನಡೆದಿದ್ದು, ಇದೇ ವಿಚಾರಕ್ಕೆ ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ. ಇಷ್ಟೇ ಅಲ್ಲದೇ ಮಹಿಳೆಯ ಮಗಳನ್ನು ಅಪಹರಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಇದನ್ನೂ ಓದಿ: ವೀರ್ ಸಾವರ್ಕರ್ ಎಂದರೆ ಆನೆ, ನಾಯಿ ನರಿ ಮಾತಿಗೆಲ್ಲ ಅದು ತಲೆಕೆಡಿಸಿಕೊಳ್ಳಲ್ಲ: ಕಾಂತೇಶ್

Share This Article